ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ; 'ಕುಮಾರಸ್ವಾಮಿಗೆ ಅಂಗಿ, ಪಂಚೆ, ಜುಬ್ಬಾ ಕಳುಹಿಸೋಣ'

ಬೆಂಗಳೂರು, ಜೂನ್‌ 18: ರಾಜ್ಯದಲ್ಲಿ ಮುಂದೆ ಬಿಜೆಪಿ- ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರಿಗೆ ಯಾವ ರೀತಿಯ ಪಂಚೆ, ಅಂಗಿ, ಜುಬ್ಬಾ, ಪ್ಯಾಂಟ್, ಮೇಲಂಗಿ ಬೇಕು ಎಂಬುದನ್ನು ಕಳುಹಿಸಿ ಕೊಡೋಣ. ಮಾಧ್ಯಮದವರ ಕೈಗೆ ಇವೆಲ್ಲವನ್ನು ನೀಡುತ್ತೇನೆ. ನೀವೇ ಅವರಿಗೆ ತಲುಪಿಸಿಬಿಡಿ ಎಂದು ಕುಹಕವಾಡಿದರು.

ಕಮಲಹಾಸನ್ ನಟನೆಯ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಸಂಬಂಧ 24 ಗಂಟೆಯೊಳಗೆ ಸರ್ಕಾರ ವಿವರಣೆ ನೀಡಬೇಕು ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನದ ಕುರಿತು ಮಾತನಾಡಿ, ಕಮಲ ಹಾಸನ್ ವಿಚಾರದಲ್ಲಿ ನ್ಯಾಯಲಯ ನೀಡಿರುವ ಆದೇಶವನ್ನು ನಾವೆಲ್ಲರೂ ಗೌರವದಿಂದ ಪಾಲನೆ ಮಾಡಬೇಕು. ನಾವು ನಮ್ಮ ಮಿತಿಯನ್ನು ಮೀರಬಾರದು, ಶಾಂತಿಯಿಂದ ಇರಬೇಕು ಎಂದು ಕನ್ನಡಪರ ಸಂಘ- ಸಂಸ್ಥೆಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಯಾರೂ ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನಮ್ಮ ರಾಜ್ಯ ಶಾಂತಿ ಪ್ರಿಯ ರಾಜ್ಯ ಎಂದರು.

DK Shivakumar response to HD Kumaraswamy statement that a coalition government will be in power

ಅವರ ಅಭಿಪ್ರಾಯ ಹೇಳುವುದು ತಪ್ಪಲ್ಲ. ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿದ್ದೇವೆ. ಎಲ್ಲಾ ಜಾತಿ, ಸಂಸ್ಕೃತಿ, ಧರ್ಮಗಳನ್ನು ಬೆಂಗಳೂರು ಅರಗಿಸಿಕೊಂಡಿದೆ. ಬೆಂಗಳೂರು ಅಂತರರಾಷ್ಟ್ರೀಯ ನಗರ, ಎಲ್ಲರಿಗೂ ಬೇಕಾದ ನಗರ. ಕನ್ನಡದ ಜನರು ಹೃದಯ ಶ್ರೀಮಂತಿಕೆ ತೋರಿಸಿಕೊಂಡು ಬಂದಿದ್ದಾರೆ. ನಮ್ಮ ಸ್ವಾಭಿಮಾನವನ್ನು ಯಾರೂ ಸಹ ಹಾಳು ಮಾಡಲು ಸಾಧ್ಯವಿಲ್ಲ. ಕನ್ನಡದ ಪರ ನಾವಿದ್ದೇವೆ. ಆದರೆ ನ್ಯಾಯಲಯದ ತೀರ್ಪಿಗೆ ಗೌರವ ನೀಡಲೇ ಬೇಕು ಎಂದು ತಿಳಿಸಿದರು.

ಐಶ್ವರ್ಯಾ ಗೌಡ ಅವರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಸುರೇಶ್ ಅವರಿಗೆ ಇಡಿ ಸಮನ್ಸ್ ನೀಡಿರುವ ಕುರಿತು ಡಿ ಕೆ ಶಿವಕುಮಾರ್‌ ಅವರು ಮಾತನಾಡಿ, ಡಿ.ಕೆ.ಸುರೇಶ್ ಇಡಿ ತನಿಖೆಗೆ ಸಹಕಾರ ನೀಡಲಿದ್ದಾರೆ ಹಾಗೂ ತಮ್ಮ ಹೇಳಿಕೆಯನ್ನು ಸಲ್ಲಿಸಲಿದ್ದಾರೆ. ನಮ್ಮ ಹೆಸರನ್ನು ಅಪರಿಚಿತರು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು. ಶಿವಕುಮಾರ್ ತಂಗಿ ಎಂದೇಳಿಕೊಂಡು ಮೋಸ ಮಾಡಿರುವ ಬಗ್ಗೆ ವಂಚನೆಗೆ ಒಳಗಾಗಿರುವ ಮೂರು ನಾಲ್ಕು ಜನರು ನನ್ನ ಬಳಿ ಬಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಎಂದು ನಾವೂ ಸಹ ಹೇಳಿದ್ದೇವೆ. ಆದ ಕಾರಣ ನಾವು ಇಡಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ" ಎಂದು ಹೇಳಿದರು.

ಸುರೇಶ್ ಅವರು ವಿಚಾರಣೆಗೆ ಹಾಜರಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಈ ದೇಶದ ಕಾನೂನಿಗೆ, ವಿಚಾರಣೆಗಳಿಗೆ ನಾವು ಗೌರವ ನೀಡುತ್ತೇವೆ. ಮೋಸ ಮಾಡುವ ವ್ಯಕ್ತಿಗಳ ವಿರುದ್ಧದ ತನಿಖೆಗೆ ನಾವು ಸಹಕಾರ ನೀಡಲು ಬದ್ದರಾಗಿದ್ದೇವೆ. ಜನರಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಡಿ.ಕೆ.ಸುರೇಶ್ ಹಾಗೂ ಶಿವಕುಮಾರ್ ಮಾಡುತ್ತಾರೆ. ಸಹೋದರ ಡಿ.ಕೆ.ಸುರೇಶ್ ಅವರ ಮನೆ ಬಾಗಿಲಿಗೆ ಇಡಿಯವರು ಸಮನ್ಸ್ ಅನ್ನು ಅಂಟಿಸಿ ಹೋಗುತ್ತೇವೆ ಎಂದರಂತೆ. ಅದಕ್ಕೆ ನಾನು ಸ್ವೀಕರಿಸಿ ಎಂದು ಹೇಳಿದ್ದೇನೆ. ಸಮನ್ಸ್ ನೀಡಲು ಬಂದಾಗ ಸಹೋದರ ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+