Breaking; ಇಡಿ ವಿಚಾರಣೆ ಮುಗಿಸಿ ಟ್ವೀಟ್ ಮಾಡಿದ ಡಿಕೆಶಿ

ಬೆಂಗಳೂರು, ಅಕ್ಟೋಬರ್ 07; ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಎದುರಿಸಿದರು. ಇಡಿ ವಿಚಾರಣೆ ಮುಗಿಸಿದ ಬಳಿಕ ಡಿಕೆಶಿ ಟ್ವೀಟ್ ಮಾಡಿದರು.

ಶುಕ್ರವಾರ ಯಂಗ್ ಇಂಡಿಯಾಗೆ ದೇಣಿಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಸುಮಾರು 4 ಗಂಟೆಗಳ ಕಾಲ ಇಡಿ ವಿಚಾರಣೆ ಎದುರಿಸಿದರು. ಗುರುವಾರವೇ ಇಬ್ಬರಿಗೂ ವಿಚಾರಣೆಗೆ ಬರುವಂತೆ ಇಡಿ ಸಮನ್ಸ್ ನೀಡಿತ್ತು.

DK Shivakumar Leaves ED Office After 4 Hours Of Questioning

ಇಡಿ ಅಧಿಕಾರಿಗಳು ಪ್ರತ್ಯೇಕವಾಗಿ ಡಿ. ಕೆ. ಶಿವಕುಮಾರ್ ಮತ್ತು ಡಿ. ಕೆ. ಸುರೇಶ್ ವಿಚಾರಣೆ ನಡೆಸಿದರು. ಅಗತ್ಯವಿದ್ದಾಗ ಮತ್ತೆ ವಿಚಾರಣೆಗೆ ಆಗಮಿಸಬೇಕು ಎಂದು ಸೂಚನೆ ನೀಡಲಾಗಿದೆ.

ನವದೆಹಲಿಯಲ್ಲಿ ಇಡಿ ವಿಚಾರಣೆ ಎದುರಿಸಿದ ಬಳಿಕ ಡಿ. ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. 'ರಾಜಕೀಯ ಕದನಗಳನ್ನು ರಾಜಕೀಯ ರಣರಂಗದಲ್ಲಿಯೇ ನಡೆಸಬೇಕು. BJP ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಿ, ಬೆದರಿಸಲು ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಇದಕ್ಕೆ ಮೇ 2023 ರಲ್ಲಿ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ. ED ಮೂಲಕ ನಿರುದ್ಯೋಗ, ಬೆಲೆ ಏರಿಕೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎನ್ನುವುದು BJPಗೆ ಅರಿವಾಗಬೇಕಿದೆ' ಎಂದು ಹೇಳಿದ್ದಾರೆ.

ಇಡಿ ವಿಚಾರಣೆ ಮುಗಿಸಿದ ಬಳಿಕ ಇಡಿ ಕಚೇರಿ ಬಳಿ ಮಾತನಾಡಿದ ಡಿ. ಕೆ. ಶಿವಕುಮಾರ್, "ಇವತ್ತಿನ ವಿಚಾರಣೆ ಮುಗಿದಿದೆ. ಕೆಲವು ಮಾಹಿತಿಗಳನ್ನು ಕೇಳಿದ್ದಾರೆ. ಕೆಲವು ಪೇಮೆಂಟ್‌ಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ನಾನು ತಿಳಿಸುತ್ತೇನೆ ಎಂದು ಹೇಳಿದ್ದೇನೆ. ನಮ್ಮ ಸಂಸ್ಥೆಗಳ, ಕುಟುಂಬದ ಕೆಲವು ದಾಖಲೆಗಳನ್ನು ಕೇಳಿದ್ದಾರೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+