ಯೋಗೇಶ್ವರ್ ಗೆ ಸೆಡ್ಡು ಹೊಡೆಯೋಕೆ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶ

Posted By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಅಕ್ಟೋಬರ್ 18: ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ ಬಳಿಕ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನ ಶಕ್ತಿ ಪ್ರದರ್ಶನ ಮಾಡಿದರು.

ನಿನ್ನೆ(ಅ.17) ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ದೊಡ್ಡಮಳೂರು ಸಮೀಪದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಸಮಾವೇಶವನ್ನು ನಡೆಸಿದರು. ಶಾಸಕ ಯೋಗೇಶ್ವರ್ ಕಾಂಗ್ರೆಸ್ ತೊರೆಯುವ ಮುನ್ನವೇ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಿಗದಿಯಾಗಿತ್ತು.

ಶಾಸಕ ಯೋಗೇಶ್ವರ್ ಕಾರ್ಯಕರ್ತರ ಸಮಾವೇಶದ ಉಸ್ತುವಾರಿ ವಹಿಸಿಕೊಂಡಿದ್ದರು. ಅದರೆ ಶಾಸಕ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ತೊರೆದ ಹಿನ್ನಲೆಯಲ್ಲಿ ಸಚಿವ ಡಿ.ಕೆ ಶಿವಕುಮಾರ ಸಮಾವೇಶದ ಉಸ್ತುವಾರಿಯನ್ನ ಹೆಗಲಿಗೇರಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಹಿಂದಿನ ಹಾಗೂ ಸದ್ಯದ ರಾಜಕೀಯ ಬದ್ಧವೈರಿಯಾಗಿರುವ ಸಿ.ಪಿ ಯೋಗೇಶ್ವರ್ ಗೆ ತಮ್ಮ ತಾಕತ್ತು ಹಾಗೂ ಕಾಂಗ್ರೆಸ್ ಬಲ ತೋರ್ಪಡಿಸಲು ಸಮಾವೇಶ ನಡೆಸಲಾಯಿತ್ತು.

DK Shivakumar leads Congress meet at Chennapatna against CP Yogishwar

ಕಾರ್ಯಕರ್ತರ ಸಭೆಯಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ವಿರುದ್ಧ ಡಿ.ಕೆ. ಸಹೋದರರು ಗುಡುಗಿದರು. ಶಾಸಕ ಸಿ.ಪಿ.ಯೋಗೇಶ್ವರ್ ರವರನ್ನು ನಂಬಿ ನಾವು ಮೋಸ ಹೋಗಿದ್ದೇವೆ ಇನ್ನು ಮುಂದೆ ಹಾಗೆ ಆಗಲ್ಲ. ನಾವು ನಿಮ್ಮ ಜೊತೆ ಇರುತ್ತೇವೆ ಯಾವುದೇ ಆತಂಕ ಬೇಡ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಭರವಸೆ ನೀಡಿದರು.

ರಾಜ್ಯ ಸರ್ಕಾರ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂದು ಸುಳ್ಳು ಆರೋಪ ಮಾಡುವ ಯೋಗೇಶ್ವರ್ ಕೆಲವರನ್ನು ಎತ್ತಿಕಟ್ಟಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು ಅಡ್ಡಿಪಡಿಸಿದರು. ಕೆರೆಗಳಿಗೆ ಭಾಗೀನ ಬಿಡುವ ಶಾಸಕರು ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ ಮುಖ್ಯಮಂತ್ರಿಗಳನ್ನು ನೆಪ ಮಾತ್ರಕ್ಕೂ ಆಹ್ವಾನಿಸಲಿಲ್ಲ ಎಂದು ಆರೋಪಿಸಿದರು.

ಚನ್ನಪಟ್ಟಣದಲ್ಲಿ ಇಂದಿನಿಂದ ಶಾಸಕರಿಲ್ಲ. ನಾನೇ ಈ ಕ್ಷೇತ್ರದ ಶಾಸಕ ಕನಕಪುರ ಕ್ಷೇತ್ರದ ಜನತೆಗಿಂತ ಚನ್ನಪಟ್ಟಣ ಕ್ಷೇತ್ರದ ಜನತೆ ಮೇಲೆ ನನಗೆ ಪ್ರೀತಿ ಜಾಸ್ತಿ. ಇಲ್ಲಿನ ಕಾರ್ಯಕರ್ತರನ್ನು ಕಾಪಾಡುವ ಕೆಲಸ ನನ್ನದು, 2018 ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೇಸ್ ಶಾಸಕನ್ನು ಗೆಲ್ಲಿಸಲು ಹೋರಾಟ ಮಾಡುತ್ತೆವೆ ಎಂದು ಅಭಯ ನೀಡಿದರು.

DK Shivakumar leads Congress meet at Chennapatna against CP Yogishwar

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತೆ. ಯೋಗೇಶ್ವರ್ ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಲಿ ಇನ್ನು ದಳದವರಿಗೆ ಸಿಪಿವೈ ಬಗ್ಗೆ ಗೊತ್ತು ಅದಕ್ಕೆ ಹತ್ತಿರ ಸೇರಿಸಿಕೊಳ್ಳುತ್ತಿಲ್ಲ. ಇನ್ನುಳಿದಿರುವ ಬಿಜೆಪಿಯವರಿಗೆ ಮತ್ತೆ ಅನುಭವವಾಗಲಿದೆ ಎಂದರು.

ನಿಮಗೆ ಮಾನ ಮರ್ಯಾದೆ ಇದ್ರೆ ನಿಮ್ಮ ಸಹೋದರ ಸಿ.ಪಿ.ರಾಜೇಶ್ ರನ್ನ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಸಿ. ಕೊಟ್ಟ ಮಾತನ್ನ ಉಳಿಸಿಕೊಳ್ಳಿ ಎಂದು ಸಿಪಿವೈಗೆ ಸವಾಲೆಸದರು.

ಶಾಸಕ ಸಿ.ಪಿ ಯೋಗೇಶ್ವರ್ ತಾವು ಕಾಂಗ್ರೆಸ್ ತೊರೆದ ಕಾರಣ ತಮ್ಮ ಹೆಸರು ಪೋಟೋವನ್ನು ಬ್ಯಾನರ್‌ಗಳಲ್ಲಿ ಬಳಸದಂತೆ ತಿಳಿಸಿದರು. ಅದರೆ ಕೆಲ ಬ್ಯಾನರ್ ಗಳಲ್ಲಿ ಸಿ.ಪಿ ಯೋಗೇಶ್ವರ್ ಪೋಟೋವನ್ನು ಬಳಕೆ ಮಾಡಲಾಗಿದೆ. ಅಲ್ಲದೇ ಮುಂದಿನ 2018 ರ ಮುಖ್ಯಮಂತ್ರಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಎನ್ನುವ ಕೆಲವು ಬ್ಯಾನರ್‌ಗಳು ಚನ್ನಪಟ್ಟಣದಾದ್ಯಂತ ರಾರಾಜಿಸುತ್ತಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A congress meet at Chennapatna in Ramanagara district had taken place in Karnataka power minister D K Shivakumar's leadership. Congress leaders and workers showed their power to CP Yogeshwar who recently left congress.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ