DK Shivakumar: ಕರ್ನಾಟಕದ ಜನತೆಯ ಭಾವನೆ ನಮ್ಮ ಸರ್ಕಾರ ಸದಾ ಗೌರವಿಸಲಿದೆ ಎಂದಿದ್ಯಾಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

DK Shivakumar: ಕರ್ನಾಟಕದ ಜನತೆಯ ಭಾವನೆಗಳನ್ನು ನಮ್ಮ ಸರ್ಕಾರ ಸದಾ ಗೌರವಿಸುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಕರ್ನಾಟಕ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯುವ ಸಚಿವ ಸಂಪುಟದ ನಿರ್ಧಾರವೂ ಇದೇ ಜನಪರ ಬದ್ಧತೆಯ ಪ್ರತೀಕ. ಸಾರ್ವಜನಿಕರ ಅಭಿಪ್ರಾಯ, ಕಳಕಳಿ ಮತ್ತು ಭಾವನೆಗಳಿಗೆ ಬೆಲೆ ನೀಡಿ, ನಮ್ಮ ಉದ್ದೇಶವನ್ನು ಮತ್ತಷ್ಟು ಸ್ಪಷ್ಟವಾಗಿ ಜನರ ಮುಂದಿಡಲು ಹಾಗೂ ಅಗತ್ಯ ತಿದ್ದುಪಡಿಗಳೊಂದಿಗೆ ವಿಧೇಯಕವನ್ನು ಮರು ಮಂಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ನ್ಯಾಯಾಧೀಶರು. ಜನತಾ ನ್ಯಾಯಾಲಯದ ಮುಂದೆ ನಮ್ಮ ಉದ್ದೇಶವನ್ನು ಪ್ರಾಮಾಣಿಕವಾಗಿ ಮಂಡಿಸಿ, ಜನವಿಶ್ವಾಸದೊಂದಿಗೆ ಮುಂದುವರಿಯುವುದು ನಮ್ಮ ಸರ್ಕಾರದ ಧ್ಯೇಯ ಎಂದು ಹೇಳಿದ್ದಾರೆ.

Karnataka Parks Bill Withdrawn Government Respects Public Sentiment Plans to Reintroduce It

DK Shivakumar: ಮನೆಮನೆ ಬೆಳಗಿಸಲು ತಲುಪುತ್ತಿವೆ ಗ್ಯಾರಂಟಿ ಯೋಜನೆಗಳು: ಡಿಕೆಶಿ

ಮನೆಮನೆ ಬೆಳಗಿಸಲು ತಲುಪುತ್ತಿವೆ ಗ್ಯಾರಂಟಿ ಯೋಜನೆಗಳು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಬರ ಪರಿಸ್ಥಿತಿಯ ಪರಿಶೀಲನೆ ವೇಳೆ, ಗ್ಯಾರಂಟಿ ಯೋಜನೆಗಳು ತಮ್ಮ ಬದುಕಿಗೆ ನೀಡಿರುವ ನೆರವು ಹಾಗೂ ತಂದಿರುವ ಬದಲಾವಣೆಯ ಬಗ್ಗೆ ಜನರು ಆತ್ಮೀಯವಾಗಿ ಹಂಚಿಕೊಂಡ ಮಾತುಗಳು ಮನಸ್ಸಿಗೆ ಸಂತಸ ತಂದವು. ಜನರ ಕಷ್ಟಕ್ಕೆ ಸ್ಪಂದಿಸುವುದು, ಅವರ ಬದುಕಿಗೆ ಭರವಸೆ ನೀಡುವುದು ಮತ್ತು ಪ್ರತಿಯೊಂದು ಕುಟುಂಬವೂ ನೆಮ್ಮದಿಯಿಂದ ಬದುಕುವಂತೆ ಮಾಡುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ನಾಡಿನ ಜನರ ಸಮೃದ್ಧಿಯೇ ನಮ್ಮ ಮೊದಲ ಆದ್ಯತೆ ಹಾಗೂ ಅವರ ಸಂತೋಷವೇ ನಮ್ಮ ಸೇವೆಯ ನಿಜವಾದ ಫಲ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು

* ಒಟ್ಟು ₹29,679 ಕೋಟಿ ಬಂಡವಾಳ ಹೂಡಿಕೆಯ 9 ಹೊಸ ಹಾಗೂ 8 ಹೆಚ್ಚುವರಿ ವಿಸ್ತರಣಾ ಯೋಜನೆಗಳಿಗೆ ಅನುಮೋದನೆ

* ಈ ಎಲ್ಲಾ ಯೋಜನೆಗಳ ಮೂಲಕ ರಾಜ್ಯದ ಯುವಜನತೆಗಾಗಿ ಒಟ್ಟು 66,360 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.

* ಹೊಸ ಹೂಡಿಕೆಗಳು ಮತ್ತು ಉದ್ಯೋಗಗಳು: ಹೀರೋ ಫ್ಯೂಚರ್ ಎನರ್ಜೀಸ್ (₹9,760 ಕೋಟಿ - 3,200 ಉದ್ಯೋಗ), ನಿರಾಣಿ ಶುಗರ್ಸ್ (₹4,062 ಕೋಟಿ), ಟ್ರೂಆಲ್ಟ್ ಬಯೋ ಎನರ್ಜಿ (₹2,988 ಕೋಟಿ), ಮಹೀಂದ್ರ ಏರೋಸ್ಟ್ರಕ್ಚರ್ಸ್ (₹2,300 ಕೋಟಿ - 3,000 ಉದ್ಯೋಗ), ವೈಬ್ರನ್ಸಿ ರಿನ್ಯೂವೇಬಲ್ ಎನರ್ಜೀಸ್ (₹2,194.94 ಕೋಟಿ - 30,000 ಉದ್ಯೋಗ), ಎಪ್ಸಿಲಾನ್ (₹1,500 ಕೋಟಿ), ಟೊಯೋಟಾ ಕಿರ್ಲೋಸ್ಕರ್ (₹1,200 ಕೋಟಿ), ಏಕಸ್ ಕನ್ಸೂಮರ್ ಪ್ರಾಡಕ್ಟ್ಸ್ (₹1,104 ಕೋಟಿ - 4,813 ಉದ್ಯೋಗ), ಲೈಟ್‌ಹೌಸ್ ಆಲ್ಟರ್ನೇಟಿವ್ ಅಸೆಟ್ಸ್ (₹600 ಕೋಟಿ).

* ಹೆಚ್ಚುವರಿ ಬಂಡವಾಳ ಹೂಡಿಕೆಗಳು: ಟಿವಿಎಸ್ ಮೋಟರ್ಸ್ (₹1,050 ಕೋಟಿ), ಎಂಎಸ್‌ಪಿಎಲ್ (₹884.25 ಕೋಟಿ), ಭೀಮಾ ಫೈನ್ ಕೆಮಿಕಲ್ಸ್ (₹605 ಕೋಟಿ), ಸನ್ಸೇರಾ (₹492.24 ಕೋಟಿ), ಹೋಂಡಾ ಕಾರ್ಸ್ (₹437 ಕೋಟಿ), ಎನ್‌ಶ್ಯೂರ್ ರಿಲಯನ್ಸ್ ಪವರ್ ಸೊಲ್ಯೂಷನ್ಸ್ (₹250 ಕೋಟಿ), ಹ್ಯಾವೆಲ್ಸ್ ಇಂಡಿಯಾ (₹250 ಕೋಟಿ).

* ಪಾರದರ್ಶಕತೆಗೆ ಆಡಿಟ್ ಕಡ್ಡಾಯ: ಕೈಗಾರಿಕೆಗಳಿಗೆ ಪರವಾನಗಿ ನೀಡುವ ಪೂರ್ವದಲ್ಲಿ ಪ್ರಾಜೆಕ್ಟ್ ರಿಪೋರ್ಟ್‌ಗಳ ಸಮಗ್ರ ಪರಿಶೀಲನೆ ನಡೆಸಲು ಹಾಗೂ ಕಡ್ಡಾಯ ಆಡಿಟ್‌ಗಾಗಿ ಹೊಸ ಆಡಿಟ್ ತಂಡ ರಚಿಸಲು ಹಣಕಾಸು ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

* ಕೈಗಾರಿಕಾ ವಿಸ್ತರಣೆಗೆ ಬೆಂಬಲ: ನೂತನ ಕೈಗಾರಿಕಾ ನೀತಿಯ ಎಲ್ಲಾ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿ, ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ಹಳೆಯ ಘಟಕಗಳ ವಿಸ್ತರಣೆಗೆ ಪೂರ್ಣ ಸಹಕಾರ ನೀಡಲು ನಿರ್ದೇಶನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+