ಐಟಿ-ಇಡಿ ಸಮನ್ಸ್ ರದ್ದಿಗೆ ಡಿಕೆಶಿ ಅರ್ಜಿ: ಆಗಸ್ಟ್ 28ಕ್ಕೆ ಕೋರ್ಟ್ ಆದೇಶ
ಬೆಂಗಳೂರು, ಆಗಸ್ಟ್ 22: ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ತಮ್ಮ ವಿರುದ್ಧ ನೀಡಿದ್ದ ಸಮನ್ಸ್ ಗಳನ್ನು ರದ್ದು ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಗಿದಿದೆ.
ಹೈಕೋರ್ಟ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರು ಈ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಮುಗಿದಿದ್ದು ಆಗಸ್ಟ್ 28 ರಂದು ಕೋರ್ಟ್ ಆದೇಶ ನೀಡಲಿದೆ.
ಕಳೆದ ವರ್ಷ ಡಿ.ಕೆ.ಶಿವಕುಮಾರ್ ನಿವಾಸ ಸೇರಿದಂತೆ ಅವರ ಬಂಧುಗಳು, ಆಪ್ತರಮನೆಗಳ ಮೇಲೆ ಮತ್ತು ದೆಹಲಿಯಲ್ಲಿ ಡಿಕೆಶಿ ಹೊಂದಿರುವ ಫ್ಲಾಟ್‌ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿಕೆ ಶಿವಕುಮಾರ್ ಫ್ಲ್ಯಾಟ್‌ನಲ್ಲಿ 8.59 ಕೋಟಿ ಹಣ ಪತ್ತೆ ಆಗಿತ್ತು. ಇದು ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಈ ಸಂಬಂಧ ತನಿಖೆ ನಡೆಸುತ್ತಿದ್ದ ಇಡಿ ಮತ್ತು ಐಟಿ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ನೀಡಿತ್ತು. ಈ ಸಮನ್ಸ್ ರದ್ದು ಮಾಡುವಂತೆ ಡಿ.ಕೆ.ಶಿವಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು.
ನಿನ್ನೆಯಷ್ಟೆ ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರಿಗೆ ರಿಲೀಫ್ ಸಿಕ್ಕಿದ್ದು, ಫ್ಲ್ಯಾಟ್‌ಗಳಲ್ಲಿ ಸಿಕ್ಕ ಹಣದ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.












Click it and Unblock the Notifications