Congress Bus Yatra : ಜ.11ರಿಂದ ಕಾಂಗ್ರೆಸ್ ಬಸ್ ಯಾತ್ರೆ: ಎರಡು ಪ್ರತ್ಯೇಕ ಸಮಿತಿ ರಚಿಸಿದ ಡಿ.ಕೆ ಶಿವಕುಮಾರ್
ಬೆಂಗಳೂರು,ಜನವರಿ 4: ನಾಲ್ಕೈದು ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯನ್ನ ನಡೆಸಿದ್ದು, ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಜನವರಿ 11 ರಿಂದ ಬಸ್ ಯಾತ್ರೆ ಕೈಗೊಂಡಿದೆ.
ಇನ್ನೂ ಬಸ್ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎರಡು ಪ್ರತ್ಯೇಕ ಸಮನ್ವಯ ಸಮಿತಿ ರಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಜನವರಿ 11ರಿಂದ ಕಾಂಗ್ರೆಸ್ ನಾಯಕರ ಜಂಟಿ ಬಸ್ ಯಾತ್ರೆ ಆರಂಭವಾಗಲಿದೆ.
ಈ ಬಸ್ ಯಾತ್ರೆ ಬೆಳಗಾವಿಯಿಂದ ಶುರುವಾಗಲಿದ್ದು, ಒಟ್ಟೂ 21 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಉತ್ತರ ಹಾಗೂ ದಕ್ಷಿಣ ಕರ್ನಾಟಕ್ಕೆ ಎರಡು ಪ್ರತ್ಯೇಕ ಸಮನ್ವಯ ಸಮಿತಿ ರಚನೆ ಮಾಡಿದ್ದಾರೆ.ಉತ್ತರ ಕರ್ನಾಟಕ ಭಾಗಕ್ಕೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ 22 ಸಮನ್ವಯ ಸದಸ್ಯರನ್ನು ನೇಮಿಸಿದರೇ, ದಕ್ಷಿಣ ಕರ್ನಾಟಕಕ್ಕೆ ಸಂಸದ ಜಿ ಸಿ ಚಂದ್ರಶೇಖರ ನೇತೃತ್ವದಲ್ಲಿ 29 ಸದಸ್ಯರ ನೇಮಕ ಮಾಡಿ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಎರಡು ಸಮನ್ವಯ ಸಮಿತಿ ಬಸ್ ಯಾತ್ರೆಯ ಸಿದ್ಧತೆ ನೋಡಿಕೊಳ್ಳಲಿದೆ.

ಯಾವ ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರ ಜಂಟಿ ಬಸ್ ಯಾತ್ರೆ
ಜನವರಿ 11ರಂದು ಬೆಳಗಾವಿ ಜಿಲ್ಲೆ
ಜನವರಿ 16ರಂದು ಹೊಸಪೇಟೆ
ಜನವರಿ 17ರಂದು ಕೊಪ್ಪಳದಲ್ಲಿ ಯಾತ್ರೆ
ಜನವರಿ 18ರಂದು ಬಾಗಲಕೋಟೆ, ಗದಗದಲ್ಲಿ ಯಾತ್ರೆ
ಜನವರಿ 19ರಂದು ಹಾವೇರಿ, ದಾವಣಗೆರೆ ಜಿಲ್ಲೆ
ಜನವರಿ 21 ಹಾಸನ, ಚಿಕ್ಕಮಗಳೂರು
ಜನವರಿ 22 ಉಡುಪಿ, ದಕ್ಷಿಣ ಕನ್ನಡ.

ಜನವರಿ 23 ಕೋಲಾರ, ಚಿಕ್ಕಬಳ್ಳಾಪುರ
ಜನವರಿ 24 ತುಮಕೂರು, ಬೆಂಗಳೂರು ಗ್ರಾಮಾಂತರ
ಜನವರಿ 25 ಚಾಮರಾಜನಗರ, ಮೈಸೂರು
ಜನವರಿ 26 ಮಂಡ್ಯ ಮತ್ತು ರಾಮನಗರ
ಜನವರಿ 27 ಯಾದಗಿರಿ-ಕಲಬುರಗಿ












Click it and Unblock the Notifications