ಬೆಂಗಳೂರು, ಆಗಸ್ಟ್ 30: ಡಿಕೆ ಶಿವಕುಮಾರ್ ಅವರಿಗೆ ಇಡಿ ಸಂಕಷ್ಟ ಶುರುವಾಗಿದ್ದು, ಇಡಿ ಸಮನ್ಸ್ ರದ್ದು ಮಾಡುವಂತೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ಹೈಕೋರ್ಟ್ ತಳ್ಳಿ ಹಾಕಿದೆ.
ಹೈಕೋರ್ಟ್, ಡಿಕೆಶಿ ಅರ್ಜಿಯನ್ನು ತಳ್ಳಿ ಹಾಕಿದ ಕೂಡಲೇ ಇಡಿ ಡಿ.ಕೆ.ಶಿವಕುಮಾರ್ ಅವರಿಗೆ ಹೊಸ ಸಮನ್ಸ್ ಕಳುಹಿಸಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಕೋರಿದೆ.
ಡಿ.ಕೆ.ಶಿವಕುಮಾರ್‌ಗೆ ಅವರ ದೆಹಲಿ ನಿವಾಸದಲ್ಲಿ ದೊರೆತಿದ್ದ ಎಂಟು ಕೋಟಿ ರೂಪಾಯಿ ಅಕ್ರಮ ಹಣದ ಬಗ್ಗೆ ತನಿಖೆಗೆ ಈ ಸಮನ್ಸ್ ಅನ್ನು ಇಡಿ ನೀಡಿದೆ. ಇಂದಿನ ವಿಚಾರಣೆಗೆ ಡಿ.ಕೆ.ಶಿವಕುಮಾರ್‌ಗೆ ಸಂಕಷ್ಟ ತರುವ ಸಾಧ್ಯತೆ ಇದೆ.
ಇಂದಿನ ಡಿ.ಕೆ.ಶಿವಕುಮಾರ್ ಅವರ ಉತ್ತರಗಳು ಇಡಿಗೆ ತೃಪ್ತಿ ತರದ ಪಕ್ಷದಲ್ಲಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಪ್ರಸ್ತುತ ಕುಟುಂಬ ಸಮೇತ ದೇವಾಲಯಕ್ಕೆ ತೆರಳಿರುವ ಡಿ.ಕೆ.ಶಿವಕುಮಾರ್ ಅವರು ಕೆಲವೇ ಸಮಯದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
Newest FirstOldest First
12:15 PM, 2 Sep
ಡಿಕೆ.ಶಿವಕುಮಾರ್ ಪರಿಸ್ಥಿತಿ ನೋಡಿ ಅವರ ತಾಯಿ ಗೌರಮ್ಮ ಅವರು ಕಣ್ಣೀರು ಸುರಿಸಿದ್ದಾರೆ.
11:36 AM, 2 Sep
ವಿಚಾರಣೆಗೆ ಹಾಜರಾಗುವ ಮುನ್ನಾ ಡಿ.ಕೆ.ಶಿವಕುಮಾರ್ ಅವರು ವಿಘ್ನವಿನಾಶಕ ಗಣೇಶನ ದರ್ಶನ ಪಡೆದು ಪೂಜೆ ನಡೆಸಿದರು. ಸಹೋದರ ಡಿ.ಕೆ.ಸುರೇಶ್ ಸಹ ಜೊತೆಗೆ ಇದ್ದರು.
11:19 AM, 2 Sep
ಇಡಿ ವಿಚಾರಣೆಗೆ ತೆರಳುವ ಮುನ್ನಾ ಮಾಧ್ಯಮಗಳ ಮುಂದೆ ಮಾತನಾಡಿದ ಡಿ.ಕೆ.ಶಿವಕುಮಾರ್ ಭಾವುಕರಾದರು. ಅಪ್ಪನ ಕಾರ್ಯ ಇಂದು, ಅವರಿಗೆ ಎಡೆ ಇಡಲು ಸಹ ಆಗಲಿಲ್ಲ. ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಡಿಕೆಶಿ ಹೇಳಿದರು.
6:46 PM, 31 Aug
ಸತತ ಎಂಟು ಗಂಟೆಗಳ ನಂತರವೂ ಡಿಕೆ ಶಿವಕುಮಾರ್ ಅವರ ವಿಚಾರಣೆ ನಡೆದೇ ಇದೆ. ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರಾರಂಭವಾದ ವಿಚಾರಣೆ ಇನ್ನೂ ನಡೆಯುತ್ತಿದೆ. ನಡುವೆ ಕೆಲ ಸಮಯ ಊಟಕ್ಕೆ ಅಷ್ಟೆ ಡಿಕೆ ಶಿವಕುಮಾರ್ ಅವರಿಗೆ ವಿರಾಮ ನೀಡಲಾಗಿತ್ತು.
3:35 PM, 31 Aug
ಊಟದ ವಿರಾಮಕ್ಕೆ ಹೊರಗೆ ಬಂದಿದ್ದ ಡಿ.ಕೆ.ಶಿವಕುಮಾರ್ ಈಗ ಮತ್ತೆ ಇಡಿ ಕಚೇರಿಗೆ ಬಂದಿದ್ದಾರೆ. ಬೆಳಿಗ್ಗೆ 11:30 ಕ್ಕೆ ಇಡಿ ಕಚೇರಿಗೆ ತೆರಳಿರುವ ಡಿ.ಕೆ.ಶಿವಕುಮಾರ್ ವಿಚಾರಣೆ ಎದುರಿಸುತ್ತಿದ್ದಾರೆ.
3:01 PM, 31 Aug
ಇಡಿ ಕಚೇರಿಯಿಂದ ಡಿ.ಕೆ.ಶಿವಕುಮಾರ್ ಅವರು ಹೊರಬಂದಿದ್ದಾರೆ. ಊಟದ ವಿರಾಮ ಇರುವ ಕಾರಣ, ಊಟಕ್ಕೆಂದು ಡಿ.ಕೆ.ಶಿವಕುಮಾರ್ ಅವರು ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಊಟದ ವಿರಾಮದ ಬಳಿಕ ಮತ್ತೆ ವಿಚಾರಣೆಗೆ ತೆರಳಲಿದ್ದಾರೆ.
11:53 AM, 31 Aug
ಡಿ.ಕೆ.ಶಿವಕುಮಾರ್ ಅವರು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಎರಡನೇ ದಿನದ ವಿಚಾರಣೆ ನಡೆಯುತ್ತಿದೆ.
11:30 AM, 31 Aug
ಇಡಿ ತನಿಖೆಗೆ ಎಲ್ಲ ಸಹಕಾರ ನೀಡಿದ್ದೇನೆ. ನನಗೆ ಯಾವುದೇ ಭಯವಿಲ್ಲ. ತಪ್ಪು ಮಾಡಿದ್ದರೆ ತಾನೇ ಹೆದರಬೇಕು. ನಾನು ಯಾವ ತಪ್ಪು ಮಾಡಿಲ್ಲ. ಇಡಿ ಅಧಿಕಾರಿಗಳು ಒಂದು ತಿಂಗಳು ವಿಚಾರಣೆಗೆ ಕರೆದರೂ ಹಾಜರಾಗುತ್ತೇನೆ. ನ್ಯಾಯಾಂಗ ಹಾಗೂ ಕಾನೂನಿನ ಮೇಲೆ ನಂಬಿಕೆ ಹಾಗೂ ಗೌರವವಿದೆ- ಡಿ.ಕೆ.ಶಿವಕುಮಾರ್
11:03 AM, 31 Aug
ಎರಡನೇ ದಿನದ ಇಡಿ ವಿಚಾರಣೆಗೆ ಸಂಸದ ಡಿ.ಕೆ.ಸುರೇಶ್ ನಿವಾಸದಿಂದ ಡಿ.ಕೆ.ಶಿವಕುಮಾರ್ ಅವರು ತೆರಳಿದ್ದಾರೆ. ಇಂದು ಹನ್ನೊಂದು ಗಂಟೆಗೆ ಇಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ತಿಳಿಸಲಾಗಿತ್ತು.
8:36 AM, 31 Aug
ರಾತ್ರಿ ವಿಚಾರಣೆ ಮುಗಿದ ಬಳಿಕ ಮತ್ತೆ ಸಮನ್ಸ್ ನೀಡಿರುವ ಇಡಿ ಅಧಿಕಾರಿಗಳು, ಶನಿವಾರ ಬೆಳಿಗ್ಗೆ ಪುನಃ ಹಾಜರಾಗುವಂತೆ ಸೂಚಿಸಿದ್ದಾರೆ.
8:34 AM, 31 Aug
ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಸುಮಾರು 70 ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
8:25 AM, 31 Aug
ಶುಕ್ರವಾರ ರಾತ್ರಿಯಿಂದಲೂ ಡಿಕೆ ಶಿವಕುಮಾರ್ ಅವರೊಂದಿಗೆ ಇದ್ದು ಅನೇಕ ಮುಖಂಡರು ಅವರಿಗೆ ನೈತಿಕ ಬೆಂಬಲ ನೀಡಿದ್ದಾರೆ.
8:19 AM, 31 Aug
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಶರ್ಮಾ ಟ್ರಾನ್ಸ್‌ಪೋರ್ಟ್ ಮಾಲೀಕ ಸುನಿಲ್ ಶರ್ಮಾ, ಡಿಕೆ ಶಿವಕುಮಾರ್ ಆಪ್ತ ಸಚಿನ್ ನಾರಾಯಣ್, ಡಿಕೆಶಿ ಆಪ್ತ ಸಹಾಯಕ ಆಂಜನೇಯ ಅವರಿಗೆ ಸಮನ್ಸ್ ನೀಡಿಲ್ಲ.
12:17 AM, 31 Aug
ಶುಕ್ರವಾರದ ವಿಚಾರಣೆ ಮುಗಿಸಿಕೊಂಡು ಹೊರ ಬಂದ ಡಿ.ಕೆ ಶಿವಕುಮಾರ್, "ನಾನು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ, ನಾಳೆ(ಆಗಸ್ಟ್ 31) ಬೆಳಗ್ಗೆ11ಕ್ಕೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ, ನಾನು ನ್ಯಾಯಯುತವಾಗಿ ನಡೆದುಕೊಳ್ಳುತ್ತೇನೆ" ಎಂದರು
12:15 AM, 31 Aug
ಡಿ.ಕೆ ಶಿವಕುಮಾರ್ ಗೆ ನೀಡಿದ್ದ ಸಮನ್ಸ್ ಅವಧಿ ಶುಕ್ರವಾರ ರಾತ್ರಿ 12 ಗಂಟೆಗೆ ಮುಗಿಯುವುದರಿಂದ 12 ಗಂಟೆಯೊಳಗೆ ಇಂದಿನ ವಿಚಾರಣೆ ಮುಗಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು
12:14 AM, 31 Aug
ಶುಕ್ರವಾರ ಸಂಜೆ 6 ಗಂಟೆಯಿಂದ ರಾತ್ರಿ 11.30ರ ತನಕ ಡಿ.ಕೆ ಶಿವಕುಮಾರ್ ವಿಚಾರಣೆ ನಡೆಸಲಾಗಿದೆ
11:28 PM, 30 Aug
ಇಡಿ ಕಚೇರಿ ಬಳಿ ಮಾತನಾಡಿದ ಮಂಡ್ಯ ಕ್ಷೇತ್ರದ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ, "ಡಿ. ಕೆ. ಶಿವಕುಮಾರ್‌ರನ್ನು ರಾಜಕೀಯವಾಗಿ ಮುಗಿಸಲು ಇಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಪರೇಷನ್ ಕಮಲದ ಬಗ್ಗೆಯೂ ತನಿಖೆ ಮಾಡಲಿ" ಎಂದರು.
11:13 PM, 30 Aug
ಡಿ. ಕೆ. ಶಿವಕುಮಾರ್‌ಗೆ ಇಡಿ ಕಚೇರಿಯ ಸಿಬ್ಬಂದಿಗಳು ರಾತ್ರಿಯ ಊಟವನ್ನು ತಂದುಕೊಟ್ಟಿದ್ದಾರೆ. ಅಧಿಕಾರಿಗಳು, ಅಲ್ಲಿಯೇ ಊಟ ಮುಗಿಸಿದ್ದಾರೆ.
11:12 PM, 30 Aug
ಒಂದು ಹಂತದ ವಿಚಾರಣೆ ಪೂರ್ಣಗೊಳಿಸಿದ ಇಡಿ ಅಧಿಕಾರಿಗಳು. ಸ್ವಲ್ಪ ವಿಶ್ರಾಂತಿ ಕೊಟ್ಟು 2ನೇ ಹಂತದ ವಿಚಾರಣೆ ಆರಂಭಿಸಿದರು.
11:11 PM, 30 Aug
ಸಂಜೆ 6.30ರಿಂದ ನವದೆಹಲಿಯ ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಯಲ್ಲಿ ಡಿ. ಕೆ. ಶಿವಕುಮಾರ್ ವಿಚಾರಣೆ ನಡೆಯುತ್ತಿದೆ.
6:36 PM, 30 Aug
ವಿಚಾರಣೆಗೆ ಸಮಯ ನೀಡಿದರೆ ಈಗಲೇ ವಿಚಾರಣೆ ಎದುರಿಸುತ್ತೇನೆ ಎಂದು ಹೇಳಿರುವ ಡಿಕೆ ಶಿವಕುಮಾರ್ ನಾನು ಯಾವ ತಪ್ಪೂ ಮಾಡಿಲ್ಲ, ಕಾನೂನಿಗೆ ನಾನು ಗೌರವ ಕೊಡಬೇಕು, ಕೊಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
6:02 PM, 30 Aug
ಡಿಕೆ ಶಿವಕುಮಾರ್ ಅವರು ಇಡಿ ಮುಂದೆ ವಿಚಾರಣೆಗೆ ಹಾಜರಾಗಲು ತೆರಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಉತ್ತರಗಳು ಇಡಿ ಅಧಿಕಾರಿಗಳಿಗೆ ತೃಪ್ತಿ ಆಗದೇ ಇದ್ದಲ್ಲಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
5:27 PM, 30 Aug
ಮಂಗಳೂರು, ದಕ್ಷಿಣ ಕನ್ನಡ, ಬೆಂಗಳೂರು, ನೆಲಮಂಗಲ, ಕನಕಪುರ, ರಾಮನಗರ ಇನ್ನೂ ಕೆಲವು ಕಡೆ ಡಿ.ಕೆ.ಶಿವಕುಮಾರ್ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
5:00 PM, 30 Aug
ಡಿಕೆ ಶಿವಕುಮಾರ್ ಅವರು ಇದೀಗಷ್ಟೆ ದೆಹಲಿಗೆ ತೆರಳಿದ್ದು, ಅವರು ನೇರವಾಗಿ ಇಡಿ ಕಚೇರಿಗೆ ತೆರಳುತ್ತಾರೆಯೋ ಅಥವಾ ಕಾನೂನು ಸಲಹೆಗಾರರನ್ನು ಭೇಟಿ ಮಾಡಿ ಆ ನಂತರ ವಿಚಾರಣೆಗೆ ಹಾಜರಾಗುತ್ತಾರೆಯೋ ಕಾದು ನೋಡಬೇಕಿದೆ.
2:24 PM, 30 Aug
ಕೇಂದ್ರ ಸರ್ಕಾರ ಸಿಬಿಐ,ಇಡಿ ಮೊದಲಾದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ದುರುಪಯೋಗ ಮಾಡುತ್ತಿರುವುದು ಖಂಡನೀಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿಯೇ ಎದುರಿಸಬೇಕೇ ಹೊರತು ಹೀಗೆ ಅಧಿಕಾರ ದುರ್ಬಳಕೆ ಮೂಲಕ ಅಲ್ಲ.@INCKarnataka
ಟ್ವೀಟ್ ಮೂಲಕ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಂತಿರುವ ಸಿದ್ದರಾಮಯ್ಯ, 'ಕೇಂದ್ರ ಸರ್ಕಾರ ಸಿಬಿಐ,ಇಡಿ ಮೊದಲಾದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ದುರುಪಯೋಗ ಮಾಡುತ್ತಿರುವುದು ಖಂಡನೀಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿಯೇ ಎದುರಿಸಬೇಕೇ ಹೊರತು ಹೀಗೆ ಅಧಿಕಾರ ದುರ್ಬಳಕೆ ಮೂಲಕ ಅಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
1:56 PM, 30 Aug
2017 ರಲ್ಲಿ ನಾನು ಮಹಾರಾಷ್ಟ್ರದ ನನ್ನ ಪಕ್ಷದ ಶಾಸಕರನ್ನು, ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು, ನನ್ನದೇ ರಾಜ್ಯದ ನಮ್ಮ ಪಕ್ಷದ ಶಾಸಕರನ್ನು ನಮ್ಮ ಪಕ್ಷದ ಆಜ್ಞೆಯಂತೆ ಕಾಪಾಡಿಕೊಂಡೆ ಅಂದಿನಿಂದಲೂ ನನ್ನ ವಿರುದ್ಧ ರಾಜಕೀಯ ಪ್ರೇರಿತವಾದ ಐಟಿ, ಇಡಿ ತಂತ್ರವನ್ನು ಬಳಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
1:47 PM, 30 Aug
ಇಂದು ಅಕಸ್ಮಾತ್ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಬಂಧಿಸಿದ್ದೇ ಆದರೆ ಕನಿಷ್ಟ ಎರಡು ದಿನ ಡಿ.ಕೆ.ಶಿವಕುಮಾರ್ ಇಡಿ ವಶದಲ್ಲೇ ಇರಬೇಕಾಗುತ್ತದೆ. ನಾಳೆ ಶನಿವಾರ ಮತ್ತು ಭಾನುವಾರ ನ್ಯಾಯಾಲಯ ಕಾರ್ಯ ನಿರ್ವಿಸುವುದಿಲ್ಲ ಹಾಗಾಗಿ ಅವರಿಗೆ ಜಾಮೀನು ದೊರೆಯುವ ಸಾಧ್ಯತೆ ಇಲ್ಲ.
1:45 PM, 30 Aug
ಡಿ.ಕೆ.ಶಿವಕುಮಾರ್ ಅವರಿಗೆ ಮಧ್ಯಂತರ ರಕ್ಷಣೆಯನ್ನು ನೀಡಲು ಹೈಕೋರ್ಟ್ ನಿರಾಕರಿಸುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಬಂಧನದ ಭೀತಿ ಉದ್ಭವವಾಗಿದೆ. ಡಿ.ಕೆ.ಶಿವಕುಮಾರ್ ಅವರು ಇಡಿ ಬಳಿ ವಿಚಾರಣೆಗೆ ತೆರಳಿದಾಗ, ಅವಶ್ಯಕತೆ ಬಿದ್ದರೆ ಇಂದೇ ಅವರನ್ನು ವಶಕ್ಕೆ ಪಡೆಯ ಬಹುದಾಗಿದೆ.
1:45 PM, 30 Aug
ಡಿ.ಕೆ.ಶಿವಕುಮಾರ್ ಅವರು ಇಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗದೇ ಇದ್ದರೆ ಇಡಿಯವರೇ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಈಗಾಗಲೇ ದೆಹಲಿಗೆ ತೆರಳಿರುವ ಡಿ.ಕೆ.ಶಿವಕುಮಾರ್ ಅವರು ಕಾನೂನು ತಜ್ಞರ ಸಲಹೆ ಪಡೆದು ಇಂದೇ ಇಡಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
1:40 PM, 30 Aug
ಡಿ.ಕೆ.ಶಿವಕುಮಾರ್ ಅವರಿಗೆ ಮಧ್ಯಂತರ ರಕ್ಷಣೆಯನ್ನು ನೀಡಲು ಹೈಕೋರ್ಟ್ ನಿರಾಕರಿಸುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಬಂಧನದ ಭೀತಿ ಉದ್ಭವವಾಗಿದೆ. ಡಿ.ಕೆ.ಶಿವಕುಮಾರ್ ಅವರು ಇಡಿ ಬಳಿ ವಿಚಾರಣೆಗೆ ತೆರಳಿದಾಗ, ಅವಶ್ಯಕತೆ ಬಿದ್ದರೆ ಇಂದೇ ಅವರನ್ನು ವಶಕ್ಕೆ ಪಡೆಯ ಬಹುದಾಗಿದೆ.
READ MORE
11:47 AM, 30 Aug
ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಗೆ ಆಗಮಿಸಿದ್ದಾರೆ. ಹಲವು ಕಡತಗಳನ್ನೂ ತಮ್ಮ ಜೊತೆಗೆ ಅವರು ತೆಗೆದುಕೊಂಡು ಬಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾರಿ ಗದ್ದಲ ಏರ್ಪಟ್ಟಿದೆ.
11:50 AM, 30 Aug
2017 ರಿಂದ ನನ್ನ ಬಗ್ಗೆ ಕೆಲವು ಮಾಧ್ಯಮಗಳು ತಿರುಚಿದ ವರದಿಯನ್ನೂ ಅವರಿಗೆ ಅರಿವಿಗೆ ಸಿಕ್ಕಷ್ಟೆ ವಿಷಯವನ್ನು ಮತ್ತು ಕೆಲವರು ಪೂರ್ಣ ಸತ್ಯವನ್ನೂ ಪ್ರಸಾರ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ನಿಮ್ಮ ಸ್ವಾತಂತ್ರ್ಯ ನಾನು ಅದರ ಬಗ್ಗೆ ಮಾತನಾಡುವುದಿಲ್ಲ.
11:51 AM, 30 Aug
ಪಕ್ಷ ನೀಡಿದ್ದ ಗುಜರಾತ್ ಶಾಸಕರನ್ನು, ಮಹಾರಾಷ್ಟ್ರ ಶಾಸಕರನ್ನು ಕಾಪಾಡುವ ಜವಾಬ್ದಾರಿ, ನನ್ನ ರಾಜ್ಯದ ನಮ್ಮ ಶಾಸಕರನ್ನು ಕಾಪಾಡುವ ಜವಾಬ್ದಾರಿಯನ್ನು ಹೊರಿಸಿದಾಗ ಅದನ್ನು ನಿಭಾಯಿಸಿದ್ದೇನೆ. ಹಲವು ವರ್ಷಗಳಿಂದ ಹೋರಾಟಗಳನ್ನು ಹೋರಾಟ ಮಾಡುತ್ತಲೇ ಬಂದಿದ್ದೇನೆ. ಈ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡುತ್ತಾ ಬಂದಿದ್ದೇನೆ.
11:53 AM, 30 Aug
ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾ ಅಂಗಕ್ಕೆ ಗೌರವ ಕೊಡುವ ಶಾಸಕ ನಾನು. ಇದೇ ಬದ್ಧತೆಯಿಂದಲೇ ನಾನು ಕೆಲಸ ಮಾಡಿದ್ದೇನೆ. ಈ ವರೆಗೆ ನನಗೆ ಬಂದಿರುವ ಎಲ್ಲ ನೊಟೀಸ್ಗಳಿಗೆ ನಾನೇ ಹೋಗಿ ಹಾಜರಾಗಿದ್ದೇನೆ, ಕೆಲವಕ್ಕೆ ನನ್ನ ಆಡಿಟರ್ಗಳನ್ನು ಕಳುಹಿಸಿದ್ದೇನೆ- ಡಿಕೆ ಶಿವಕುಮಾರ್
11:54 AM, 30 Aug
ನನ್ನ ತಾಯಿಗೆ ನಾವಿಬ್ಬರೇ ಗಂಡು ಮಕ್ಕಳು, ನನ್ನ ತಾಯಿಗೆ 86 ವರ್ಷ, ನಾವು ಬಡವರೇನೂ ಅಲ್ಲ. ಡಿ.ಕೆ.ಶಿವಕುಮಾರ್ ಬೇನಾಮಿದಾರ ಎಂದು ಐಟಿ ತೀರ್ಮಾನ ಮಾಡಿದ್ದಾರೆ. ನ್ಯಾಯಾಲಕ್ಕೆ ಹೋಗಿದ್ದೇನೆ, ಹೋರಾಟ ಮಾಡುತ್ತಿದ್ದೇನೆ. ತಾಯಿಯ ಹೆಸರಿಗೆ ಮಾಡಿದ ಆಸ್ತಿಗೆ ನಾನು ಬೇನಾಮಿ ಹೆಸರಿನ ಆಸ್ತಿ ಮಾಡಿದ್ದೇನೆ ಎಂದಿದ್ದಾರೆ- ಡಿಕೆ ಶಿವಕುಮಾರ್
11:57 AM, 30 Aug
ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ನನ್ನ ಮೇಲೆ ಮತ್ತೆ ಇಡಿ ನೊಟೀಸ್, ಸಮನ್ಸ್ ಜಾರಿ ಮಾಡಿತು ಎಂದು ಡಿಕೆ ಶಿವಕುಮಾರ್ ಹೇಳಿದರು.
12:00 PM, 30 Aug
ಇದರಲ್ಲಿ ತಂತ್ರ ಇಲ್ಲ, ಹಣ ಇದ್ದರೆ ಅದಕ್ಕೆ ತೆರಿಗೆ ಕಟ್ಟುತ್ತೇವೆ ಎಂದು ನಾನು ಕೋರ್ಟ್ಗೆ ಹೋಗಿದ್ದೆ ನಿನ್ನೆ ನಮ್ಮ ಅರ್ಜಿಯನ್ನು ರದ್ದು ಮಾಡಿದ್ದಾರೆ. ನಮಗೆ ಇನ್ನೂ ಆರ್ಡರ್ ಸಹ ಸಿಕ್ಕಿಲ್ಲ, ರಾತ್ರಿ ಮನೆಗೆ ತಡವಾಗಿ ಬಂದೆ. ಅಷ್ಟರಲ್ಲೇ ಇಡಿ ಅಧಿಕಾರಿಗಳು ಆ ಹೊತ್ತಿನಲ್ಲಿ ಮನೆಗೆ ಬಂದು ಸಮನ್ಸ್ ಕೊಟ್ಟಿದ್ದಾರೆ-ಡಿಕೆ ಶಿವಕುಮಾರ್
12:01 PM, 30 Aug
ನಾನು ಇಡಿ ಸಮನ್ಸ್ ಕೊಟ್ಟಿದ್ದ ಸಮಯಕ್ಕೆ ತಕ್ಕಂತೆ ಬರಲು ಸಾಧ್ಯವಿಲ್ಲ ಎಂದು ಇಡಿಗೆ ಹೇಳಿದ್ದೇನೆ. ಗೌರಿ-ಗಣೇಶ ಹಬ್ಬ ನಮಗೆ ಪ್ರಮುಖವಾದುದು ಕೆಲವು ಸಂಪ್ರದಾಯಗಳನ್ನು ನಾನು ಪಾಲಿಸಬೇಕು ಎಂದು ಇಡಿಗೆ ಹೇಳಿದೆ- ಡಿಕೆ ಶಿವಕುಮಾರ್
12:02 PM, 30 Aug
ಇಡಿ ಪ್ರಕರಣವನ್ನು ನಾನು ಕಾನೂನು ಚೌಕಟ್ಟಿನಲ್ಲೂ ಎದುರಿಸಬೇಕು ಮತ್ತು ರಾಜಕೀಯ ಕೋನದಿಂದಲೂ ಎದುರಿಸಬೇಕಾಗಿದೆ. ಇದು ರಾಜಕೀಯ ಪ್ರೇರಿತ ಎಂಬುದರಲ್ಲಿ ಅನುಮಾನ ಇಲ್ಲ- ಡಿಕೆ ಶಿವಕುಮಾರ್
12:02 PM, 30 Aug
ನಾನು ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಲಂಚ ಪಡೆದಿಲ್ಲ, ಮಾಡಬಾರದ ಕೆಟ್ಟ ಕಾರ್ಯವನ್ನೇನೂ ನಾನು ಮಾಡಿಲ್ಲ. ಗೌರವಯುತವಾಗಿ ನಾನು ಬಾಳುತ್ತಿದ್ದೇನೆ- ಡಿಕೆ ಶಿವಕುಮಾರ್
12:06 PM, 30 Aug
ನನ್ನ ಮನೆ, ನನ್ನ ತಮ್ಮನ ಮನೆಯಲ್ಲಿ, ನನ್ನ ಗೆಳೆಯರ ಮನೆಯಲ್ಲಿ ಕೆಲವು ಕೋಟಿ ಸಿಕ್ಕಿದರ ಬಗ್ಗೆ ಕೇಸು ಇದೆ. ಇಲ್ಲ ಎಂದು ಹೇಳುವುದಿಲ್ಲ ಅದಕ್ಕೆ ಬೇಕಾದ ಉತ್ತರ ನಾನು ಕೊಡುತ್ತೀನಿ. ಆದರೆ ಆಪರೇಷನ್ ಕಮಲದ ಬಗ್ಗೆ ಯಾಕೆ ಒಂದೂ ನೊಟೀಸ್ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
12:06 PM, 30 Aug
ನಾನು ಈಗ ದೆಹಲಿಗೆ ಹೋಗುತ್ತೇನೆ. ಕಾನೂನಿನಲ್ಲೇ ಏನು ಅವಕಾಶವಿದೆಯೋ ಅದನ್ನೆಲ್ಲಾ ಕೇಳುತ್ತೇನೆ. ನಾನು ನನ್ನ ಕಾನೂನು ತಜ್ಞರ ಜೊತೆಯೂ ಮಾತನಾಡುತ್ತೇನೆ. ಇಡಿಗೆ ಏನು-ಹೇಗೆ ಉತ್ತರ ಕೊಡಬೇಕೊ ಎಂದು ಚರ್ಚೆ ಮಾಡುತ್ತೇನೆ- ಡಿಕೆ ಶಿವಕುಮಾರ್
12:06 PM, 30 Aug
ನಾನು ಎಲ್ಲೂ ಹೋಗಿಲ್ಲ, ಎಲ್ಲೂ ಹೆದರಿಕೊಂಡು ಹೋಗಿಲ್ಲ, ಹೋಗುವುದೂ ಇಲ್ಲ. ಇವಕ್ಕೆಲ್ಲಾ ಹೆದರಿಕೊಂಡು ಹೋಗುವ ಕೆಂಪೇಗೌಡರ ಮಗ ನಾನಲ್ಲ. ಕಾನೂನಾತ್ಮಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ನಾನು ಎದುರಿಸುತ್ತೇನೆ- ಡಿಕೆ ಶಿವಕುಮಾರ್
12:09 PM, 30 Aug
ಸದನದಲ್ಲಿಯೇ ಕೆಲವು ಶಾಸಕರು ನಮಗೆ ಐದಾರು ಕೋಟಿ ಹಣ ಕೊಟ್ಟು ಬಿಜೆಪಿಗೆ ಬರುವಂತೆ ಹೇಳಿದ್ದರು ಎಂದು ಹೇಳಿದರು, ಆಪರೇಷನ್ ಕಮಲದ ಬಗ್ಗೆ ಆಡಿಯೋಗಳು ಹೊರಗೆ ಬಂದವು, ಬೇರೆ-ಬೇರೆ ದಾಖಲೆಗಳು ಹೊರಗೆ ಬಂದವು ಆದರೆ ಅವರಿಗೆ ಒಂದೂ ನೊಟೀಸ್ ಅನ್ನು ಸಿಬಿಐ, ಐಟಿ, ಇಡಿಗಳು ನೀಡಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.
12:12 PM, 30 Aug
ನನ್ನ ತಾಯಿಯ ಹೆಸರಲ್ಲಿನ ಆಸ್ತಿಯನ್ನು ಬೇನಾಮಿ ಆಸ್ತಿ ಎಂದಿದ್ದಾರೆ. ತಾಯಿಗೆ ನಾವಿಬ್ಬರೇ ಮಕ್ಕಳು, ನಾವು ಆಕೆಯ ಹೆಸರಿಗೆ ಮಾಡದೆ ಇನ್ಯಾರಿಗೆ ಮಾಡಬೇಕು, ಅಥವಾ ತಾಯಿ ತಮ್ಮ ಮಕ್ಕಳನ್ನು ನಂಬದೆ ಇನ್ಯಾರನ್ನು ನಂಬಬೇಕು ಎಂದು ಡಿಕೆ ಶಿವಕುಮಾರ್ ಭಾವುಕವಾಗಿ ಪ್ರಶ್ನೆ ಮಾಡಿದರು. ಇದರ ವಿರುದ್ಧವೂ ಪ್ರಕರಣ ದಾಖಲಿಸಿದ್ದೇವೆ ಎಂದು ಡಿಕೆ.ಶಿವಕುಮಾರ್ ಹೇಳಿದರು.
12:14 PM, 30 Aug
ಎರಡು ಫ್ಲಾಟ್ ದೆಹಲಿಯಲ್ಲಿದೆ, ನನ್ನ ಮಗಳ ಹೆಸರಲ್ಲಿ ಒಂದು ಫ್ಲಾಟ್ ಮುಂಬಯಿಯಲ್ಲಿದೆ. ನನ್ನ ಒಂದೇ ಒಂದು ಆಸ್ತಿಯೂ ದೇಶದ ಹೊರಗೆ ಇಲ್ಲ. ಎಲ್ಲವೂ ರಾಜ್ಯದ ಒಳಗೇ ಇದೆ. ನನ್ನ ತಾಯಿ ಮತ್ತು ನನ್ನ ಕುಟುಂಬ ಸದಸ್ಯರು ಎಷ್ಟೋ ಆಸ್ತಿಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ- ಡಿಕೆ ಶಿವಕುಮಾರ್
12:15 PM, 30 Aug
ನಾನು ಸಚಿವ ನಾಗಿದ್ದೆ, ನನ್ನ ತಮ್ಮ ಸಂಸದನಾಗಿರುವ ಕಾರಣ ನಮ್ಮ ಆಸ್ತಿಯನ್ನು ಕೊಂಡು ಕೊಳ್ಳಲು ಸಹ ಯಾರೂ ಮುಂದೆ ಬರುತ್ತಿಲ್ಲ ಎಂದು ನಗುತ್ತಾ ಹೇಳಿದ ಡಿಕೆ.ಶಿವಕುಮಾರ್, ಅದಕ್ಕಾಗಿಯೇ ನಾವು ನಮ್ಮ ಹಲವು ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದೇವೆ- ಡಿಕೆ ಶಿವಕುಮಾರ್
12:16 PM, 30 Aug
ಯಾರು ಬೆಂಬಲ ನೀಡುತ್ತಾರೆ ನೀಡುವುದಿಲ್ಲವೋ ನನಗೆ ಸಂಬಂಧವಿಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ, ರಾಷ್ಟ್ರೀಯ ಲೀಡರ್ ಬಗ್ಗೆ ನಾನು ನನ್ನನ್ನು ಕಂಪೇರ್ ಮಾಡಿಕೊಳ್ಳುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
12:20 PM, 30 Aug
ಯಡಿಯೂರಪ್ಪ ಅವರಿಗೆ ಅಭಿನಂದನೆ. ಅವರು ನನಗೆ ಆತ್ಮೀಯ ಸ್ನೇಹಿತರು. ಅವರು ಹೇಳಿದ್ದರು, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ ಅವರು ಮಾತು ಉಳಿಸಿಕೊಂಡಿಲ್ಲ, ನಮ್ಮ ಸರ್ಕಾರದ ಎಲ್ಲ ಯೋಜನೆಗಳಿಗೆ ಹಣ ಕಡಿತ ಮಾಡುತ್ತಿದ್ದಾರೆ - ಡಿಕೆ ಶಿವಕುಮಾರ್.
12:21 PM, 30 Aug
ಕನಕಪುರದಲ್ಲಿ ಮೆಡಿಕಲ್ ಕಾಲೇಜು ಕಟ್ಟಬೇಕು ಎಂಬುದು ನಮ್ಮ ಕನಸಾಗಿತ್ತು, ಹಾಗಾಗಿ ಕಳೆದ ಸರ್ಕಾರದ ಅವಧಿಯಲ್ಲಿ ಯೋಜನಗೆ ಸರ್ಕಾರ ಒಪ್ಪಿಗೆ ನೀಡಿತ್ತು, ಟೆಂಡರ್ ಕೂಡ ಆಗಿತ್ತು ಆದರೆ ಈಗ ಅದಕ್ಕೆ ಅನುದಾನ ನಿಲ್ಲಿಸುವ ಕಾರ್ಯವನ್ನು ಯಡಿಯೂರಪ್ಪ ಮಾಡಿದ್ದಾರೆ- ಡಿಕೆ ಶಿವಕುಮಾರ್.
12:40 PM, 30 Aug
ಸುದ್ದಿಗೋಷ್ಠಿ ಮುಗಿಸಿದ ಡಿಕೆ ಶಿವಕುಮಾರ್ ಅವರು ತಮ್ಮ ಸದಾಶಿವನಗರ ನಿವಾಸದಿಂದ ಹೊರಟಿದ್ದಾರೆ. ನಿವಾಸದ ಮುಂದೆ ನೂರಾರು ಮಂದಿ ಬೆಂಬಲಿಗರು ಸೇರಿದ್ದು, ಎಲ್ಲರ ಕಡೆಗೆ ಕೈಬೀಸುತ್ತಾ ಡಿಕೆ ಶಿವಕುಮಾರ್ ಮುಂದೆ ಸಾಗುತ್ತಿದ್ದಾರೆ.
12:52 PM, 30 Aug
ಡಿಕೆ.ಶಿವಕುಮಾರ್ ಅವರು ದೆಹಲಿಗೆ ಹೊರಡುತ್ತಿದ್ದಾರೆ. ಅವರು ಈಗಾಗಲೇ ಮನೆಯಿಂದ ಹೊರಟಿದ್ದು, ಕೆಲವೇ ನಿಮಿಷದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
1:14 PM, 30 Aug
ಇಡಿ ವಿಚಾರಣೆಯಿಂದ ಮಧ್ಯಂತರ ರಕ್ಷಣೆ ಕೋರಿ ಡಿಕೆ ಶಿವಕುಮಾರ್ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆರಂಭವಾಗಿದೆ.
1:36 PM, 30 Aug
ಇಡಿ ವಿಚಾರಣೆಯಿಂದ ಮಧ್ಯಂತರ ರಕ್ಷಣೆ ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಹಾಗಾಗಿ ಇಡಿಯು ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆಯುವ ಸಂಭವ ಹೆಚ್ಚಾಗಿವೆ.
1:38 PM, 30 Aug
ಇಡಿ ವಿಚಾರಣೆಗೆ ಸೆಪ್ಟೆಂಬರ್ 5 ಅಥವಾ 6 ರಂದು ವಿಚಾರಣೆಗೆ ಹಾಜರಾಗುತ್ತೇವೆ ಎಂದು ಡಿಕೆ ಶಿವಕುಮಾರ್ ಪರ ವಕೀಲರು ಕೇಳಿದ್ದರು. ಆದರೆ ಇದಕ್ಕೆ ಒಪ್ಪದ ಹೈಕೋರ್ಟ್, ನಿನ್ನೆಯಷ್ಟೆ ಆದೇಶ ನೀಡಿದ್ದೇವೆ ಅದಕ್ಕೆ ವ್ಯತಿರಿಕ್ತ ಆದೇಶ ನೀಡಲು ಸಾಧ್ಯವಿಲ್ಲ. ಆದೇಶದ ಮೇಲೆ ವಿಭಾಗೀಯ ಪೀಠದಲ್ಲಿ ಮೇಲ್ಮನವಿಯನ್ನು ಸಲ್ಲಿಸಬಹುದು ಎಂದು ಹೈಕೋರ್ಟ್ ಹೇಳಿದೆ.
1:40 PM, 30 Aug
ಡಿ.ಕೆ.ಶಿವಕುಮಾರ್ ಅವರಿಗೆ ಮಧ್ಯಂತರ ರಕ್ಷಣೆಯನ್ನು ನೀಡಲು ಹೈಕೋರ್ಟ್ ನಿರಾಕರಿಸುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಬಂಧನದ ಭೀತಿ ಉದ್ಭವವಾಗಿದೆ. ಡಿ.ಕೆ.ಶಿವಕುಮಾರ್ ಅವರು ಇಡಿ ಬಳಿ ವಿಚಾರಣೆಗೆ ತೆರಳಿದಾಗ, ಅವಶ್ಯಕತೆ ಬಿದ್ದರೆ ಇಂದೇ ಅವರನ್ನು ವಶಕ್ಕೆ ಪಡೆಯ ಬಹುದಾಗಿದೆ.
1:45 PM, 30 Aug
ಡಿ.ಕೆ.ಶಿವಕುಮಾರ್ ಅವರು ಇಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗದೇ ಇದ್ದರೆ ಇಡಿಯವರೇ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಈಗಾಗಲೇ ದೆಹಲಿಗೆ ತೆರಳಿರುವ ಡಿ.ಕೆ.ಶಿವಕುಮಾರ್ ಅವರು ಕಾನೂನು ತಜ್ಞರ ಸಲಹೆ ಪಡೆದು ಇಂದೇ ಇಡಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
1:45 PM, 30 Aug
ಡಿ.ಕೆ.ಶಿವಕುಮಾರ್ ಅವರಿಗೆ ಮಧ್ಯಂತರ ರಕ್ಷಣೆಯನ್ನು ನೀಡಲು ಹೈಕೋರ್ಟ್ ನಿರಾಕರಿಸುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಬಂಧನದ ಭೀತಿ ಉದ್ಭವವಾಗಿದೆ. ಡಿ.ಕೆ.ಶಿವಕುಮಾರ್ ಅವರು ಇಡಿ ಬಳಿ ವಿಚಾರಣೆಗೆ ತೆರಳಿದಾಗ, ಅವಶ್ಯಕತೆ ಬಿದ್ದರೆ ಇಂದೇ ಅವರನ್ನು ವಶಕ್ಕೆ ಪಡೆಯ ಬಹುದಾಗಿದೆ.
1:47 PM, 30 Aug
ಇಂದು ಅಕಸ್ಮಾತ್ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಬಂಧಿಸಿದ್ದೇ ಆದರೆ ಕನಿಷ್ಟ ಎರಡು ದಿನ ಡಿ.ಕೆ.ಶಿವಕುಮಾರ್ ಇಡಿ ವಶದಲ್ಲೇ ಇರಬೇಕಾಗುತ್ತದೆ. ನಾಳೆ ಶನಿವಾರ ಮತ್ತು ಭಾನುವಾರ ನ್ಯಾಯಾಲಯ ಕಾರ್ಯ ನಿರ್ವಿಸುವುದಿಲ್ಲ ಹಾಗಾಗಿ ಅವರಿಗೆ ಜಾಮೀನು ದೊರೆಯುವ ಸಾಧ್ಯತೆ ಇಲ್ಲ.
1:56 PM, 30 Aug
2017 ರಲ್ಲಿ ನಾನು ಮಹಾರಾಷ್ಟ್ರದ ನನ್ನ ಪಕ್ಷದ ಶಾಸಕರನ್ನು, ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು, ನನ್ನದೇ ರಾಜ್ಯದ ನಮ್ಮ ಪಕ್ಷದ ಶಾಸಕರನ್ನು ನಮ್ಮ ಪಕ್ಷದ ಆಜ್ಞೆಯಂತೆ ಕಾಪಾಡಿಕೊಂಡೆ ಅಂದಿನಿಂದಲೂ ನನ್ನ ವಿರುದ್ಧ ರಾಜಕೀಯ ಪ್ರೇರಿತವಾದ ಐಟಿ, ಇಡಿ ತಂತ್ರವನ್ನು ಬಳಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.