SWR: ದೀಪಾವಳಿ ಹಿನ್ನಲೆ ಇಂದಿನಿಂದ ಬೆಂಗಳೂರು-ಕಲಬುರಗಿಗೆ ವಿಶೇಷ ರೈಲು ಸೇವೆ

ಬೆಂಗಳೂರು, ಅಕ್ಟೋಬರ್ 18: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ನೈಋತ್ಯ ರೈಲ್ವೆ ವಲಯ ಹಲವು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಆರಂಭಿಸಿದೆ. ಈ ರೈಲುಗಳು ಬೆಂಗಳೂರಿನಿಂದ ಕಲಬುರಗಿಗೆ ಯಲ್ಲಹಂಕ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಸೇವೆ ನೀಡಲಿವೆ. ಈ ರೈಲುಗಳ ವೇಳಾಪಟ್ಟಿ, ದಿನಾಂಕ, ನಿಲುಗಡೆ ವಿವರ ಇಲ್ಲಿದೆ.

ಬೆಂಗಳೂರು ಕಂಠೋನ್ಮೆಂಟ್ - ಕಲಬುರಗಿ ರೈಲು

ಬೆಂಗಳೂರು ಕಂಠೋನ್ಮೆಂಟ್ - ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06203) ಅಕ್ಟೋಬರ್ 18 ರಂದು ಶನಿವಾರ ರಾತ್ರಿ 7.40 ಗಂಟೆಗೆ ಬೆಂಗಳೂರಿನಿಂದ ಹೊರಡಲಿದೆ. ಮುಂದಿನ ದಿನ ಬೆಳಗ್ಗೆ 7.30ಕ್ಕೆ ಕಲಬುರಗಿ ತಲುಪಲಿದೆ. ಹಿಂತಿರುಗುವ ಕಲಬುರಗಿ - ಯೆಲ್ಲಹಂಕ ವಿಶೇಷ ರೈಲು (ಸಂಖ್ಯೆ 06204) ಅಕ್ಟೋಬರ್ 19 ರಂದು ಬೆಳಗ್ಗೆ 9.35 ಗಂಟೆಗೆ ಹೊರಟು ಅದೇ ದಿನ ರಾತ್ರಿ 8.30 ಕ್ಕೆ ಬೆಂಗಳೂರಿಗೆ ಬಂದು ಸೇರಿಲಿದೆ.

Diwali Special Trains from Bengaluru to Kalaburagi SWR Launches Extra Services

ಮತ್ತೊಂದು ವಿಶೇಷ ಸೇವೆಯಾದ ಬೆಂಗಳೂರು ಕಂಠೋನ್ಮೆಂಟ್ -ಕಲಬುರಗಿ - ಬೆಂಗಳೂರು ಕಂಠೋನ್ಮೆಂಟ್ ವಿಶೇಷ ರೈಲು (06207 / 06208) ರೈಲು ಅಕ್ಟೋಬರ್ 20 ರಂದು ಸೋಮವಾರ ರಾತ್ರಿ 7.40ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮಂಗಳವಾರ ಬೆಳಗ್ಗೆ 7.30ಕ್ಕೆ ಕಲಬುರಗಿಗೆ ತಲುಪಲಿದೆ. ಹಿಂತಿರುಗುವ ರೈಲು ಅಕ್ಟೋಬರ್ 21 ರಂದು ಬೆಳಗ್ಗೆ 9.35 ಗಂಟೆಗೆ ಕಲಬುರಗಿಯಿಂದ ಹೊರಟು, ಅದೇ ದಿನ ರಾತ್ರಿ 8.30 ಗಂಟೆಗೆ ಬೆಂಗಳೂರು ನಿಲ್ದಾಣ ತಲುಪಲಿದೆ.

ಬೆಂಗಳೂರು ಕಂಠೋನ್ಮೆಂಟ್ - ಕಲಬುರಗಿ - ಬೆಂಗಳೂರು ಕಂಠೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06209 / 06210) ರೈಲುಗಳು ಕೂಡ ದೀಪಾವಳಿ ಪ್ರಯುಕ್ತ ಸಂಚರಿಸುತ್ತವೆ. ರೈಲು (ಸಂಖ್ಯೆ 06209) ಅಕ್ಟೋಬರ್ 21 ರಂದು ರಾತ್ರಿ 10.10 ಗಂಟೆಗೆ ಬೆಂಗಳೂರಿನಿಂದ ಹೊರುಡತ್ತುದೆ. ಬುಧವಾರ ಬೆಳಗ್ಗೆ 9.00 ಗಂಟೆಗೆ ಕಲಬುರಗಿಗೆ ತಲುಪುತ್ತದೆ. ಹಿಂತಿರುಗುವ ರೈಲು (06210) ಅಕ್ಟೋಬರ್ 22 ರಂದು ಬೆಳಗ್ಗೆ 10.45 ಗಂಟೆಗೆ ಕಲಬುರಗಿಯಿಂದ ಹೊರಟು, ಅದೇ ದಿನ ರಾತ್ರಿ 10.30 ಗಂಟೆಗೆ ಬೆಂಗಳೂರಿಗೆ ಬರಲಿದೆ.

ಈ ರೈಲುಗಳು ಮತ್ತು ಆಸನ ಲಭ್ಯತೆ ಕುರಿತು ಹೆಚ್ಚಿನ ಮಾಹಿತಿ ಭಾರತೀಯ ಅಧಿಕೃತ ವೆಬ್‌ಸೈಟ್ http://www.enquiry.indianrail.gov.in ಗೆ ಇಲ್ಲವೇ NTES ಆಪ್ ಮೂಲಕ ಪ್ರಯಾಣಿಕರು ಪರಿಶೀಲಿಸಬಹುದು. ಹಬ್ಬದ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಟಿಕೆಟ್‌ಗಳನ್ನು ಮುಂಚಿತವಾಗಿ ಬುಕ್ ಮಾಡುವಂತೆ ನೈಋತ್ಯ ರೈಲ್ವೆ ವಲಯ ತಿಳಿಸಿದೆ.

ಈ ವಿಶೇಷ ರೈಲು ಸೇವೆಗಳು ದೀಪಾವಳಿ ಹಬ್ಬದ ಪ್ರಯಾಣದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಅನುಕೂಲಕರ ಪ್ರಯಾಣ ಅವಕಾಶ ಒದಗಿಸಲಾಗಿದೆ ಎಂದು ದಕ್ಷಿಣ ಪಶ್ಚಿಮ ಪ್ರಕಟಣೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+