Deepavali 2023: ಪ್ರಯಾಣಿಕರಿಗೆ ಟಿಕೆಟ್ ಬೆಲೆ ಏರಿಕೆ ಶಾಕ್: ನಿಮ್ಮೂರುಗಳಿಗೆ ಪ್ರಯಾಣದ ದರ ಎಷ್ಟಿದೇ? ವಿವರ
ಬೆಂಗಳೂರು, ನವೆಂಬರ್ 10: ಹಬ್ಬಗಳು ಬಂತೆಂದರೆ ಸಾಕು ಸಾರ್ವಜನಿಕ ಬಸ್‌ಗಳು ನಿರ್ವಹಣೆಗೆ ಸಾಕಾಗುವುದಿಲ್ಲ. ಮತ್ತೊಂದೆಡೆ ಖಾಸಗಿ ಬಸ್ ಮಾಲೀಕರು ದುಪ್ಟಟ್ಟು ಬೆಲೆಗೆ ಟಿಕೆಟ್ ದರ ಏರಿಕೆ ಮಾಡಿ ವಸೂಲಿಗೆ ನಿಂತು ಬಿಡುತ್ತವೆ. ಈ ದೀಪಾವಳಿ ಸಂದರ್ಭದಲ್ಲೂ ಆಗಿರುವುದು ಹಾಗೆಯೇ. ಇದನ್ನು ತಡೆಯಬೇಕಿರುವ ಸರ್ಕಾರ ಮಾತ್ರ ಎಚ್ಚರಿಕೆ ನೀಡಿ ಸುಮ್ಮನಾಗುವುದು ಸಾಮಾನ್ಯ ಎಂಬಂತಾಗಿದೆ.
ಈ ವರ್ಷದ ದೀಪಾವಳಿ ಹಬ್ಬದಾಚರಣೆಗೆ ದಿನಗಣನೆ ಶುರುವಾಗಿದೆ. ಇದೇ ರವಿವಾರದಿಂದಲೇ ಹಬ್ಬದ ಸಂಭ್ರಮ ನಡೆಯಲಿದೆ. ವೀಕೆಂಡ್ ಹಿನ್ನೆಲೆಯ ಈಗಾಗಲೇ ತಮ್ಮ ಊರಿಗಳತ್ತ ಮುಖ ಮಾಡಿದ್ದಾರೆ. ಬಹುತೇಕ ಮಂದಿ ಶುಕ್ರವಾರ ತಮ್ಮೂರುಗಳತ್ತ ತೆರಳಲಿದ್ದಾರೆ.

ಹಬ್ಬದ ಪ್ರಯುಕ್ತ ಖಾಸಗಿ ಬಸ್ ನಿರ್ವಾಹಕರು ಟಿಕೆಟ್ ದರ ಹೆಚ್ಚಿಸಿದ್ದಾರೆ. ಹೀಗಾಗಿ ಸಾವಿರಾರು ಜನರು ತಮ್ಮ ಊರುಗಳಿಗೆ ತೆರಳಲು ಪರಿತಪಿಸಬೇಕಾಗಿದೆ. ಖಾಸಗಿ ಟ್ರಾವೆಲ್ ಆಪರೇಟರ್‌ಗಳು ಟಿಕೆಟ್ ಬೆಲೆಯನ್ನು ಶೇಕಡಾ 30 ರಷ್ಟು ಏರಿಕೆ ಮಾಡಿದ್ದಾರೆ.
ಶೇಕಡಾ 30 ಕ್ಕಿಂತ ಅಧಿಕ ದರ ಏರಿಕೆ
ಬೆಂಗಳೂರಿನಿಂದ ಬೇಡಿಕೆ ಹೆಚ್ಚಿರುವ ಮಾರ್ಗಗಳಲ್ಲಿ ಪ್ರಯಾಣದ ದರ ಶೇ.30ಕ್ಕಿಂತಲೂ ಇನ್ನೂ ಹೆಚ್ಚೇ ಇದೆ. ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಯು ಹೆಚ್ಚುವರಿ ಶುಲ್ಕ ವಸೂಲಿ ಮಾಡದಂತೆ ಎಂದಿನಂತೆ ಖಾಸಗಿ ನಿರ್ವಾಹಕರಿಗೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪರಿಶೀಲಿಸಲಿದ್ದೇವೆ ಎಂದು ಈ ಹಿಂದೆ ಹೇಳಿದಂತೆಯೇ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ನನ್ನ ಹುಟ್ಟೂರಾದ ತಮಿಳುನಾಡಿನ ನಾಮಕ್ಕಲ್‌ಗೆ ಹವಾನಿಯಂತ್ರಿತವಲ್ಲದ (Non AC) ಸ್ಲೀಪರ್ ಬಸ್ ಸಾಮಾನ್ಯ ದಿನಗಳಲ್ಲಿ ಇದ್ದವಾಗಿ ರೂ.1,000, ಇದೀಗ ರೂ.2000 ದಾಟಿದೆ. ಟಿಕೆಟ್ ಬುಕಿಂಗ್ ಗೆ ಅಪ್ಲಿಕೇಶನ್‌ಗಳನ್ನು ತೆರೆದು ಕಡಿಮೆ ಬೆಲೆ ಟಿಕೆಟ್ ಬುಕ್ಕಿಂಗ್ ಸಾಧ್ಯವಾಗಲಿಲ್ಲ.
ಪ್ರಯಾಣಿಕರ ಬೇಸರ
ಪ್ರತಿ ಹಬ್ಬಗಳಲ್ಲಿಯು ಬೆಂಗಳೂರಿನಿಂದ ಬೇರೆಡೆ ಹೋಗುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಅವಕಾಶ ದುರಪಯೋಗ ಮಾಡಿಕೊಳ್ಳುವ ಖಾಸಗಿ ಬಸ್ ನಿರ್ವಾಹಕರು ಮನಬಂದಷ್ಟು ರೇಟ್ ಫಿಕ್ಸ್ ಮಾಡಿ ಹಣ ಸುಲಿಯುತ್ತಾರೆ. ಸರ್ಕಾರ ಮಾತ್ರ ಕಣ್ಣಿದ್ದು ಕುರುಡನಂತೆ ವರ್ತಿಸುತ್ತದೆ ಎಂದು ಖಾಸಗಿ ಕಂಪನಿ ಉದ್ಯೋಗಿ ಬೇಸರ ವ್ಯಕ್ತಪಡಿಸಿದರು.
ದೀಪಾವಳಿ ಹಬ್ಬಗಳಲ್ಲಿ ರಜೆ ಸಿಗುವ ಕಾರಣ ಕೆಲವರು ಪ್ರವಾಸಿ ಸ್ಥಳಗಳಿಗೆ ಬೇಟಿ ಕೊಡುವ ಸಾಧ್ಯತೆ ಇರುತ್ತದೆ. ಅವರು ಸಹ ಬೆಲೆ ಏರಿಕೆಯ ಬಿಸಿ ಎದುರಿಸುವಂತಾಗಿದೆ. ಪ್ರತಿ ಬಾರಿಯು ಇಂತದ್ದೇ ಪರಿಸ್ಥಿತಿಯಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ.
ದಂಡಕ್ರಮ ಎಚ್ಚರಿಕೆ ನೀಡಿದ ಸರ್ಕಾರ
ಈ ಸಂಬಂಧ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಖಾಸಗಿ ಟ್ರಾವೆಲ್ ಆಪರೇಟರ್‌ಗಳಿಗೆ ಹೆಚ್ಚಿನ ಶುಲ್ಕ ವಿಧಿಸದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಅದಾಗಿಯೂ ಹೆಚ್ಚು ಹಣ ಪಡೆದು ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಖಾಸಗಿ ಟ್ರಾವೆಲ್ ಆಪರೇಟರ್‌ಗಳ ವಿರುದ್ಧ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಅಧಿಕಾರಿಗಳು ಬೆಂಗಳೂರಿನಿಂದ ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೀದರ್,ಕಲಬುರಗಿ, ಬಳ್ಳಾರಿ ಸೇರಿದಂತೆ ಅನೇಕ ಪ್ರದೇಶಗಳಿಗೆ ಒಟ್ಟು 2,000 ಹೆಚ್ಚುವರಿ ಬಸ್‌ಗಳನ್ನು ಓಡಿಸುವುದಾಗಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ ಸೇರಿದಂತೆ ಕೇರಳ, ತಮಿಳುನಾಡು, ಗೋವಾ, ಆಂದ್ರ ಪ್ರದೇಶದಂತಹ ಸ್ಥಳಗಳಿಗೂ ಖಾಸಗಿ ಬಸ್ ಬದಲಾಗಿ ಕರ್ನಾಟಕ ಸಾರಿಗೆ ಬಳಸುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ. ಹಾಗಾದರೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಯಾವ ಯಾವ ಊರುಗಳಿಗೆ ಪ್ರಯಾಣದ ದರ ಎಷ್ಟಿದೆ.
ಕರ್ನಾಟಕದ ಈ ಸ್ಥಳಗಳ ಪ್ರಮಾಣದ ದರ, ವಿವರ
* ಬೆಂಗಳೂರು-ದಾವಣಗೆರೆಗೆ ಇಂದು(ನ.10) SRS ₹1750-₹2450, ನಾಗಶ್ರೀ ಮತ್ತು ರೂಬಿ ಟ್ರಾವೆಲ್ಸ್ ₹1599.
* ಬೆಂಗಳೂರು- ಹುಬ್ಬಳ್ಳಿಗೆ ಪ್ರಯಾಣದ ದರ VRL ₹2100., ರೇಷ್ಮಾ ಟ್ರಾವೆಲ್ ₹2300, VRL ₹2450, SRS ₹1999.
* ಬೆಂಗಳೂರು- ರಾಯಚೂರಿಗೆ ಗ್ರೀನ್‌ಲೈನ್ ಟ್ರಾವೆಲ್ಸ್ ₹1745-1999, ಸುಗಮ ₹1650, ನಾಗಶ್ರೀ ₹1799.
* ಬೆಂಗಳೂರು- ಮಂಗಳೂರಿಗೆ ಸುಗಮ ₹1650-1800, ಕಾವೇರಿ ₹1899, ದೀಶಾ ಟ್ರಾವೆಲ್ಸ್ ₹1999.
* ಬೆಂಗಳೂರು- ಶಿವಮೊಗ್ಗಕ್ಕೆ VSM ₹1650, SRS ₹1290, ಹಂಸಾ ಟ್ರಾವೆಲ್ ₹1700, ಸುಗಮ ₹1300.
* ಬೆಂಗಳೂರು- ಉಡುಪಿಗೆ ಸುಗಮ ₹1600-1800, ಭಾಗವತಿ ₹1900, ಸಾಯಿ ದುರ್ಗಾ ₹1500, ಪ್ರಗತಿ ₹2000












Click it and Unblock the Notifications