Karnataka weather report: ಜಿಲ್ಲಾವಾರು ಏಪ್ರಿಲ್‌ 22ರ ಹವಾಮಾನ ವರದಿ, ಮಾಹಿತಿ ಇಲ್ಲಿದೆ

ಕರ್ನಾಟಕ, ಏಪ್ರಿಲ್‌, 22: ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಇನ್ನು ಕೆಲವೆಡೆ ಮೋಡ ಕವಿದ ವಾತಾವರಣ ಇದ್ದರೆ, ಮತ್ತೆ ಕೆಲವೆಡೆ ಬಿಸಿಲಿನ ತಾಪಮಾನ ಹೆಚ್ಚುತ್ತಲೆ ಇದೆ. ಹಾಗಾದರೆ ಜಿಲ್ಲಾವಾರು ಹವಾಮಾನ ಹೇಗಿರಲಿದೆ ಎಂದು ಇಲ್ಲಿ ತಿಳಿಯಿರಿ.

ರಾಜ್ಯಾದ್ಯಂತ (ಏಪ್ರಿಲ್‌ 22) ಮೋಡ ಕವಿದ ವಾತಾವರಣ ಇರಲಿದ್ದು, ಮಡಿಕೇರಿ, ಮೈಸೂರು ಹಾಗೂ ಕೋಲಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ತಿಳಿಸಿದೆ.

District wise weather report

ಜಿಲ್ಲಾವಾರು ದಾಖಲಾಗುವ ಗರಿಷ್ಠ, ಕನಿಷ್ಠ ತಾಪಮಾನ

1 ಬೆಂಗಳೂರು 33-22
2 ಮಂಗಳೂರು 34-26
3 ಶಿವಮೊಗ್ಗ 37-21
4 ಬೆಳಗಾವಿ 36-19
5 ಮೈಸೂರು 35-22
6 ಮಂಡ್ಯ 36-22
7 ಮಡಿಕೇರಿ 30-17
8 ರಾಮನಗರ 35-23
9 ಹಾಸನ 33-19
10 ಚಾಮರಾಜನಗರ 34-22
11 ಚಿಕ್ಕಬಳ್ಳಾಪುರ 32-21
12 ಕೋಲಾರ 33-22
13 ತುಮಕೂರು 34-22
14 ಉಡುಪಿ 34-26
15 ಕಾರವಾರ 34-25
16 ಚಿಕ್ಕಮಗಳೂರು 32-18
17 ದಾವಣಗೆರೆ 38-21
18 ಹುಬ್ಬಳ್ಳಿ 38-21
19 ಚಿತ್ರದುರ್ಗ 36-22
20 ಹಾವೇರಿ 38-21
21 ಬಳ್ಳಾರಿ 39-25
22 ಗದಗ 38-22
23 ಕೊಪ್ಪಳ 38-23
24 ರಾಯಚೂರು 39-26
25 ಯಾದಗಿರಿ 39-26
26 ವಿಜಯಪುರ 30-16
27 ಬೀದರ್ 36-23
28 ಕಲಬುರಗಿ 39-26
29 ಬಾಗಲಕೋಟೆ 38-23

ಹೀಗೆ 29 ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಳಿತ ಆಗಲಿದ್ದು, ಇನ್ನುಳಿದ ಜಿಲ್ಲೆಗಳ ಹವಾಮಾನದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಈ ಮೇಲಿನ ಕೆಲವು ಜಿಲ್ಲೆಗಳಲ್ಲಿ ತಾಪಮಾ ಹೆಚ್ಚಿದ್ದರೂ ಕೂಡ ಮಳೆರಾಯ ಮಾತ್ರ ತಂಪಪೆರೆಯುತ್ತಲೇ ಇದ್ದಾನೆ.

District wise weather report

ಗುಡುಗು, ಮಿಂಚು ಸಹಿತ ಮಳೆ

ಹಾಗೆಯೆ ರಾಜ್ಯದ ಕರಾವಳಿ, ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್‌ 21 ರಿಂದ ಮುಂದಿನ ಐದು ದಿನ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಈಗಾಗಲೇ ಶಿವಮೊಗ್ಗ, ಹುಬ್ಬಳ್ಳಿ, ಗದಗ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ಇನ್ನೂ ಕೆಲವು ಕಡೆ ಮಾತ್ರ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಬೆಂಗಳೂರು ನಗರದಲ್ಲಿ ಶುಕ್ರವಾರ ರಾತ್ರಿ ವರುಣನ ಸಿಂಚನದಿಂದ ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಕೊಂಚ ತಂಪೆರೆದಂತೆ ಆಗಿದೆ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಶುಕ್ರವಾರ ರಾತ್ರಿ ಸಿಲಿಕಾನ್‌ ಸಿಟಿಯ ಹಲವು ಭಾಗಗಳಲ್ಲಿ ಮಳೆ ಆಗಿದೆ. ನಗರದ ಮೆಜೆಸ್ಟಿಕ್, ಟೌನ್ ಹಾಲ್, ಶಾಂತಿನಗರ, ಬಸವನಗುಡಿ, ಜಯನಗರ, ಬ್ಯಾಟರಾಯನಪುರ, ಯಲಹಂಕ, ಹೆಬ್ಬಾಳ, ಕೆಆರ್ ಮಾರ್ಕೆಟ್​, ಗಿರಿನಗರ ಸೇರಿದಂತೆ ಹಲವೆಡೆ ಮಳೆ ಆಗಿದೆ.

ಏಪ್ರಿಲ್‌ 21ರಿಂದ ಏಪ್ರಿಲ್‌ 25ರವರೆಗೆ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಏಪ್ರಿಲ್‌ 21 ಮತ್ತು 22 ರಂದು ಉಡುಪಿ ಜಿಲ್ಲೆಯಲ್ಲಿ, ಉತ್ತರ ಒಳನಾಡಿನ ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಏಪ್ರಿಲ್‌ 21ರಿಂದ ಏಪ್ರಿಲ್‌ 25ರವರೆಗೆ ಮಳೆ ಆಗಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿಒಣಹವೆ ಮುಂದುವರಿಯಲಿದೆ ಎಂದು ತಿಳಿಸಿತ್ತು.

ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಬಳ್ಳಾರಿ, ಕೊಡಗು, ಚಿಕ್ಕಮಗಳೂರು, ಕೋಲಾರ, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+