ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಕೊರೊನಾ ಸೋಂಕು: ಜಿಲ್ಲಾವಾರು ಅಂಕಿ ಅಂಶ

ಬೆಂಗಳೂರು, ಡಿ. 04: ಕರ್ನಾಟಕದಲ್ಲಿ ಕೊರೊನಾ ಸೋಂಕು ದ್ವಿಗುಣವಾಗುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ 23 ಶಿಕ್ಷಕ- ಶಿಕ್ಷಕಿಯರು ಕೊರೊನಾ ಸೋಂಕಿನಿಂದ ( ಸಕ್ರಿಯ) ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ 193 ಮಕ್ಕಳು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಒಂದೇ - ಒಂದು ಪ್ರಕರಣದಲ್ಲಿ ಸಹ ಕೊರೊನಾ ಸೋಂಕಿತ ವಿದ್ಯಾರ್ಥಿಗಳ ಜೀವ ಹಾನಿ ಸಂಭವಿಸಿಲ್ಲ. ಸರ್ಕಾರದ ಅಂಕಿ ಅಂಶಗಳಿಂದ ಈ ಸಂಗತಿ ಹೊರ ಬಿದ್ದಿದೆ.

ರಾಜ್ಯದಲ್ಲಿ ಜ. 03 ರಂದು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 1209 ವರದಿಯಾಗಿವೆ. ಇದರ ನಡುವೆ ಶಾಲಾ ಕಾಲೇಜು ಬಂದ್ ವಿಚಾರ ಮುನ್ನೆಲೆಗೆ ಬಂದಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಪ್ರಮುಖ ನಗರಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಇದೀಗ ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಣೆ ಮಾಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟಾಸ್ಕ್ ಫೋರ್ಸ್ ಕಮಿಟಿ ಸಭೆ ಕರೆದಿದ್ದಾರೆ. ಇದರ ನಡುವೆ ಶಾಲಾ ಕಾಲೇಜುಗಳ ಬಂದ್ ಸುತ್ತ ಚರ್ಚೆ ನಡೆಯುತ್ತಿದೆ. ಇದರ ನಡುವೆ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕೊರೊನಾ ಸೋಂಕಿಗೆ ಒಳಗಾಗಿರುವ ವಿದ್ಯಾರ್ಥಿಗಳ, ಶಿಕ್ಷಕರ ವಿವರ ಇಲ್ಲಿ ವಿವರಿಸಲಾಗಿದೆ.

ಜಿಲ್ಲಾವಾರು ವಿದ್ಯಾರ್ಥಿಗಳ ಕೊರೊನಾ ಸೋಂಕು ಪ್ರಕರಣ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪ್ರಕರಣ ಪರಿಗಣಿಸಿದರೂ 193 ವಿದ್ಯಾರ್ಥಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಅದರಲ್ಲೂ, 87 ಬಾಲಕರು, 106 ಬಾಲಕಿಯರು ಕೊರೊನಾ ಸೋಂಕಿಗೆ ಒಳಗಾದವರು. ಅದರಲ್ಲಿ ಶಿರಸಿ ಒಂದರಲ್ಲೇ 96 ಪ್ರಕರಣ ಕಾಣಿಸಿಕೊಂಡಿವೆ. ಈವರೆಗೆ ವಿದ್ಯಾರ್ಥಿಗಳಲ್ಲಿ 497 ಕೊರೊನಾ ಸೋಂಕು ಪ್ರಕರಣ ಕಾಣಿಸಿಕೊಂಡಿದ್ದು, 295 ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ. ಹೊಸ ಕೊರೊನಾ ಸೋಂಕು ಪ್ರಕರಣ ಸೇರಿದಂತೆ 193 ಬಾಲಕ ಬಾಲಕಿಯರು ಕೊರೊನಾ ಸೋಂಕಿಗೆ ಚಿಕಿತ್ಸೆ ( ಸಕ್ರಿಯ) ಪಡೆಯುತ್ತಿದ್ದಾರೆ.

District Wise Covid-19 Cases in Students in Karnataka

ಶಿಕ್ಷಕರಿಗೆ ಕೊರೊನಾ ಸೋಂಕು: ಕರ್ನಾಟಕದಲ್ಲಿ ಪ್ರಸ್ತುತ 23 ಶಿಕ್ಷಕರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈವರೆಗೆ 33 ಶಿಕ್ಷಕ- ಶಿಕ್ಷಕಿಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅದರಲ್ಲಿ ಹತ್ತು ಮಂದಿ ಚೇತರಿಸಿಕೊಂಡಿದ್ದು, ಉಳಿದ 23 ಮಂದಿ ಶಿಕ್ಷಕರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಹದಿಮೂರು ಶಿಕ್ಷಕರು, 10 ಶಿಕ್ಷಕಿಯರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.

District Wise Covid-19 Cases in Students in Karnataka

ಬಾಲಕ- ಬಾಲಕಿಯರ ಕೊರೊನಾ ಸೋಂಕು ಜಿಲ್ಲಾವಾರು ವಿವರ

ಬೆಂಗಳೂರು ದಕ್ಷಿಣ- 10

ಬೆಂಗಳೂರು ಗ್ರಾಮಾಂತರ -1

ಬೆಳಗಾವಿ -01

ಚಿಕ್ಕಮಗಳೂರು-15

ಚಿತ್ರದುರ್ಗ -3

ದಕ್ಷಿಣ ಕನ್ನಡ - 1

ಧಾರವಾಡ- 10

ಹಾಸನ -13

ಕೊಡಗು 57

ಕೋಲಾರ - 3

ಮಧುಗಿರಿ - 11

ಮಂಡ್ಯ- 06

ಮೈಸೂರು - 07

ಶಿವಮೊಗ್ಗ -01

ಶಿರಸಿ- 49

ತುಮಕೂರು - 04

ಉತ್ತರ ಕನ್ನಡ - 01

Recommended Video

      ನಗೆಪಾಟಲಾಯ್ತು ಮೋದಿ ವಿಡಿಯೋ! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+