ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಿಂದ ಶಿರಡಿಗೆ ವಿಶೇಷ ರೈಲು ಯಾತ್ರೆ

|
Google Oneindia Kannada News

ಬೆಂಗಳೂರು, ಮೇ.6 : ಶಿರಡಿ ಸಾಯಿಬಾಬಾ ಭಕ್ತರಿಗಾಗಿ ಬೆಂಗಳೂರಿನಿಂದ ಶಿರಡಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ವಿದ್ಯಾಭಾರತಿ ಫೌಂಡೇಷನ್ ಈ ರೈಲು ವ್ಯವಸ್ಥೆಯನ್ನು ಮಾಡಿದ್ದು, ಮೇ 30ರಿಂದ ಜೂ.1ರವರೆಗೆ ಈ ವಿಶೇಷ ರೈಲು ಯಾತ್ರೆಯನ್ನು ಆಯೋಜಿಸಲಾಗಿದೆ.

ರೇಲ್ವೆ ಇಲಾಖೆಯಿಂದ ಅನುಮತಿ ಪಡೆದು ಈ ವಿಶೇಷ ರೈಲು ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ವಿದ್ಯಾಭಾರತಿ ಫೌಂಡೇಷನ್ ಕಾರ್ಯದರ್ಶಿ ಅರುಣ್‌ ಕುಮಾರ್ ಹೇಳಿದ್ದಾರೆ. ಈ ವಿಶೇಷ ರೈಲಿನ ಟಿಕೆಟ್ ಯಾವುದೇ ಕೌಂಟರ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ದೊರೆಯುವುದಿಲ್ಲ. ಸಾಮಾನ್ಯ ವರ್ಗದಲ್ಲಿ ಪ್ರಯಾಣ ಮಾಡುವವರಿಗೆ ಎಲ್ಲ ವೆಚ್ಚ ಸೇರಿ ರು. 2,450 ಹಾಗೂ ಸ್ಲಿಪರ್ ವರ್ಗದಲ್ಲಿ ಪ್ರಯಾಣಿಸುವವರಿಗೆ 3,450 ರೂ.ಶುಲ್ಕ ನೀಡಬೇಕಾಗುತ್ತದೆ.

ಬೆಂಗಳೂರಿನಿಂದ ಮೇ 30ಕ್ಕೆ ಹೊರಡುವ ರೈಲು 31ಕ್ಕೆ ಶಿರಡಿ ತಲುಪಲಿದೆ. ಶಿರಡಿಯಿಂದ ಜೂ.1ಕ್ಕೆ ಹೊರಟು ಬೆಂಗಳೂರು ತಲುಪಲಿದೆ. ಭಕ್ತಾದಿಗಳಿಗೆ ರೈಲು ಪ್ರಯಾಣ ಹಾಗೂ ಶಿರಡಿಯಲ್ಲಿ ಸಸ್ಯಹಾರಿ ಊಟ, ತಿಂಡಿ, ಕಾಫಿ, ಕುಡಿಯಲು ಮಿನರಲ್ ನೀರು ನೀಡಲಾಗುತ್ತದೆ, ಶಿರಡಿಯಲ್ಲಿ ವಸತಿ ವ್ಯವಸ್ಥೆಯನ್ನು ಫೌಂಡೇಷನ್ ಮಾಡಿದೆ.

ಈ ರೈಲಿನಲ್ಲಿ ತರಳಿ ಶಿರಡಿಗೆ ಹೋಗಿಬರುಲು ಆಸಕ್ತಿ ಉಳ್ಳವರು ವಿದ್ಯಾಭಾರತಿ ಫೌಂಡೇಷನ್, ನಂ.25, 7ನೇ ಕ್ರಾಸ್, 5ನೇ ಮೇನ್, ಎನ್.ಆರ್. ಕಾಲೊನಿ, ಕೆನರಾ ಬ್ಯಾಂಕ್ ಎಟಿಎಂ ಎದುರು, ಬೆಂಗಳೂರು-19 ವಿಳಾಸಕ್ಕೆ ಅಥವ 8494977339 ನಂಬರ್ ಗೆ ಸಂಪರ್ಕಿಸಬಹುದಾಗಿದೆ.

ಶಿರಡಿಗೆ ವಿಶೇಷ ರೈಲು ಸೇವೆ

ಶಿರಡಿಗೆ ವಿಶೇಷ ರೈಲು ಸೇವೆ

ಶಿರಡಿ ಸಾಯಿಬಾಬಾ ಭಕ್ತರಿಗಾಗಿ ಬೆಂಗಳೂರಿನಿಂದ ಶಿರಡಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ವಿದ್ಯಾಭಾರತಿ ಫೌಂಡೇಷನ್ ಈ ರೈಲು ವ್ಯವಸ್ಥೆಯನ್ನು ಮಾಡಿದ್ದು, ಮೇ 30ರಿಂದ ಜೂ.1ರವರೆಗೆ ಈ ವಿಶೇಷ ರೈಲು ಯಾತ್ರೆಯನ್ನು ಆಯೋಜಿಸಲಾಗಿದೆ. ಆಸಕ್ತರು 8494977339 ನಂಬರ್ ಗೆ ಸಂಪರ್ಕಿಸಬಹುದಾಗಿದೆ.

ಕಬ್ಬು ಬೆಳೆಗಾರರ ಪರ ಅಖಾಡಕ್ಕಿಳಿದ ಕೃಷ್ಣ

ಕಬ್ಬು ಬೆಳೆಗಾರರ ಪರ ಅಖಾಡಕ್ಕಿಳಿದ ಕೃಷ್ಣ

ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡಿರುವ ಕೋಟ್ಯಂತರ ರೂಪಾಯಿ ಹಾಗೂ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ಘೋಷಿಸಿದ 150 ರೂ. ಬಾಕಿ ಹಣವನ್ನು ಕೂಡಲೇ ಪಾವತಿ ಮಾಡಬೇಕೆಂದು ಕೋರಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಸಿಎಂಗೆ ಅವರು ಸೋಮವಾರ ಪತ್ರ ಬರೆದಿದ್ದಾರೆ.

 11ರಿಂದ ದುಡ್ಡು ಕೊಡಿ ಇಲ್ಲ, ಸಕ್ಕರೆ ಕೊಡಿ ಚಳವಳಿ

11ರಿಂದ ದುಡ್ಡು ಕೊಡಿ ಇಲ್ಲ, ಸಕ್ಕರೆ ಕೊಡಿ ಚಳವಳಿ

ಸರ್ಕಾರ ಪ್ರತಿ ಟನ್ ಕಬ್ಬಿಗೆ ನಿಗದಿ ಮಾಡಿರುವ ದರವನ್ನು ಸಕ್ಕರೆ ಕಾರ್ಖನೆಗಳು ನೀಡಬೇಕು ಎಂದು ಬಿಜಾಪುರ ರೈತರು ಆಗ್ರಹಿಸಿದ್ದಾರೆ. ಪ್ರತಿ ಟನ್ ಕಬ್ಬಿಗೆ 2500 ರೂ.ವನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ, ಅದನ್ನು ಬಿಡುಗಡೆ ಮಾಡುತ್ತಿಲ್ಲ. ಆದ್ದರಿಂದ ಮೇ 11ರಿಂದ ದುಡ್ಡು ಕೊಡಿ ಇಲ್ಲವೇ ಸಕ್ಕರೆ ಕೊಡಿ ಚಳವಳಿ ಆರಂಭಿಸಲಾಗುವುದು ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀಮಂತ ದುದ್ದಗಿ ಹೇಳಿದ್ದಾರೆ.

 ಸಿದ್ದರಾಮಯ್ಯ ಪಾದಯಾತ್ರೆ ಹುಮ್ಮಸ್ಸು ಎಲ್ಲಿ ಹೋಯಿತು?

ಸಿದ್ದರಾಮಯ್ಯ ಪಾದಯಾತ್ರೆ ಹುಮ್ಮಸ್ಸು ಎಲ್ಲಿ ಹೋಯಿತು?

ಬಿಜೆಪಿ ಸರ್ಕಾರದ ಅಕ್ರಮ ಗಣಿಗಾರಿಕೆ ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ ಹುಮ್ಮಸ್ಸು ಈಗೆಲ್ಲಿ ಹೋಯಿತು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ಆರ್ ಹಿರೇಮಠ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಾಗಿ ಬಂದು ವರ್ಷವಾಗುತ್ತಾ ಬಂತು. ಆದರೆ ನಿಮ್ಮದೇ ಪಕ್ಷದ ಗಣಿ ಭ್ರಷ್ಟರಿಗೆ ಯಾವುದೇ ಶಿಕ್ಷೆಯಾಗಿಲ್ಲ. ಪ್ರಕರಣ ದಾಖಲಿಸಿಲ್ಲ. ಕ್ರಮವನ್ನೂ ಜರುಗಿಸಿಲ್ಲ ಎಂದು ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು

ಬಂಟರ ಸಂಘದ ಶತಮನೋತ್ಸವ

ಬಂಟರ ಸಂಘದ ಶತಮನೋತ್ಸವ

ಬಂಟರ ಯಾನೆ ನಾಡವರ ಮಾತೃಸಂಘ(ರಿ) ಮಂಗಳೂರು ಇದರ ಶತಮಾನೋತ್ಸವ ಮತ್ತು ಜಾಗತಿಕ ಬಂಟರ ಮಹಾ ಸಮ್ಮೇಳನ ಮೇ 9ರಂದು ಸಂಜೆ 5-30ಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್‍ನಲ್ಲಿ ಜರಗಲಿದೆ.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಸಂಸದ ಜಯಪ್ರಕಾಶ ಹೆಗ್ಡೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

English summary
Super fast news bites from interior Karnataka : Vidya Bharati Foundation Bangalore has organized special train to Sai Baba temple of Shirdi. Interested People can contact to 8494977339 no.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X