ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಭಿನ್ನಮತೀಯರ ಗುಂಪಿನಲ್ಲಿ ಯಾರ್ಯಾರಿದ್ದಾರೆ ಗೊತ್ತಾ?

By Nayana
|
Google Oneindia Kannada News

ಬೆಂಗಳೂರು, ಜೂನ್ 8: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಭಿನ್ನಮತ ಇದೀಗ ಸಾಂಖ್ಯಿಕ ಸ್ವರೂಪ ಪಡೆಯುತ್ತಿದ್ದು, 20 ಕ್ಕೂ ಹೆಚ್ಚು ಜನ ಅತೃಪ್ತ ಶಾಸಕರು ಒಂದೆರೆಡು ದಿನಗಳಲ್ಲಿ ಸಭೆ ನಡೆಸಿ ಹೈಕಮಾಂಡ್‌ಗೆ ನೇರವಾಗಿ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.

ಪ್ರಮುಖವಾಗಿ ಉತ್ತರ ಕರ್ನಾಟಕಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು, ಸಚಿವ ಸಂಪುಟದಲ್ಲಿ ಅಸಮತೋಲನ ಉಂಟಾಗಿದ್ದು, ಕೆಲವು ಜಾತಿ ಹಾಗೂ ಪ್ರದೇಶಕ್ಕೆ ಹೆಚ್ಚು, ಅವಕಾಶ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕಕ್ಕೆ ಉಪಮುಖ್ಯಮಂತ್ರಿ ಸ್ಥಾನ ಹುದ್ದೆ ಕೊಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಭೆ ನಡೆಸಲು ಶಾಸಕರು ನಿರ್ಧರಿಸಿದ್ದಾರೆ.

ಕ್ಯಾಬಿನೆಟ್ ಬಸ್ ಮಿಸ್ ಮಾಡಿಕೊಂಡ ಪ್ರಮುಖ ಕಾಂಗ್ರೆಸ್ ಶಾಸಕರುಕ್ಯಾಬಿನೆಟ್ ಬಸ್ ಮಿಸ್ ಮಾಡಿಕೊಂಡ ಪ್ರಮುಖ ಕಾಂಗ್ರೆಸ್ ಶಾಸಕರು

ಮಾಜಿ ಸಚಿವರಾದ ಎಂಬಿ ಪಾಟೀಲ್, ಎಚ್‌ಕೆ ಪಾಟೀಲ್, ಸತೀಶ್‌ ಜಾರಕಿಹೊಳಿ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಭಿನ್ನಮತೀಯರ ಗುಂಪಿನಲ್ಲಿ ಸೇರಿದ್ದು ಕಾಂಗ್ರೆಸ್‌ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಮಾಜಿ ಸಚಿವ ಎಂಬಿ ಪಾಟೀಲ್‌ ಅವರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಹಿರಿಯ ಸಚಿವರು ಭೇಟಿ ಮಾಡಿ ಚರ್ಚಿಸಿದ್ದು, ಮತ್ತೋರ್ವ ಶಾಸಕ ಎಚ್‌ಕೆ ಪಾಟೀಲ್‌ ಜತೆಗೆ ಸಚಿವ ಆರ್‌ವಿ ದೇಶಪಾಂಡೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Dissident MLAs unite worried congress High command

ಆದರೆ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಪಕ್ಷಕ್ಕೆ ತಲೆನೋವಾಗಿದೆ,

ಕಾಂಗ್ರೆಸ್‌ನಲ್ಲಿ 20 ಭಿನ್ನಮತೀಯರ ಗುಂಪಿನಿಂದ ಡಿಸಿಎಂ ಬೇಡಿಕೆ: ಯಾರ್ಯಾರಿದ್ದಾರೆ?

ಸತೀಶ್‌ ಜಾರಕಿಹೊಳಿ- ಯಮಕನಮರಡಿ
ಎಂಟಿಬಿ ನಾಗರಾಜ್-ಹೊಸಕೋಟೆ
ಎನ್ಎ ಹ್ಯಾರಿಸ್- ಶಾಂತಿನಗರ
ಡಾ. ಸುಧಾಕರ್- ಚಿಕ್ಕಬಳ್ಳಾಪುರ
ಬಿ.ಸಿ. ಪಾಟೀಲ್- ಹಿರೆಕೆರೂರು
ಎಚ್‌.ಕೆ. ಪಾಟೀಲ್-ಗದಗ
ಈಶ್ವರ್ ಖಂಡ್ರೆ-ಬಾಲ್ಕಿ
ಸಿಎಸ್‌ ಶಿವಳ್ಳಿ-ಕುಂಡಗೋಳ
ರಘುಮೂರ್ತಿ-ಚಳ್ಳಕೆರೆ
ರೋಷನ್ ಬೇಗ್-ಶಿವಾಜಿನಗರ
ಎಚ್‌.ಎಂ. ರೇವಣ್ಣ-ಚನ್ನಪಟ್ಟಣ
ಸಂಗಮೇಶ್‌-ಭದ್ರಾವತಿ
ತುಕಾರಾಂ-ಸಂಡೂರು
ಪಿ.ಟಿ. ಪರಮೇಶ್ವರ್ ನಾಯ್ಕ್-ಹಡಗಲಿ
ನಾಗೇಂದ್ರ-ಬಳ್ಳಾರಿ
ವಿ ಮುನಿಯಪ್ಪ-ಶಿಢ್ಲಘಟ್ಟ
ಶಿವರಾಂ ಹೆಬ್ಬಾರ್-ಯಲ್ಲಾಪುರ
ಭೀಮಾ ನಾಯ್ಕ್-ಉತ್ತರ ಕನ್ನಡ
ಬಿ. ನಾರಾಯಣ್-ಕೃಷ್ಣರಾಜಪೇಟೆ

English summary
More than 20 MLAs including MB Patil and HK patil have decided to ask deputy chief minister post for north karnataka before party high command
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X