ಮೋದಿ ಭಕ್ತಿ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದು ಏನು?
ಮೈಸೂರು & ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ನಂತರ, ಪ್ರತಾಪ್ ಸಿಂಹ ರೊಚ್ಚಿಗೆದ್ದಿದ್ದಾರೆ. ಒಂದು ಕಡೆ ತಮ್ಮದೇ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿಯನ್ನ ನಡೆಸುತ್ತಿರುವ ಪ್ರತಾಪ್ ಸಿಂಹ ಅವರು, ಇನ್ನೊಂದು ಕಡೆ ಪ್ರತಾಪ್ ಸಿಂಹ ತಮ್ಮ ಮೋದಿ ಭಕ್ತಿಯನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ್ದಾರೆ. ಹಾಗಾದರೆ ಇದೀಗ ಪ್ರತಾಪ್ ಸಿಂಹ ಅವರು ಹೇಳಿದ್ದಾದರೂ ಏನು? ರೋಚಕವಾದ ಮಾಹಿತಿಗೆ ಮುಂದೆ ಓದಿ.
ಹೌದು, ಪ್ರತಾಪ್ ಸಿಂಹ ಅವರ ಕೈತಪ್ಪಿರುವ ಮೈಸೂರು & ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಇದೀಗ ಮೈಸೂರು ರಾಜವಂಶಸ್ಥ ಯದುವೀರ್ ಅವರ ಪಾಲಾಗಿದೆ. ಹೀಗಾಗಿ ತಮ್ಮ ವಿರೋಧಿಗಳಿಗೆ & ಟಿಕೆಟ್ ತಪ್ಪಿಸಿದ ಕೇಂದ್ರದ ನಾಯಕರ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ತಾವು ಹೇಗೆ ಮೋದಿ ಭಕ್ತರಾಗಿದ್ದು, ಪತ್ರಕರ್ತರಾಗಿದ್ದ ಸಮಯದಲ್ಲೂ ತಾವು ಹೇಗೆ ಮೋದಿ ಪರವಾಗಿ ಇದ್ದದ್ದು? ಎಂಬುದನ್ನು ಪ್ರತಾಪ್ ಸಿಂಹ ತಮ್ಮ ಹಳೆಯ ಅಂಕಣದ ಉದಾಹರಣೆ ಮೂಲಕ ವಿರೋಧಿಗಳಿಗೆ ವಿವರಣೆ ನೀಡಿದ್ದಾರೆ.

ಪ್ರತಾಪ್ ಸಿಂಹರ ಮೋದಿ ಭಕ್ತಿ!
ಈ ಬಗ್ಗೆ ಟ್ವೀಟ್ ಮಾಡಿ 2004ರಲ್ಲಿ ತಾವೇ ಬರೆದಿದ್ದ ಪ್ರಧಾನಿ ಮೋದಿ ಪರವಾದ ಅಂಕಣ ಶೇರ್ ಮಾಡಿಕೊಂಡಿರುವ ಪ್ರತಾಪ್ ಸಿಂಹ ಅವರು, 'ನಾನು ಈ ಲೇಖನವನ್ನು ಬರೆದಿದ್ದು 2004 ಜೂನ್ 19 ರಂದು! ನಾನು 2014 ರಿಂದ ಮೋದಿ ಭಕ್ತನಾಗಿದ್ದಲ್ಲ, ನನ್ನ ಮೋದಿ ಭಕ್ತಿಗೂ 20 ವರ್ಷಗಳ ಹಿನ್ನೆಲೆ ಇದೆ. ಗುಜರಾತ್ ಹಿಂಸಾಚಾರವೇ ಲೋಕಸಭೆ ಚುನಾವಣೆ ಸೋಲಿಗೆ ಕಾರಣವೆಂದ ವಾಜಪೇಯಿಯವರನ್ನೂ ಟೀಕಿಸಿ ಬರೆದಿದ್ದೆ. ಗಾಳಿ ಸುದ್ದಿಗೆ ಕಿವಿಗೊಡಬೇಡಿ, ನಾನು ಅಧಿಕಾರಕ್ಕಾಗಿ ಮೋದಿ ಭಕ್ತನಾಗಿದ್ದಲ್ಲ!' ಅಂತಾ ಹೇಳಿದ್ದಾರೆ. ಈ ಮೂಲಕ ತಾವು 2004ರಿಂದಲೂ ಮೋದಿ ಭಕ್ತ ಎಂಬುದನ್ನು ಹೇಳಿಕೊಂಡಿದ್ದಾರೆ ಸಿಂಹ.
ಪತ್ರಕರ್ತ ಸಿಂಹ ಟು ಸಂಸದ ಸಿಂಹ!
ಪ್ರತಾಪ್ ಸಿಂಹ ಹಿಂದೆ ಕನ್ನಡದ ಪ್ರತಿಷ್ಠಿತ ಸುದ್ದಿ ಪತ್ರಿಕೆಗಳ ಅಂಕಣಕಾರನಾಗಿ ಇದ್ದರು. ಬೆತ್ತಲೆ ಜಗತ್ತು & ಬೆತ್ತಲೆ ಪ್ರಪಂಚ ಕಾಲಂ ಮೂಲಕ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದರು. ಬಿಜೆಪಿ & ಕಾಂಗ್ರೆಸ್ ಪಕ್ಷದ ನಾಯಕರನ್ನು ನೇರವಾಗಿ ಟೀಕಿಸಿ ಬರೆದು ಫೇಮಸ್ ಆದರು. ಆದರೆ ಇದೇ ಸಿಂಹ ಮುಂದೆ ಬಿಜೆಪಿ ಪಕ್ಷವನ್ನು ಸೇರಿ, ತಾವು ಟೀಕೆ ಮಾಡಿದ್ದ ನಾಯಕರ ಜೊತೆಯಲ್ಲೇ ವೇದಿಕೆ ಹಂಚಿಕೊಂಡರು. ಅದು ಮುಂದೆ ದೊಡ್ಡ ಚರ್ಚೆಗೂ ವೇದಿಕೆ ಒದಗಿಸಿತ್ತು. ಹೀಗಿದ್ದಾಗ ಪ್ರತಾಪ್ ಸಿಂಹ ಅವರಿಗೆ ಮೈಸೂರು & ಕೊಡಗು ಕ್ಷೇತ್ರದಲ್ಲಿ ಟಿಕೆಟ್ ಮಿಸ್ ಆದ ನಂತರ ದೊಡ್ಡ ಅಸಮಾಧಾನ ಭುಗಿಲೆದ್ದಂತೆ ಕಾಣುತ್ತಿದೆ.
ನಾನು ಈ ಲೇಖನವನ್ನು ಬರೆದಿದ್ದು 2004 ಜೂನ್ 19 ರಂದು!
— Pratap Simha (Modi Ka Parivar) (@mepratap) March 16, 2024
ನಾನು 2014 ರಿಂದ ಮೋದಿ ಭಕ್ತನಾಗಿದ್ದಲ್ಲ, ನನ್ನ ಮೋದಿ ಭಕ್ತಿಗೂ 20 ವರ್ಷಗಳ ಹಿನ್ನೆಲೆ ಇದೆ. ಗುಜರಾತ್ ಹಿಂಸಾಚಾರವೇ ಲೋಕಸಭೆ ಚುನಾವಣೆ ಸೋಲಿಗೆ ಕಾರಣವೆಂದ ವಾಜಪೇಯಿಯವರನ್ನೂ ಟೀಕಿಸಿ ಬರೆದಿದ್ದೆ. ಗಾಳಿ ಸುದ್ದಿಗೆ ಕಿವಿಗೊಡಬೇಡಿ, ನಾನು ಅಧಿಕಾರಕ್ಕಾಗಿ ಮೋದಿ ಭಕ್ತನಾಗಿದ್ದಲ್ಲ! pic.twitter.com/avk1bLzoGw
ಪ್ರತಾಪ್ ಸಿಂಹ ಗೆಲುವಿನ ಇತಿಹಾಸ
2014ರಲ್ಲಿ ಬರೋಬ್ಬರಿ 5,03,908 ಮತ ಪಡೆದಿದ್ದ ಪ್ರತಾಪ್ ಸಿಂಹ ಅವರು, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಆಗ ಇವರ ಎದುರು ನಿಂತಿದ್ದ ಎಚ್. ವಿಶ್ವನಾಥ್, 4,72,300 ಮತ ಪಡೆದಿದ್ದರು. 2019ರಲ್ಲಿ 6,88,974 ಮತ ಪಡೆದಿದ್ದರು ಪ್ರತಾಪ್ ಸಿಂಹ ಆಗ ಎದುರಾಳಿ ಆಗಿದ್ದ ಸಿ.ಎಚ್. ವಿಜಯಶಂಕರ್ 5,50,327 ಮತಗಳ ಪಡೆದಿದ್ದರು. ಈಗ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದ್ದು, ಮೈಸೂರು ರಾಜವಂಶಸ್ಥರಾದ ಯದುವೀರ್‌ಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.












Click it and Unblock the Notifications