ಶಾಶ್ವತ ಅಂಗವೈಕಲ್ಯ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್

Subscribe to Oneindia Kannada

ಬೆಂಗಳೂರು, ಜುಲೈ, 19: ಶಾಶ್ವತ ಅಂಗವೈಕಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಕುಷ್ಠರೋಗ, ಅಂಗವೈಕಲ್ಯ, ಕುರುಡು, ಕಿವುಡು, ಬುದ್ಧಿಮಾಂದ್ಯತೆಯಂಥಹ ಸಮಸ್ಯೆ ಹೊಂದಿರುವವರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲಾಗುವುದು. ಈ ಮೂಲಕ ಅವರ ಜೀವನದಲ್ಲಿ ಬದಲಾವಣೆ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.[ತೊಗರಿ ಬೇಳೆ ದಾಸ್ತಾನಿಗೆ ಸರ್ಕಾರದ ಕಡಿವಾಣ]

 Disabled may get BPL card facility: U T Khader

ಕಾರ್ಡ್ ಪಡೆಯುವ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸಲಾಗುವುದು. ಅಕ್ರಮ ಪಡಿತರ ಚೀಟಿದಾರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.[ಎಪಿಎಲ್ ಕಾರ್ಡ್‌ದಾರರಿಗೆ ಜೂ.1ರಿಂದ ಅಕ್ಕಿ ಭಾಗ್ಯ]

'ಅನ್ನಭಾಗ್ಯ' ಯೋಜನೆಯನ್ನು ಇನ್ನಷ್ಟು ಸಮಪರ್ಕವಾಗಿ ಅನುಷ್ಠಾನ ಮಾಡಲಾಗುವುದು. ರಾಜ್ಯದ ಯಾವ ಕುಟುಂಬವೂ ಹಸಿವಿನಿಂದ ನರಳಬಾದರದು. ಅದಕ್ಕಾಗಿ ಸರ್ಕಾರ ಸುಧಾರಣೆ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು. ಕ್ಯಾನ್ಸರ್ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರಿಗೂ ಬಿಪಿಎಲ್ ಕಾರ್ಡ್ ನೀಡುತ್ತೇವೆ ಎಂದು ಖಾದರ್ ಕೆಲ ದಿನಗಳ ಹಿಂದೆ ಘೋಷಣೆ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Food and Civil Supplies department is contemplating extending the BPL card facility to disabled. Food and Civil Supplies Minister U T Khader told that the department would place such a proposal before the government shortly.
Please Wait while comments are loading...