Diesel Price: ರಾಜ್ಯ ಸರ್ಕಾರದಿಂದ ಜನತೆಗೆ ಹೊಸ ಶಾಕ್‌! ಡೀಸೆಲ್ ಬೆಲೆ 2 ರೂಪಾಯಿ ಹೆಚ್ಚಳ

ಹಲವು ಭಾಗ್ಯಗಳನ್ನು ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಇದೀಗ ಒಂದೊಂದಾಗೆ ಬೆಲೆ ಏರಿಕೆ ಭಾಗ್ಯಗಳನ್ನು ಕರುಣಿಸುತ್ತಿದೆ. ಹಾಲಿನ ದರ ಏರಿಕೆ, ಕಸ ಸಂಗ್ರಹಣೆಗೂ ಶುಲ್ಕ ವಿಧಿಸುವ ನಿರ್ಧಾರದ ಬಳಿಕ ಇದೀಗ ಏಕಾಏಕಿ ಡೀಸೆಲ್ ಮೇಇನ ಮಾರಾಟ ತೆರಿಗೆಯನ್ನು ಹೆಚ್ಚಿಸಲಾಗಿದೆ. ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ನೀಡಿದ್ದು ರಾಜ್ಯದಲ್ಲಿ ಡೀಸೆಲ್ ಮತ್ತಷ್ಟು ದುಬಾರಿಯಾಗಲಿದೆ.

ಶೇ. 2.73 ತೆರಿಗೆ ಹೆಚ್ಚಳವಾದ ಬಳಿಕ ಪ್ರತಿ ಲೀಟರ್ ಡೀಸೆಲ್ ಬೆಲೆ ಇದೀಗ 2 ರೂಪಾಯಿ ಹೆಚ್ಚಾಗಲಿದೆ. ಈ ಮೊದಲು ಶೇ. 18.44 ರಷ್ಟು ಇದ್ದ ತೆರಿಗೆಯನ್ನು ಈಗ 21.17ಕ್ಕೆ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಡೀಸೆಲ್ ಬೆಲೆ 88.99 ರೂಪಾಯಿಗೆ ಮಾರಾಟವಾಗುತ್ತಿದೆ. ಈಗ ಮತ್ತಷ್ಟು ದುಬಾರಿಯಾಗಲಿದೆ.

diesel price increase by rs 2 per litre karnataka sales tax hike

ರಾಜ್ಯದ ಜನರ ಮೇಲಿನ ಹೊರೆ ಕಡಿಮೆ ಮಾಡುವುದಾಗಿ ಭಾಷಣ ಮಾಡಿ, ಜನಪರ ಆಡಳಿತ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಇದೀಗ ಜನರಿಗೆ ಒಂದರ ಮೇಲೋಂದು ಬೆಲೆ ಏರಿಕೆ ಶಾಕ್ ಕೊಡುತ್ತಲೇ ಇದೆ. ಬಿಜೆಪಿ ಭ್ರಷ್ಟಾಚಾರದಿಂದ ಬೇಸತ್ತು ಕಾಂಗ್ರೆಸ್‌ಗೆ ಮತ ಹಾಕಿದ್ದವರಿಗೆ ಇದೀಗ ತಲೆ ಚಚ್ಚಿಕೊಳ್ಳುವಂತಾಗಿದೆ.

ಒಂದೊಂದೇ ಹೊರೆ ಹೆಚ್ಚಿಸುತ್ತಿರುವ ಸರ್ಕಾರ

ಈಗಾಗಲೇ ಹಾಲಿನ ದರ, ವಿದ್ಯುತ್ ದರ ಹೆಚ್ಚಳ ಮಾಡಿದೆ. ಇದೀಗ ಡೀಸೆಲ್ ದರ ಏರಿಕೆಯಿಂದ ಹಲವು ದಿನಬಳಕೆ ವಸ್ತುಗಳ ಸಾಗಾಣೆ ವೆಚ್ಚ ಕೂಡ ಹೆಚ್ಚಾಗಲಿದ್ದು ಅವುಗಳ ಬೆಲೆ ಕೂಡ ಗಗನಕ್ಕೇರುವ ಸಾಧ್ಯತೆ ಇದೆ. ಕಳೆದ ವರ್ಷ ಕೂಡ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿತ್ತು. ತೆರಿಗೆ ಹೆಚ್ಚಿಸಿದ್ದ ಕಾರಣ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ದುಬಾರಿಯಾಗಿತ್ತು.

ಕಸ ಸಂಗ್ರಹಣೆಗೂ ಶುಲ್ಕ

ಬೆಂಗಳೂರಿನಲ್ಲಿ ಕಸ ಸಂಗ್ರಹಣೆಗೂ ಶುಲ್ಕ ವಿಧಿಸಲು ಮುಂದಾಗಿದೆ. ಅಂಗಡಿಗಳ ಕಸಕ್ಕೂ ತೆರಿಗೆ ಕಟ್ಟಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸೂಚನೆ ಕೊಟ್ಟಿದೆ. ಬಿಬಿಎಂಪಿ ಬಜೆಟ್ನಲ್ಲೂ ಈ ಬಗ್ಗೆ ಘೋಷಣೆ ಮಾಡಿದ್ದು ಕಸ ಸಂಗ್ರಹಣೆ ಶುಲ್ಕದ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ವ್ಯಾಪಕ ಆಕ್ರೋಶ

ಉಚಿತ ಘೋಷಣೆಗಳನ್ನು ಕೊಡಲು ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜನಸಾಮಾನ್ಯರಿಗೆ ದಿನೇ ದಿನೇ ಹೊರೆ ಹೆಚ್ಚಾಗುತ್ತಿದ್ದು, ನಿಮ್ಮ ಕೂಲಿ ಕೊಡಲು ಆಗದಿದ್ದರೆ ಉಚಿತ ಭಾಗ್ಯಗಳನ್ನು ನಿಲ್ಲಿಸಿ ಎಂದು ಅಸಮಾಧಾನಗೊಂಡಿದ್ದಾರೆ. ವಿಪಕ್ಷಗಳು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದು, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+