ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಫೋಟೋ ವೈರಲ್: ಸಿ.ಎಂ ಸ್ಟ್ಯಾಂಡ್‌ಗೆ ವಿರೋಧ!

ಧರ್ಮಸ್ಥಳದ ಸೌಜನ್ಯ ಅವರ ಪ್ರಕರಣದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಧರ್ಮಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿರುವ ಫೋಟೋವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರೇ ಹೇಳಿರುವ ಮಾತುಗಳನ್ನು ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು. ಸಮೀರ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ನಡೆದುಕೊಳ್ಳುತ್ತಿರುವ ರೀತಿಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಮೀರ್ ಅವರು ಸೌಜನ್ಯ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಸುದೀರ್ಘ ವಿಡಿಯೋ ಮಾಡಿದ್ದು. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಇಲ್ಲಿಯ ವರೆಗೆ ಆ ವಿಡಿಯೋವನ್ನು ಒಂದು ಕೋಟಿಗೂ ಹೆಚ್ಚು ಜನ ನೋಡಿದ್ದಾರೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ನಿಲುವೇನು ಎನ್ನುವ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ.

ಈ ಸಂಬಂಧ ಸೋಷಿಯಲ್‌ ಮೀಡಿಯಾದಲ್ಲಿ ಸಿದ್ದರಾಮಯ್ಯ ಅವರು ಈ ಹಿಂದೆ ಹೇಳಿದ್ದರು ಎನ್ನುವ ಮಾತುಗಳನ್ನು ಪತ್ರಕರ್ತ ನವೀನ್ ಸೂರಿಂಜೆ ಅವರು ಹಂಚಿಕೊಂಡಿದ್ದಾರೆ. "ನಾನು 1989ರ ಚುನಾವಣೆಯಲ್ಲಿ ಸೋತು ಸಚಿವ ಸ್ಥಾನ ಕಳೆದುಕೊಂಡಿದ್ದೆ. ಆಗ ಒಂದು ಸಲ ಕೇರಳದ ಗುರುವಾಯೂರು ದೇವಸ್ಥಾನಕ್ಕೆ ನನ್ನ ಗೆಳೆಯ ರಾಮೇಗೌಡ ಜೊತೆ ಹೋಗಿದ್ದೆ. ಶರ್ಟ್ ಬಿಚ್ಚಿ ದೇವಸ್ಥಾನದ ಒಳ ಬನ್ನಿ ಎಂದು ಹೇಳಿದರು. ಯಾಕೆ ಶರ್ಟ್ ಬಿಚ್ಚಬೇಕು ಎಂದು ನಾನು ಕೇಳಿದೆ. ಶರ್ಟು ಬಿಚ್ಚಿಯೇ ಬರಬೇಕು ಅಂದರು. ಆಗ ನಾನು 'ಚಡ್ಡಿ ಹಾಕಿಕೊಂಡಿದ್ದೇನೆ' ಎಂದು ಹೇಳಿದೆ. ಹಾಕಿಕೊಂಡ ಬಟ್ಟೆಗಳ ಪೈಕಿ ಕೊಳಕಾಗುವುದಾದರೆ ಚಡ್ಡಿ ತಾನೆ ಕೊಳಕಾಗಬೇಕು ? ಆದರೆ ದೇವಸ್ಥಾನ ಪ್ರವೇಶಿಸುವಾಗ ಚಡ್ಡಿ ಬಿಚ್ಚುವ ಹಾಗೆ ಇಲ್ಲ, ಶರ್ಟ್ ಬಿಚ್ಚಬೇಕಂತೆ. ಇದು ಯಾವ ಪದ್ಧತಿ ? ವೈಜ್ಞಾನಿಕವಾಗಿಯೂ ಸರಿ ಇಲ್ಲ. ಹಾಗಾಗಿ ನಾನು ಒಳ ಹೋಗದೇ ಹೊರಗಡೆಯೇ ದೇವರಿಗೆ ಕೈಮುಗಿದು ಬಂದುಬಿಟ್ಟೆ. - ಸಿದ್ದರಾಮಯ್ಯ 16.12.2012ರ ವಿಧಾನಸಭೆ ಭಾಷಣ ಎಂದು ಅವರು ಹಂಚಿಕೊಂಡಿದ್ದಾರೆ.

Dharmasthala Soujanya Case Siddaramaiahs Photo in Dharmasthala Goes Viral Opposition to CM Stand

ಮುಂದುವರಿದು ಸೌಜನ್ಯ ಪರ ಮಾತನಾಡಿದ ಯೂಟ್ಯೂಬರ್ ಸಮೀರ್ ವಿರುದ್ಧ ಸರ್ಕಾರ ಸುಮೊಟೋ ಕೇಸ್ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಟ್ಟೆ ಬಿಚ್ಚಿ ಧರ್ಮಸ್ಥಳಕ್ಕೆ ಹೋಗಿ ಧರ್ಮಾಧಿಕಾರಿಯನ್ನು ಭೇಟಿ ಮಾಡಿರುವ ಫೋಟೋ ವೈರಲ್ ಆಗಿದೆ. ದೇವಸ್ಥಾನಗಳಲ್ಲಿ ಅಂಗಿ ಬಿಚ್ಚುವ ಪದ್ಧತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಯಭಾರಿ ಆಗಿದ್ದಾರೇನೋ ಎನ್ನುವಷ್ಟು ಹೇಸಿಗೆ ಹುಟ್ಟಿಸುವಷ್ಟು ಫೋಟೋ ವೈರಲ್ ಆಗುತ್ತಿದೆ. ಹಾಗಾಗಿ 16.12.2011 ರಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಮಾತನಾಡಿರುವ ಭಾಷಣದ ಆಯ್ದ ಭಾಗವನ್ನು ಓದಿಕೊಳ್ಳಬಹುದು ಎಂದು ನವೀನ್ ಸೂರಿಂಜೆ ಅವರು ಹೇಳಿದ್ದಾರೆ. ಇದೀಗ ಈ ಪೋಸ್ಟ್‌ ಸಹ ವೈರಲ್ ಆಗುತ್ತಿದೆ.

ಬರಹಗಾರ ನಾಗೇಗವ್ಡ ಕೆ.ಎಸ್ ಅವರು, ದಿನ ಬೆಳಿಗ್ಗೆ ಎದ್ದು ಸಂವಿಧಾನದ ರಕ್ಷಕರು ನಾವು ಅಂತ ಹೇಳಿಕೊಳ್ಳುವ ಸರ್ಕಾರ ಜನರಲ್ಲಿ ಒಂದು ರೀತಿಯ Chilling effect ಹುಟ್ಟು ಹಾಕುತ್ತಿದೆ. ಇದು ಇವರ ಸಾಂವಿಧಾನಿಕ ಮೌಲ್ಯ ಎಂದಿದ್ದಾರೆ. ಜನ ಅನ್ಯಾಯದ ವಿರುದ್ಧ ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಚರ್ಚೆ ಮಾಡಿಕೊಳ್ಳುವುದನ್ನು ಕಾನೂನು ಮತ್ತು ಸುವ್ಯವಸ್ಥೆ ಎನ್ನುವ ಹೆಸರಿನಲ್ಲಿ ಕಣ್ಗಾವಲು ಮಾಡುತ್ತಿದೆ. ಜನ ಧೈರ್ಯವಾಗಿ, ಮುಕ್ತವಾಗಿ ಅನ್ಯಾಯದ ವಿರುದ್ಧ ಮಾತನಾಡದಂತೆ Chilling effect ಹುಟ್ಟುಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಸಾರ್ವಜನಿಕವಾಗಿ ಚರ್ಚೆಯಲ್ಲಿ ಇರುವ ವಿಚಾರಗಳನ್ನೇ ಇಟ್ಟುಕೊಂಡು ವಿಡಿಯೋ ಮಾಡಿದವರಿಗೆ ಪೋಲಿಸ್ ನೋಟಿಸ್ ಕೊಡುತ್ತೆ. ಇದು ಕೂಡ ಒಂದು ರೀತಿಯ Chilling effect. ಮತ್ತೆ ಯಾರೊಬ್ಬರೂ ಈ ವಿಚಾರವಾಗಿ ವಿಡಿಯೋ ಮಾಡಬಾರದು ಅಂತ ಭಯ ಹುಟ್ಟಿಸುತ್ತಿರುವುದು.

ಇವರುಗಳು ನಮಗೆ ಸಂವಿಧಾನ, ಮೂಲಬೂತ ಹಕ್ಕುಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಕತೆ ಹೇಳುತ್ತಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+