ಧರ್ಮಸ್ಥಳದ ನ್ಯಾಯ ಸಂಪ್ರದಾಯದ ಮೇಲೆ ದಾಳಿ: ವೈಯಕ್ತಿಕ ದ್ವೇಷದ ವೇಷ ಧರಿಸಿ ಹುನ್ನಾರ!
ಶತಮಾನಗಳಿಂದಲೂ ಧರ್ಮಸ್ಥಳವು ಕೇವಲ ತೀರ್ಥಯಾತ್ರೆಯ ಸ್ಥಳವಾಗಿ ಉಳಿದಿಲ್ಲ. ಇದು 'ನ್ಯಾಯ' ಸಂಪ್ರದಾಯದ ಶ್ರೇಷ್ಠ ನೆಲೆಯಾಗಿದೆ ರೂಪುಗೊಂಡಿದೆ. ನ್ಯಾಯ, ನಂಬಿಕೆ ಮತ್ತು ಸಮುದಾಯದ ಒಮ್ಮತದ ಮೇಲೆ ನಿರ್ಮಿಸಲಾದ ಪವಿತ್ರ ವ್ಯವಸ್ಥೆಯಾಗಿ ನಿರ್ಮಾಣಗೊಂಡಿದೆ. ಇಂದು ಈ ಸಂಪ್ರದಾಯವು ನಕಲಿ ಹೋರಾಟಗಳಿಂದ ಆಕ್ರಮಣಕ್ಕೆ ಒಳಗಾಗಿದೆ. ಆದರೆ, ಈ ಹೋರಾಟಗಳನ್ನು ವಾಸ್ತವದಲ್ಲಿ ವೈಯಕ್ತಿಕ ದ್ವೇಷಗಳಿಂದ ನಡೆಸಲಾಗುತ್ತಿದೆ ಎಂಬುದು ಮಾತ್ರ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಈ ಅಭಿಯಾನದ ಕೇಂದ್ರಬಿಂದು ಸ್ವಯಂಘೋಷಿತ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ. ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಗ್ರಾಮದಲ್ಲಿ ಜನಿಸಿದ ಮಹೇಶ್ ಅವರು ಸಮಾಜದಲ್ಲಿ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ನ್ಯಾಯಾಲಯದ ದಾಖಲೆಗಳು ಬೇರೆಯದೇ ಸತ್ಯಗಳನ್ನು ಹೇಳುತ್ತವೆ. ಅವು ಧರ್ಮಸ್ಥಳದ ನ್ಯಾಯ ವ್ಯವಸ್ಥೆಯಡಿಯಲ್ಲಿ ಇತ್ಯರ್ಥವಾದ ಭೂ ವಿವಾದಗಳಲ್ಲಿ ತಿಮರೋಡಿಯ ಸೋಲಿನ ಕಥೆಗಳಾಗಿವೆ. ಈ ತೀರ್ಪುಗಳು ಅವರಲ್ಲಿ ವೈಯುಕ್ತಿಕ ದ್ವೇಷಗಳನ್ನು ಹುಟ್ಟುಹಾಕಿದ್ದು, ಸಂಸ್ಥೆಯ ದೈವಿಕ ಹೆಸರನ್ನು ಕೆಡಿಸಲು ಪ್ರೇರಣೆಯನ್ನೂ ನೀಡಿವೆ ಎಂಬ ಮಾತುಗಳು ಕೇಳಿಬಂದಿವೆ.

2012ರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಹೇಶ್ ತಿಮರೋಡಿ ಸೌಜನ್ಯಳ ಪೋಷಕರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ. ಪೋಷಕರೊಂದಿಗೆ ಸೇರಿ ಅವರು ಹೋರಾಟಕ್ಕೆ ಇಳಿಯುತ್ತಾರೆ. ಇದು ಸ್ಥಳೀಯ ಸಮುದಾಯದ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಮಹೇಶ್ ಶೆಟ್ಟಿ ಅವರು ಸಂತ್ರಸ್ತರ ಕುಟುಂಬಗಳನ್ನು ಭಾವನಾತ್ಮಕ ಹತೋಟಿಯಲ್ಲಿ ಇಟ್ಟುಕೊಂಡು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ತಿಮರೋಡಿ ಅವರು ನೊಂದವರ ದುರಂತಗಳನ್ನು ಆರ್ಥಿಕ ಮತ್ತು ರಾಜಕೀಯ ಲಾಭದ ಸಾಧನಗಳನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಹಲವರು ಆರೋಪಿಸುತ್ತಾರೆ.
ಈ ಹೋರಾಟವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಹೋರಾಟದ ಹಿಂದೆ ಅತ್ಯಾಧುನಿಕ ಹಾಗೂ ಸಂಘಟಿತ ಅಭಿಯಾನಗಳು ಕೆಲಸ ಮಾಡುತ್ತಿವೆ. ಸಂಪನ್ಮೂಲಗಳನ್ನು ಕ್ರೋಡಿಕರಿಸಿಕೊಂಡು ಕೆಲ ಪಟ್ಟಭದ್ರ ಶಕ್ತಿಗಳು ವ್ಯಾಪಕವಾಗಿ ಪವಿತ್ರ ಸಂಸ್ಥೆಯ ಹೆಸರನ್ನು ಹಾಳು ಮಾಡುವ ಕಾರ್ಯಗಳಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೂ, ಸಂಪನ್ಮೂಲ ಹಾಗೂ ನಿಧಿಗಳ ಮೂಲವು ಎಲ್ಲಿದೆ ಎಂಬುದು ಅಸ್ಪಷ್ಟವಾಗಿದೆ. ನಕಲಿ ಹೋರಾಟಗಾರರ ಕಟ್ಟುಕಥೆಗಳಿಗೆ ಅನೂಕಲಕರವಾಗುವಂತಹ ಪರಿಸ್ಥಿತಿಗಳನ್ನು ನಿರ್ಮಿಸಲಾಗುತ್ತಿದೆ. ಈ ಹೋರಾಟಗಾರರು 'ಸತ್ಯ ಪರೀಕ್ಷೆಗಳಿಗೆ' ಒಳಗಾಗಲು ನಿರಾಕರಿಸುತ್ತಿದ್ದಾರೆ. ಇದ ಅವರ ಪ್ರಾಮಾಣಿಕತೆಯ ಬಗ್ಗೆ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಇದು ಕೇವಲ ಪ್ರಭಾವಿಗಳನ್ನು ಹೊಣೆಗಾರರನ್ನಾಗಿ ಮಾಡುವ ಕುತಂತ್ರವಲ್ಲ. ಶತಮಾನದಿಂದ ಪೂಜಿಸಲ್ಪಡುವ ಧರ್ಮಸ್ಥಳದ ನೈತಿಕ ಅಧಿಕಾರವನ್ನು ಅಸ್ಥಿರಗೊಳಿಸುವ ಹುನ್ನಾರವಾಗಿದೆ. ಗೌರವಾನ್ವಿತ ನ್ಯಾಯ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಕುಟಿಲ ಲೆಕ್ಕಾಚಾರದ ಭಾಗವಾಗಿದೆ. 'ನ್ಯಾಯದ ಭೂಮಿ' ಎಂದು ಹೆಸರುವಾಸಿಯಾದ ಧರ್ಮಸ್ಥಳವು ಇಂತಹ ಸೇಡಿನ ಅಭಿಯಾನಗಳಿಗೆ ಬಲಿಯಾದರೆ, ನಷ್ಟವು ಕೇವಲ ಧರ್ಮಸ್ಥಳಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ರಾಜ್ಯಕ್ಕೆ ಅತಿ ದೊಡ್ಡ ಹಾನಿಯಾಗಿ ಪರಿಣಮಿಸಲಿದೆ. ಅಸತ್ಯದ ವಿರುದ್ದ ಸತ್ಯವು ಜಯಗಳಿಸಬೇಕು ಎಂದು ನಂಬುವ ಪ್ರತಿಯೊಬ್ಬ ಮನುಷ್ಯ ಈ ಷಢ್ಯಂತ್ರವನ್ನು ಅರ್ಥಮಾಡಿಕೊಳ್ಳಬೇಕಿರುವುದು ಈಗಿನ ಅವಶ್ಯಕತೆಯಾಗಿದೆ.












Click it and Unblock the Notifications