ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳದ ಲಲಿತೋದ್ಯಾನ ಉತ್ಸವದ ಚಿತ್ರಗಳು

By ಸಚ್ಚಿದಾನಂದ ಆಚಾರ್ಯ, ಧರ್ಮಸ್ಥಳ
|
Google Oneindia Kannada News

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರದ ಜತೆಗೆ ಸರ್ವಧರ್ಮ ಸಮ್ಮೇಳನ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಲಕ್ಷದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದೆ. ಶುಕ್ರವಾರ ಲಲಿತೋದ್ಯಾನ ಉತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಧರ್ಮಸ್ಥಳ ಲಕ್ಷ ದೀಪೋತ್ಸವದ ಮೂರನೇ ದಿನದ ಅಂಗವಾಗಿ ಶುಕ್ರವಾರ ಲಲಿತೋದ್ಯಾನ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆದ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. [ಚಿತ್ರಗಳು: ಶ್ರೇಯಸ್ ಕೇಶವ್]

ಬೆಳ್ಳಿಯ ಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಮೂರ್ತಿಯ ಉತ್ಸವ ನಡೆಸಲಾಯಿತು. ದೇವಾಲಯದ ಒಳಾಂಗಣದಿಂದ ಆರಂಭಗೊಂಡ ಉತ್ಸವವು ಹೊರಾಂಗಣದಲ್ಲಿ ದೇವಸ್ಥಾನಕ್ಕೆ ಸುತ್ತು ಬಂದು ದೇವಸ್ಥಾನದ ರಥಬೀದಿಯಲ್ಲಿ ಸಾಗಿ ಲಲಿತೋದ್ಯಾನ ಪ್ರವೇಶಿಸಿತು. [ಲಕ್ಷ ದೀಪೋತ್ಸವದ ಚಿತ್ರಗಳನ್ನು ನೋಡಿ]

ನಂತರ ಲಲಿತೋದ್ಯಾನದ ಕಟ್ಟೆಯಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಪೂಜೆ ನಡೆಯಿತು. ದೇವಳದ ಆನೆ 'ಬಸವ' ಉತ್ಸವದಲ್ಲಿ ಪಾಲ್ಗೊಂಡು ಹೊಸ ಕಳೆ ತುಂಬಿತ್ತು. ಉತ್ಸವದ ಮುಂಭಾಗದಲ್ಲಿ ದಾಸಯ್ಯರ ಶಂಖ ಜಾಗಟೆಯ ಸದ್ದು ಮನೆ ಮಾಡಿತ್ತು. ವಿವಿಧ ವರ್ಣದ ಛತ್ರಿ, ಧ್ವಜಗಳು ಉತ್ಸವವನ್ನು ಆಕರ್ಷಣೀಯವಾಗಿಸಿದ್ದವು.

ಬ್ಯಾಂಡು ವಾಲಗಗಳ ಸದ್ದಿನೊಂದಿಗೆ ನಡೆದ ಉತ್ಸವವು ದೇವಳ ಪ್ರವೇಶಿಸುವುದರೊಂದಿಗೆ ಸಂಪನ್ನಗೊಂಡಿತು. ಸಹಸ್ರಾರು ಸಂಖ್ಯೆಯಲ್ಲಿದ್ದ ಭಕ್ತರು ದೇವರ ದರ್ಶನದಿಂದ ಧನ್ಯರಾದರು.

Veerendra Heggade
English summary
The Laksha Deepotsava is a spectacular annual event at Sri Kshetra, Dharmasthala. Lalithodyana Utsava held on November 21 at Vastu Pradarshana Mantapa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X