Dharmasthala Case: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್; 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ: ಶುರುವಾಯ್ತು ನಡುಕ!

ಮಂಗಳೂರು, ಜುಲೈ 31: ಧರ್ಮಸ್ಥಳದಲ್ಲಿ ಶವಗಳು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಅಸ್ಥಿಪಂಜರ ಪತ್ತೆಯಾಗಿದೆಎ. ತನಿಖೆ ನಡೆಸುತ್ತಿರುವ ಎಸ್ಐಟಿ (SIT) ಅಧಿಕಾರಿಗಳು ನೇತ್ರಾವತಿ ಸ್ನಾನಘಟ್ಟ ಸಮೀಪ ಹಲವು ಪಾಯಿಂಟ್ಗಳಲ್ಲಿ ಉತ್ಖನನ ನಡೆಸುತ್ತಿದ್ದು, 6ನೇ ಪಾಯಿಂಟ್‌ ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಮೆಷಿನ್ (ಹಿಟಾಚಿ) ಬಳಿಸಿ ತೆಗೆದಾಗ ಗುಂಡಿಯಲ್ಲಿ ಮೂಳೆ ತರಹದ ವಸ್ತುಗಳು ದೊರೆತಿದ್ದು, ಅವುಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಅಲ್ಲದೆ, ಇತರೆ ಸ್ಥಳಗಳಲ್ಲಿ ಹೊರತು 6ನೇ ಪಾಯಿಂಟ್ ನಲ್ಲಿ ಮಾತ್ರ ಈ ರೀತಿಯ ಅವಶೇಷ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನ ಮಹತ್ವದ ಬೆಳವಣಿಗೆ ನಡೆದಿದ್ದು, ಇಂದು ಉತ್ಪನನದ ವೇಳೆ 6 ನೇ ಪಾಯಿಂಟ್‌ ನಲ್ಲಿ ಅವಶೇಷ ಪತ್ತೆಯಾಗಿದೆ. ಆರೋಪಿ 13 ಸ್ಥಳಗಳ ಬಗ್ಗೆ ಮಾಹಿತಿಯನ್ನ ನೀಡಿದ್ರು. ಅದರ ಆಧಾರದ ಮೇಲೆ ಇಂದು ಮೂರನೇ ದಿನ ಕಾರ್ಯಚರಣೆ ವೇಳೆ 6 ನೇ ಪಾಯಿಂಟ್‌ ನಲ್ಲಿ ಅಸ್ಥಿಪಂಜರದ ಕೆಲವು ಭಾಗಗಳು ಪತ್ತೆಯಾಗಿದೆ ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿದೆ. ಶೋಧದ ವೇಳೆ ಪತ್ತೆಯಾದ ಮೂಳೆಗಳನ್ನು ಎಸ್‌ಐಟಿ ಸಂಗ್ರಹ ಮಾಡಿದೆ. 6 ನೇ ಪಾಯಿಂಟ್‌ನಲ್ಲಿ ಸಿಕ್ಕ ಅಸ್ಥಿಪಂಜರದ ಮೂಳೆಗಳನ್ನು ನಿಯಮ ಪ್ರಕಾರವಾಗಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳಿಸಲಾಗುತ್ತದೆ.

Dharmasthala Burial Case Human Bones Recovered At 6th Point

ಈ ಹಿಂದೆ ದೂರು ಕೊಟ್ಟ ಸಂದರ್ಭದಲ್ಲಿ 13 ಸ್ಥಳಗಳ ಬಗ್ಗೆ ಅನಾಮಿಕ ವ್ಯಕ್ತಿ ಮಾಹಿತಿ ನೀಡಿದ್ದರು. ಅದರಂತೆ ಅನಾಮಿಕ ವ್ಯಕ್ತಿ ಹೇಳಿದ ಜಾಗದಲ್ಲೇ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿದ್ದು, ಕೊನೆಗೂ ಮೂರು ದಿನದ ಬಳಿಕ ಎಸ್‌ಐಟಿ ತನಿಖೆಗೆ ಮಹ್ವತದ ಸುಳಿವು ಸಿಕ್ಕಂತಾಗಿದೆ. ಇದರ ಜೊತೆಗೆ ಅರಣ್ಯ ಮತ್ತು ಕಂದಾಯ ಇಲಾಖೆ ಕೂಡ ಆರನೇ ಜಾಗದಲ್ಲಿ ನಕ್ಷೆ ಪರಿಶೀಲನೆ ನಡೆಸಿದೆ. ಮೂರನೇ ದಿನಕ್ಕೆ ಶೋಧ ಕಾರ್ಯ ನಡೆಯುತ್ತಿದ್ದು, ಹಿಟಾಚಿಯಲ್ಲಿ ಇಂದು ಕಾರ್ಯಾಚರಣೆ ನಡೆಸಲಾಗಿತ್ತು.

ದೂರುದಾರ ಗುರುತಿಸಿದ ಸ್ಥಳಗಳ ಪೈಕಿ ಇದೀಗ 6ನೇ ಪಾಯಿಂಟ್‌ನಲ್ಲಿ 15 ಕಾರ್ಮಿಕರಿಂದ ಉತ್ಖನನ ನಡೆಯುತ್ತಿದ್ದು, ಎರಡು ಅಸ್ಥಿಪಂಜರ ಪತ್ತೆಯಾಗಿದೆ. ಇನ್ನೂ ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ತಲೆ ಬುರುಡೆ ಸೇರಿದಂತೆ ದೇಹದ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು, ಇನ್ನೂ ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ಸಿಕ್ಕಿರುವ ಕಳೇಬರವನ್ನು ಎಸ್‌ಐಟಿ ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ ಕಳುಹಿಸಲಿದ್ದಾರೆ. ಇನ್ನೂ ಇದರ ಬಳಿಕ 7 ಹಾಗೂ 8ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಇನ್ನು ಉತ್ಖನನ ನಡೆಸುವ ಸ್ಥಳದಲ್ಲಿ ನೇತ್ರಾವತಿ ನದಿ ನೀರಿನ ಒರತೆ ಇದ್ದ ಕಾರಣ, ಗುಂಡಿಯಲ್ಲಿ ನೀರು ತುಂಬಿತು. ನೀರನ್ನು ಹೊರ ತೆಗೆಯಲು ಪಂಪ್ ಸೆಟ್ ತರಿಸಿದ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡರು.
ಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರದ ಭಾಗಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಪೊಲೀಸರು ಅಗತ್ಯ ಪರಿಕರಗಳನ್ನು ಸ್ಥಳಕ್ಕೆ ತೆಗೆದುಕೊಂಡು ಹೋದರು. ಅಸ್ಥಿಗಳ ಸಂಗ್ರಹಕ್ಕೆ ಬಳಸಲು ಡಬ್ಬಿ ಉಪ್ಪು ಮತ್ತು ಪ್ಲಾಸ್ಟಿಕ್ ಕವರ್‌ಗಳನ್ನು ಪೊಲೀಸರು ಬಳಸಿದ್ದಾರೆ. ಪತ್ತೆಯಾದ ಮೂಳೆಗಳನ್ನು ಎಸ್ಐಟಿ ತಂಡ ಕಾನೂನು ಪ್ರಕ್ರಿಯೆಯ ಮೂಲಕ ಸರಿಯಾಗಿ ಸಂಗ್ರಹಿಸಿ ದಾಖಲಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+