ಪೊಲೀಸ್ ಮಹಾನಿರ್ದೇಶಕರು 10 ಸಾವಿರ ಕಳೆದುಕೊಂಡಿದ್ದು ಹೇಗೆ?

ಬೆಂಗಳೂರು, ಜೂ. 10 : ಕೆಡ್ರಿಟ್ ಕಾರ್ಡ್ ವಿವರ ಕೇಳಿದವರಿಗೆ ಎಲ್ಲಾ ವಿವರಗಳನ್ನು ಕೊಟ್ಟು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ 10 ಸಾವಿರ ಹಣ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಪೊಲೀಸರಿಗೆ ವಂಚನೆ ಮಾಡಿದ್ದು ಹೇಗೆ? ಎಂಬುದೇ ಕುತೂಹಲದ ಸಂಗತಿ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರ ಖಾತೆಯಿಂದ 10 ಸಾವಿರ ಹಣವನ್ನು ಪಡೆದ ಇಬ್ಬರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಆರೋಪಿಗಳು ಪೊಲೀಸರ ಕೈಗೆ ಸಿಗಲು 2 ತಿಂಗಳ ಕಾಲಾವಕಾಶ ಬೇಕಾಯಿತು. [ಬ್ಯಾಂಕ್ ಖಾತೆಗೆ ಕನ್ನ, ಒಂದೂವರೆ ಕೋಟಿ ಲೂಟಿ]

cyber crime

ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅಶ್ರಫ್ ಅಲಿ (26)ಯನ್ನು ಸೈಬರ್ ಕ್ರೈಂ ಪೊಲೀಸರ ವಿಶೇಷ ತಂಡ ಜೂ.6ರ ಶನಿವಾರ ದೆಹಲಿಯಲ್ಲಿ ಬಂಧಿಸಿದೆ. ಅಲಿ ಸಹಾಯಕ ದಿಲೀಪ್ ಕುಮಾರ್‌ನನ್ನು ಮೇ 26ರಂದು ಹಿಡಿದು ವಿಚಾರಣೆ ಮಾಡಿದಾಗ ವಂಚನೆಯ ಜಾಲ ಬಯಲಾಗಿದೆ. [ಸೈಬರ್ ಕ್ರೈಂ : 2 ವರ್ಷದ ಜೈಲು ಶಿಕ್ಷೆ]

ಪೊಲೀಸರಿಗೆ ಕರೆ ಮಾಡಿ ವಿವರ ಕೇಳಿದ : ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರಿಗೆ ಅಶ್ರಫ್ ಅಲಿ ಏಪ್ರಿಲ್ ತಿಂಗಳಿನಲ್ಲಿ ಕರೆ ಮಾಡಿದ್ದ. ತಾನು ಐಸಿಐಸಿಐ ಬ್ಯಾಂಕ್ ಉದ್ಯೋಗಿ, ನಿಮ್ಮ ಕ್ರೆಡಿಟ್ ಕಾರ್ಡ್ ಅವಧಿ ಮುಗಿಯುತ್ತಾ ಬಂದಿದ್ದು, ಅದನ್ನು ನವೀಕರಿಸುತ್ತೇವೆ ವಿವರಗಳನ್ನು ನೀಡಿದರೆ, ಶೀಘ್ರದಲ್ಲೇ ಹೊಸ ಕಾರ್ಡ್‌ಅನ್ನು ನಿಮಗೆ ನೀಡುತ್ತೇವೆ ಎಂದು ಹೇಳಿದ್ದ.

ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿರುವ ಎಲ್ಲಾ ವಿವರ ಮತ್ತು ಪಿನ್ ನಂಬರ್‌ಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದ. ಕರೆಯ ಬಗ್ಗೆ ಯಾವುದೇ ಅನುಮಾನ ಮೂಡದ ಓಂ ಪ್ರಕಾಶ್ ಅವರು ಎಲ್ಲಾ ಮಾಹಿತಿಯನ್ನು ನೀಡಿದ್ದರು. ಎರಡು ಗಂಟೆಯ ನಂತರ ಅವರ ಖಾತೆಯಿಂದ 10 ಸಾವಿರ ಹಣ ಡ್ರಾ ಆಗಿರುವ ಬಗ್ಗೆ ಮೊಬೈಲ್‌ಗೆ ಮೇಸೇಜ್ ಬಂದಿತ್ತು.

ದೂರು ಕೊಟ್ಟರು : ಹಣ ಡ್ರಾ ಆಗಿರುವುದನ್ನು ನೋಡಿದ ಓಂ ಪ್ರಕಾಶ್ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟರು. ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಲಾಯಿತು. ಶನಿವಾರ ಈ ತಂಡ ದೆಹಲಿಯ ಉತ್ತಾಮ್ ನಗರದಲ್ಲಿ ಆರೋಪಿ ಆಶ್ರಫ್ ಅಲಿಯನ್ನು ಬಂಧಿಸಿದೆ.

ಏ.21ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೇ 26ರಂದು ಅಲಿಯ ಸಹಚರ ದಿಲೀಪ್ ಕುಮಾರ್‌ನನ್ನು ಬಂಧಿಸಿದ್ದರು. ಈ ಇಬ್ಬರು ತಮಿಳುನಾಡು, ಗುಜರಾತ್‌ನಲ್ಲಿಯೂ ಈ ರೀತಿ ವಂಚನೆ ಮಾಡಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+