Get Updates
Get notified of breaking news, exclusive insights, and must-see stories!

ಆನಂದ್ ಸಿಂಗ್, ಪ್ರತಾಪ್ ಗೌಡ ಇದ್ದಾರೆ ಎನ್ನಲಾದ ಹೋಟೆಲ್ ಗೆ ಡಿಜಿಪಿ ಭೇಟಿ

ಬೆಂಗಳೂರು, ಮೇ 19: ಕಾಂಗ್ರೆಸ್ ಪಾಳಯದಿಂದ ನಾಪತ್ತೆಯಾಗಿರುವ ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಮಸ್ಕಿ ಶಾಸಕ ಪ್ರತಾಪ್ ಗೌಡ ತಂಗಿದ್ದಾರೆ ಎನ್ನಲಾದ ಹೋಟೆಲ್ ಗೆ ಡಿಜಿಪಿ ನೀಲಮಣಿ ರಾಜು ಮತ್ತು ಬೆಂಗಳೂರು ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ 'ಗೋಲ್ಡ್ ಫಿಂಚ್' ಹೋಟೆಲ್ ಭೇಟಿ ನೀಡಿದ್ದಾರೆ.

ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಹೆಸರಿನಲ್ಲಿ ಹೋಟೆಲ್ ಕೊಠಡಿ ಕಾಯ್ದಿರಿಸಲಾಗಿದೆ. ಈ ಹಿನ್ನಲೆಯಲ್ಲಿ ಡಿಜಿಪಿ ಮತ್ತು ಪೊಲೀಸ್ ಆಯುಕ್ತರು ಭೇಟಿ ಮಾಡಿದ್ದಾರೆ.

ಇಬ್ಬರೂ ಶಾಸಕರು ಪೊಲೀಸರಿಂದ ರಕ್ಷಣೆ ಕೋರಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಹೋಟೆಲ್ ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

DGP, Bengaluru Police Commissioner visits Gold Finch hotel for missing MLAs

ಇವರಿಬ್ಬರೂ ಸೋಮಶೇಖರ್ ರೆಡ್ಡಿ ವಶದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಹೇಳಿದ್ದಾರೆ. "ಅವರು ಪೈವೇಟ್ ಫ್ಲೈಟ್ ನಲ್ಲಿ ಬಂದು ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಇಳಿದಿದ್ದಾರೆ. ಈ ಮಾಹಿತಿ ಆನ್ಲೈನ್ ನಲ್ಲಿ ಲಭ್ಯವಿದೆ. ಬೇಕಿದ್ದರೆ ನೀವೂ ನೋಡಿ," ಎಂದು ಅವರು ಕಿಡಿಕಾರಿದ್ದಾರೆ.

ಇದಾದ ನಂತರ ಹೋಟೆಲ್ ಗೆ ಕಾಂಗ್ರೆಸ್ ನಾಯಕರಾದ ಎಚ್.ಎಂ. ರೇವಣ್ಣ ಮತ್ತು ಗೋವಿಂದರಾಜ್ ಭೇಟಿ ನೀಡಿದ್ದರು. ಆದರೆ ಅವರ ಕಣ್ಣಿಗೆ ಇಬ್ಬರೂ ಬಿದ್ದಿರಲಿಲ್ಲ. ಹೀಗಾಗಿ ನಂತರ ಪೊಲೀಸ್ ಅಧಿಕಾರಿಗಳು ಹೋಟೆಲ್ ಗೆ ಭೇಟಿ ನೀಡಿದ್ದಾರೆ.

ಇತ್ತೀಚಿನ ಮಾಹಿತಿಗಳ ಪ್ರಕಾರ ಇಡೀ ಹೋಟೆಲ್ ನ್ನು ಪೊಲೀಸರು ವಶಕ್ಕೆ ಪಡೆದು ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಅವರಿಗಾಗಿ ಹುಡುಕಾಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+