ಅಭಿವೃದ್ಧಿಯೊಂದೇ ಕೇಂದ್ರದ ಗುರಿ: ನರೇಂದ್ರ ಮೋದಿ
ನವದೆಹಲಿ, ಸೆ. 01: ವಿಪಕ್ಷಗಳಿಗೆ ಅಭಿವೃದ್ಧಿ ಬಗ್ಗೆ ಮಾತನಾಡುವ ಧೈರ್ಯವಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಮುಂದೆ ಇಡುತ್ತಿದ್ದೇವೆ. ಅದನ್ನು ಅನುಸರಿಸಿಕೊಂಡೆ ಬಿಹಾರದ ಅಭಿವೃದ್ಧಿ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳವಾರ ಬಿಹಾರದ ಭಾಗಲ್ ಪುರ್ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿ, ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಮೇಲೆ ವಾಗ್ದಾಳಿ ನಡೆಸಿದರು. ಅಭಿವೃದ್ಧಿಯೊಂದೇ ಕೇಂದ್ರ ಸರ್ಕಾರದ ಮುಂದಿನ ಗುರಿ ಎಂದು ಹೇಳಿದರು.[ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ]

ಜೆಡಿಯು, ಆರ್ ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಕೂಟ ಮೊದಲು ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಸವಾಲೆಸೆದರು. ಬಿಹಾರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 1.25 ಲಕ್ಷ ಕೋಟಿ ಅನುದಾನ ನೀಡಿದೆ. ಅದರ ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ನಾಗರಿಕರ ಮೇಲಿದೆ ಎಂಬುದನ್ನು ನೆನಪಿಸಿದರು.[ಬೆಂಗಳೂರು ಪೊಲೀಸರ ಕಾರ್ಯ ಶ್ಲಾಘಿಸಿದ ಮೋದಿ]
'ಅವರು ನನ್ನನ್ನು ದೂಷಣೆ ಮಾಡುತ್ತಿದ್ದಾರೆಯೇ ವಿನಃ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಪಾಟ್ನಾ ಸಮಾವೇಶದಲ್ಲೂ ಇಂಥದ್ದೆ ನಡವಳಿಕೆ ತೋರಿಸಿದ್ದಾರೆ' ಎಂದು ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಎಲ್ಲ ರಾಜಕೀಯ ಪಕ್ಷಗಳು ಈಗಲೇ ಚಟುವಟಿಕೆ ಆರಂಭಿಸಿವೆ.ಬಿಹಾರದಲ್ಲಿ ಮೋದಿಯವರ ನಾಲ್ಕನೇ ಪರಿವರ್ತನಾ ಸಮಾವೇಶ ಇದಾಗಿದೆ.












Click it and Unblock the Notifications