ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶಸ್ತಿ ವಾಪಸ್ ನೀಡಲಿದ್ದಾರೆ ದೇವನೂರು ಮಹಾದೇವ

|
Google Oneindia Kannada News

ಬೆಂಗಳೂರು, ನವೆಂಬರ್ 14 : ಪ್ರಶಸ್ತಿ ವಾಪಸ್ ನೀಡುವ ಅಭಿಯಾನಕ್ಕೆ ಸಾಹಿತಿ ದೇವನೂರು ಮಹಾದೇವ ಅವರು ಬೆಂಬಲ ವ್ಯಕ್ತಪಡಿಸಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ವಾಪಸ್ ನೀಡುವುದಾಗಿ ಘೋಷಿಸಿದ್ದಾರೆ.

ಶನಿವಾರ ಪ್ರಶಸ್ತಿ ವಾಪಸ್ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದೇವನೂರು ಮಹಾದೇವ ಅವರು, 'ತಮಗೆ ಸಿಕ್ಕ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ವಾಪಸ್ ಕೊಡಲು ನಿರ್ಧರಿಸಿರುವುದಾಗಿ' ತಿಳಿಸಿದ್ದಾರೆ. [ಪ್ರಶಸ್ತಿ ಹಿಂದಿರುಗಿಸಿದವರ ಪಟ್ಟಿ ಸೇರಿದ ಅರುಂಧತಿ ರಾಯ್]

devanur mahadeva

'ದೇಶದಲ್ಲಿ ಅಸಹಿಷ್ಣುತೆ ಅಟ್ಟಹಾಸ ಮೆರೆಯುತ್ತಿದೆ. ಹಿಂದೆ ಎಂದಿಗೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಇದು ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ' ಎಂದು ದೇವನೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 'ಪ್ರಶಸ್ತಿ ಪಡೆದ ವೇಳೆ ಸಿಕ್ಕ ಸ್ಥಾನಮಾನ ಹಿಂತಿರುಗಿಸಲಾಗಲ್ಲ. ಸಾಂಕೇತಿಕವಾಗಿ ಪ್ರಶಸ್ತಿಗಳನ್ನು ವಾಪಸ್ ಮಾಡಲು ನಿರ್ಧರಿಸುವುದಾಗಿ' ಅವರು ಸ್ಪಷ್ಟಪಡಿಸಿದ್ದಾರೆ. [ಪ್ರಶಸ್ತಿ ವಾಪಸ್ ಕೊಟ್ಟ ಸಾಹಿತಿಗಳ ಪಟ್ಟಿ]

ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಹಲವು ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿದ್ದಾರೆ. ದೇವನೂರು ಮಹಾದೇವ ಅವರು ಈ ಅಭಿಯಾನಕ್ಕೆ ಈಗ ಕೈಜೋಡಿಸಿದ್ದಾರೆ.

ದೇವನೂರ ಮಹಾದೇವ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನವರು. 1991ರಲ್ಲಿ ಇವರ 'ಕುಸುಮ ಬಾಲೆ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಯನ್ನು 2013ರಲ್ಲಿ ಪಡೆದಿದ್ದಾರೆ. ದ್ಯಾವನೂರು, ಒಡಲಾಳ ಮತ್ತು ಕುಸುಮಬಾಲೆ ಇವರ ಕೃತಿಗಳು.

award
English summary
Noted Kannada litterateur and social activist Devanur Mahadeva has said that, he would return his sahitya akademi and Padmashree award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X