• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಾಸರಾಜ ಗುರುಗಳ ವೃಂದಾವನ ಧ್ವಂಸ: ತರ್ಕಕ್ಕೆ ನಿಲುಕದ ಪ್ರಶ್ನೆಗಳು

|
Google Oneindia Kannada News

ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ವ್ಯಾಸರಾಜ ಗುರುಗಳ ವೃಂದಾವನ ಧ್ವಂಸಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸರು ಆರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಸಂಪದ್ಭರಿತ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯರ ಗುರುಗಳಾಗಿದ್ದ ವ್ಯಾಸರಾಜರ ಸಮಾಧಿಯಲ್ಲಿ ಭಾರೀ ಪ್ರಮಾಣದಲ್ಲಿ, ವಜ್ರವೈಢೂರ್ಯ ಇರಬಹುದು ಎಂದು, ಸಮಾಧಿಯನ್ನು ಧ್ವಂಸ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವ್ಯಾಸರಾಜರ ವೃಂದಾವನ ಧ್ವಂಸ; ಐವರು ಅಂತಾರಾಜ್ಯ ನಿಧಿಗಳ್ಳರು ಬಂಧನವ್ಯಾಸರಾಜರ ವೃಂದಾವನ ಧ್ವಂಸ; ಐವರು ಅಂತಾರಾಜ್ಯ ನಿಧಿಗಳ್ಳರು ಬಂಧನ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಪತ್ರಿಯ ಬಂಧಿತ ಆರು ಆರೋಪಿಗಳಲ್ಲಿ ಒಬ್ಬರು ಅರ್ಚಕರೂ ಸೇರಿದ್ದಾರೆ. ವೃಂದಾವನ ಧ್ವಂಸಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ, ಈ ಸಂಬಂಧ ಕೆಲವೊಂದು ಪ್ರಶ್ನೆಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಅದು ಹೀಗಿದೆ:

1) ಆನೆಗೊಂದಿಯಲ್ಲಿ ಒಂಬತ್ತು ವೃಂದಾವನ ಇರುವಾಗ, ಅವರಿಗೆ ಶ್ರೀ ವ್ಯಾಸರಾಜ ಗುರುಗಳ ವೃಂದಾವನವೇ ಏಕೆ ಗುರಿಯಾಗಿತ್ತು?(ಯಾವ ವೃಂದಾವನವೂ ಭಗ್ನ ಆಗಬಾರದು)

ನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳು ನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳು

2) ರಾಜಗುರುಗಳಾಗಿದ್ದ ಕಾರಣ ಎಂದು ಹೇಳುವುದಾದರೆ ಒಂಬತ್ತರಲ್ಲಿ ಈ ವೃಂದಾವನವೇ ವ್ಯಾಸರಾಜ ಗುರುಗಳ ವೃಂದಾವನ ಅಂತ ಗೊತ್ತಾದದ್ದಾದರೂ ಹೇಗೆ?

ವ್ಯಾಸರಾಜ ಗುರುಗಳ ವೃಂದಾವನ

ವ್ಯಾಸರಾಜ ಗುರುಗಳ ವೃಂದಾವನ

3) ಶ್ರೀ ವ್ಯಾಸರಾಜ ಗುರುಗಳ ವೃಂದಾವನಕ್ಕೆ ಇರುವ ಫಲಕ ನೋಡಿ ಇದೇ ವೃಂದಾವನ ಅಂತ ತಿಳಿದು ಈ ಕೆಲಸ ಮಾಡಿರಬೇಕು ಎನ್ನುವುದಾದರೆ, ದುಷ್ಕರ್ಮಿಗಳು ದಿನಾಲೂ ಬಂದು ಪ್ರದಕ್ಷಿಣೆ ಹಾಕುವ ಭಕ್ತರಾ?
4) ಆಂಧ್ರ ಪ್ರದೇಶದ ತಾಡಪತ್ರಿ ಇಂದ ಬಂದವರು ಕನ್ನಡ ಓದಲು ಸಾಧ್ಯವೇ?
5) ಒಂದೇ ರಾತ್ರಿಯಲ್ಲಿ 12 ಅಡಿಯ ವೃಂದಾವನವನ್ನು 6 ಅಥವಾ 7 ಜನ ಕೆಡವಿ ನಿಧಿ ದೋಚಬಹುದು ಎಂಬ ವಿಶ್ವಾಸ ಆದರೂ ಹೇಗೆ ಅವರಿಗೆ?
6) ಗಾಢಾಂಧಕಾರದ ಸರಿಯಾದ ಬೆಳಕು ಇಲ್ಲದ ಜಾಗಕ್ಕೆ ಹೋಗಿ ದುಷ್ಕೃತ್ಯ ನಡೆಸಿದ್ದಾದರೂ ಹೇಗೆ?

ಜಾಲತಾಣ ನೋಡಿ ಬರುವಷ್ಟರ ಮಟ್ಟಿಗೆ ಹೈ ಫೈ ಜನ ಅಲ್ಲ ಅವರು

ಜಾಲತಾಣ ನೋಡಿ ಬರುವಷ್ಟರ ಮಟ್ಟಿಗೆ ಹೈ ಫೈ ಜನ ಅಲ್ಲ ಅವರು

7) ನೂರಾರು ಜನ ಇದ್ದರೂ ಬಹಳ ಬೆಳಕಿನ ವ್ಯವಸ್ಥೆ ಇದ್ದರೂ ಪುನಃಪ್ರತಿಷ್ಠೆ ಮಾಡುವದಕ್ಕೆ ಹತ್ತಾರು ಗಂಟೆ ಹಿಡಿಯಿತು. ಹೀಗಿರುವಾಗ ಆರೇಳು ಜನ ಹೊಸ ಪಿಕ್ಕಾಸು, ಗುದ್ದಲಿ, ಹಾರಿ ಬುಟ್ಟಿ ಹಿಡಿದು ಕೆಲವೇ ಗಂಟೆಗಳಲ್ಲಿ ಈ ಕೆಲಸ ಮಾಡಿರಬೇಕು ಎನ್ನುವುದು ಮೂರ್ಖತನ ಅಲ್ಲವೇ?
8) ಜಾಲತಾಣ ನೋಡಿ ಬರುವಷ್ಟರ ಮಟ್ಟಿಗೆ ಹೈ ಫೈ ಜನ ಅಲ್ಲ ಅವರು?
9) ನಿಧಿ ಕಳ್ಳತನ ಮಾಡಲು ಸರಿಯಾದ ಉಪಾಯ ಇಲ್ಲದೇ ಬರುವರೇ?

ದಿನ ನಿತ್ಯ ಜನರು ಓಡಾಡುವ ಜಾಗಕ್ಕೆ ಧೈರ್ಯದಿಂದ ಬಂದದ್ದಾದರೂ ಹೇಗೆ?

ದಿನ ನಿತ್ಯ ಜನರು ಓಡಾಡುವ ಜಾಗಕ್ಕೆ ಧೈರ್ಯದಿಂದ ಬಂದದ್ದಾದರೂ ಹೇಗೆ?

10) ನಿಧಿ ಕಳ್ಳತನ ಮಾಡಲು ಹತ್ತಾರು ಅಡಿಗಳಷ್ಟು ಆಳ ತೋಡಬೇಕು. (ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ) ಬರೀ ಮೂರು ನಾಲ್ಕಡಿ ತೋಡಿದರು ಎಂದರೆ ಏನರ್ಥ?
11) ದಿನ ನಿತ್ಯ ಜನರು ಓಡಾಡುವ ಜಾಗಕ್ಕೆ ಧೈರ್ಯದಿಂದ ಬಂದದ್ದಾದರೂ ಹೇಗೆ?
12) ಒಂದು ರಾತ್ರಿಯಲ್ಲಿ ಕೆಲಸ ಮುಗಿಯದಿದ್ದರೆ ಮರುದಿನ ಮತ್ತೆ ಆ ಜಾಗಕ್ಕೆ ಹೋಗೋದು, ಕೆಲಸ ಮಾಡೋದು ಕಷ್ಟ ಎಂದು ತಿಳಿಯಲಿಲ್ಲವೇ?

ಆ ರಾತ್ರಿ ಯಲ್ಲಿ ದೋಣಿ ನಡೆಸಿದ್ದಾದರೂ ಹೇಗೆ?

ಆ ರಾತ್ರಿ ಯಲ್ಲಿ ದೋಣಿ ನಡೆಸಿದ್ದಾದರೂ ಹೇಗೆ?

13) ಮಧ್ಯಮವರ್ಗದ ಈ ಪಾಪಿಗಳಿಗೆ innova ಕಾರು ಕೊಟ್ಟದ್ದು ಯಾರು?
14) ಆ ರಾತ್ರಿ ಯಲ್ಲಿ ದೋಣಿ ನಡೆಸಿದ್ದಾದರೂ ಹೇಗೆ?
15) ಮಧ್ಯಾಹ್ನ ಅಥವಾ ಸಂಜೆಗೋ ಕತ್ತಲಾಗುವದರೊಳಗೆ ಬಂದಿರಬಹುದು ಎನ್ನುವದಾದರೆ ಆಗ ದೋಣಿ ನಡೆಸಿದ್ದಾದರೂ ಯಾರು?

ಇವರ ಇಷ್ಟೆಲ್ಲಾ ಖರ್ಚಿಗೆ ಬೇಕಾದಷ್ಟು ಹಣವನ್ನು ಕೊಟ್ಟದ್ದು ಯಾರು?

ಇವರ ಇಷ್ಟೆಲ್ಲಾ ಖರ್ಚಿಗೆ ಬೇಕಾದಷ್ಟು ಹಣವನ್ನು ಕೊಟ್ಟದ್ದು ಯಾರು?

16) ನಿಧಿ ಇದೆ ಎಂಬ ಮಾಹಿತಿ ಪಡೆದದ್ದು ಹೇಗೆ? ಊಹಾಪೋಹಕ್ಕೆ ತುತ್ತಾದರೆ?
17) ಇವರ ಇಷ್ಟೆಲ್ಲಾ ಖರ್ಚಿಗೆ ಬೇಕಾದಷ್ಟು ಹಣವನ್ನು ಕೊಟ್ಟದ್ದು ಯಾರು?

ಇಂತಹ ಪ್ರಶ್ನೆಗಳು ಇರುವಾಗ, ಇದರ ಹಿಂದೆ ದೊಡ್ಡ ಕೈವಾಡ , ಷಡ್ಯಂತ್ರ ಇದೆ ಮತ್ತು ಬರೀ ಆರೇಳು ಜನ ಮಾತ್ರವಲ್ಲ ತುಂಬಾ ಜನರು ಇದರ ಹಿಂದೆ ಇದ್ದಾರೆ. ಆದುದರಿಂದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ತನಿಖೆ ಕೂಲಂಕೂಷವಾಗಿ ಇತ್ಯರ್ಥಕ್ಕೆ ಬರುವ ತನಕ ನಾವು ಹೋರಾಟ ನಡೆಸಲೇಬೇಕು. (ವಾಟ್ಸಾಪ್)

English summary
Six arrested for destruction of Vyasaraja Tirtha’s Brindavana at Anegondi, Gangavati taluk of Koppal district. Thorough enquiry should taken place
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X