Nikhil Kumaraswamy: ಸೋತರೂ ನಿಖಿಲ್ ಕುಮಾರಸ್ವಾಮಿ ಈ ಕೆಲಸಕ್ಕೆ ಜನರ ಮೆಚ್ಚುಗೆ, ಏನದು ?
ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸೋಲಾಗಿದೆ. ಈ ಸೋಲಿನ ಮೂಲಕ ಅವರು ಹ್ಯಾಟ್ರಿಕ್ ಸೋಲು ಅನುಭವಿಸಿದಂತೆ ಆಗಿದೆ. ರಾಜ್ಯ ರಾಜಕೀಯದಲ್ಲಿ ಈ ರೀತಿ ಸೋತ ರಾಜಕಾರಣಿಗಳಲ್ಲಿ ಕೆಲವೇ ಹಾಗೂ ವಿರಳ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅಂತಲೇ ಹೇಳಬಹುದು. ನಿಖಿಲ್ ಕುಮಾರಸ್ವಾಮಿ ಅವರ ಪರ ಸಿಂಪತಿ ವರ್ಕ್ ಆಗಲಿದೆ ಅವರು ಈ ಬಾರಿ ಗೆಲ್ಲಲಿದ್ದಾರೆ ಅಂತಲೇ ತುಂಬಾ ಜನ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ, ಆ ಎಲ್ಲಾ ಲೆಕ್ಕಾಚಾರಗಳು ಸಹ ಈಗ ತಲೆಕೆಳಗಾಗಿವೆ. ಆದರೆ, ಈ ಸೋಲಿನ ಬೆನ್ನಲ್ಲೇ ಅವರು ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಇಂತಹ ನಾಯಕನನ್ನು ಸೋಲಬಾರದಿತ್ತು ಅಂತಲೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಅಥವಾ ಯಾವುದೇ ಕ್ಷೇತ್ರವಿರಲಿ. ಅಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯ. ಆದರೆ, ನಿಖಿಲ್ ಕುಮಾರಸ್ವಾಮಿಗೆ ಇದು ಹ್ಯಾಟ್ರಿಕ್ ಸೋಲು. ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯ ಸಂದರ್ಭದಲ್ಲಿಯೇ ಅವರು ನಾನು ಏನು ತಪ್ಪು ಮಾಡಿದ್ದೇನೆ ನನಗೆ ಯಾಕೆ ಈ ರೀತಿಯ ಶಿಕ್ಷೆ ಅಂತ ಅರ್ಥವಾಗಿಲ್ಲ ಎಂದು ದುಃಖ ತೋಡಿಕೊಂಡಿದ್ದರು. ಚುನಾವಣೆಯಲ್ಲಿ ಸರಣಿ ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ ಆ ನೋವಿನಲ್ಲೂ ಬೇರೆಯವರಿಗೆ ಸಾಂತ್ವಾನ ಹೇಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಮಂಡ್ಯ, ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದ ಚುನಾವಣೆಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋತಿದ್ದು ಅವರ ರಾಜಕೀಯ ಜೀವನ ಮಂಕಾಗಿದೆ. ಒಮ್ಮೆಯೂ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸದೆ ಇರುವುದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ಗೂ ಆಘಾತ ಮೂಡಿಸಿದೆ. ಈ ಬಾರಿಯ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಗೆದ್ದು ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಇಲ್ಲೂ ಜೆಡಿಎಸ್‌ನ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಇದರ ನಡುವೆಯೂ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದು, ನೊಂದವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.
ಬೆಟ್ಟಿಂಗ್ ಬಗ್ಗೆ ಜಾಗೃತಿ
ಬೆಟ್ಟಿಂಗ್‌ನಿಂದ ಜೀವನ ಹಾಳಾಗುತ್ತದೆ ಯಾವುದೇ ಕಾರಣಕ್ಕೂ ಯಾರು ಬೆಟ್ಟಿಂಗ್ ಕಟ್ಟ ಬೇಡಿ, ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬೆಟ್ಟಿಂಗ್ ಜೀವನವನ್ನೇ ಹಾಳು ಮಾಡುತ್ತದೆ. ಹೀಗಾಗಿ, ಬೆಟ್ಟಿಂಗ್ ಸಹವಾಸ ಬೇಡ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಾರ್ಯಕರ್ತರ ಮನೆಗೆ ಭೇಟಿ
ಚನ್ನಪಟ್ಟಣದ ಕೂಡ್ಲೂರು ಪಂಚಾಯಿತಿ ವ್ಯಾಪ್ತಿಯ ಶ್ರೀರಾಂಪುರ ಗ್ರಾಮದ ಜೆಡಿಎಸ್ ಕಾರ್ಯಕರ್ತ ಹಾಗೂ ನಿಖಿಲ್ ಕುಮಾರಸ್ವಾಮಿ ಅಭಿಮಾನಿಯಾದ ಮಂಜುನಾಥ್ (ಅಭಿ) ಎಂಬವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಆ ಯುವಕನಿಗೆ ಧೈರ್ಯ ಹೇಳಿದ್ದು, ಇನ್ನೆಂದೂ ಇಂಥ ದುಡುಕಿನ ನಿರ್ಧಾರ ಮಾಡಬೇಡ ಎಂದು ಕಿವಿಮಾತು ಹೇಳಿದ್ದಾರೆ.
ಮಂಜುನಾಥ್ ಅವರು ನಿಖಿಲ್ ಕುಮಾರಸ್ವಾಮಿ ಅವರ ಸೋಲಿನಿಂದ ಆಘಾತಕ್ಕೆ ಒಳಗಾಗಿ ಆತ್ಮಹ* ಪ್ರಯತ್ನ ಮಾಡಿದ್ದರು. ಹೀಗಾಗಿ, ಅ ವರ ಮನೆಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಈ ರೀತಿ ಮಾಡಬೇಡಿ ಎಂದಿದ್ದಾರೆ. ಇದೀಗ ನಿಖಿಲ್ ಭೇಟಿಯ ವಿಡಿಯೋ ಹಾಗೂ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.












Click it and Unblock the Notifications