Deepavali 2023 Special Trains: ದೀಪಾವಳಿಗೆ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ಸಂಚಾರ
ಬೆಂಗಳೂರು, ನವೆಂಬರ್ 4: ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ ಬೆಳಗಾವಿಯವರಗೆ ವಿಶೇಷ ರೈಲು ಸಂಚಾರ ಪ್ರಾರಂಭ ಮಾಡಲಿದೆ.
ದೀಪಾವಳಿ ಹಬ್ಬದ ನಿಮಿತ್ಯ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ವಿಶೇಷ ರೈಲು ಪ್ರಾರಂಭಿಸುವುದರ ಬಗ್ಗೆ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ನವೆಂಬರ್ 10 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ ಬೆಳಗಾವಿಯವರಗೆ ಸಂಚಾರ ಮಾಡಲಿದೆ.
ಶನಿವಾರ ಬೆಳಗ್ಗೆ ವಿಶೇಷ ರೈಲಿನ ಬುಕಿಂಗ್ 8 ಗಂಟೆಗೆ ಪ್ರಾರಂಭ ಮಾಡಿದ್ದು ಈವರೆಗೆ ಅಂದ್ರ ಮಧ್ಯಾಹ್ನ 01.00 ಗಂಟೆಯವರೆಗೆ ಸುಮಾರು 600 ಹೆಚ್ಚು sleeper ಕ್ಲಾಸ್ ಹಾಗೂ100 ಎಸಿ ಕೋಚ್ ಬುಕ್ ಮಾಡಲಾಗಿದೆ.

ರೈಲಿನ ಸಮಯ ಈ ಕೆಳಗಿನಂತಿದೆ.
ದಿನಾಂಕ: 10-11-2023ರಂದು ವಿಶೇಷ ರೈಲು ಒಂದು ಮಾರ್ಗ ರೈಲು ಸಂಖ್ಯೆ 06585 ರಾತ್ರಿ 08:00 ಗೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 08:00 ಗಂಟೆಗೆ ಬೆಳಗಾವಿಗೆ ತಲುಪುವುದು.
ದಿನಾಂಕ:14-11-2023 ರಂದು ವಿಶೇಷ ರೈಲು ಒಂದು ಮಾರ್ಗರೈಲು ಸಂಖ್ಯೆ 06586 ಸಂಜೆ 06:50ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 06:00ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣಕ್ಕೆ ತಲುಪುವುದು.
ಪ್ರಯಾಣಿಕರು ಇದರ ಸದುಪಯೋಗವನ್ನ ಪಡೆದುಕೊಳ್ಳಬೇಕು, ನನ್ನ ಮನವಿಗೆ ಸ್ಪಂದಿಸಿ ಶೀಘ್ರ ರೈಲಿನ ವ್ಯವಸ್ಥೆ ಮಾಡಿದ ರೈಲ್ವೆ ನ-14 ರಂದು ಬೆಳಗಾವಿಯಿಂದ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದವರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಿಡಲು ಆದೇಶ ನೀಡಲಾಗಿದೆ. ಮಹಾಪ್ರಭಂಧಕರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ಸಂಸದ ಈರಣ್ಣ ಕಡಾಡಿ ಮನವಿ ಮಾಡಿದ್ದಾರೆ.












Click it and Unblock the Notifications