Private Bus Fare Hike : ಸಾರಿಗೆ ಸಚಿವರೇ ಎದ್ದೇಳಿ.. ಬೆಂಗಳೂರು-ಬಳ್ಳಾರಿ, ರಾಯಚೂರಿಗೆ 1500, ಕಲಬುರ್ಗಿಗೆ 2500
ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗಧಿಪಡಿಸಿದ ದರವನ್ನಷ್ಟೇ ಪಡೆಯಬೇಕು. ಇಲ್ಲದಿದ್ದರೆ ರೂಟ್ ಪರ್ಮಿಟ್ ತಕ್ಷಣದಿಂದಲೇ ರದ್ದು ಪಡಿಸಲಾಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ ಕೇವಲ ಮಾಧ್ಯಮಗಳ ಹೇಳಿಕೆಗಷ್ಟೇ ಸೀಮಿತವಾಗಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳಿದ್ದು ದೂರದೂರುಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ಸಂಖ್ಯೆ ಕೂಡ ಹೆಚ್ಚಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ರಾಜ್ಯದ ವಿವಿದೆಡೆ ಕೆಎಸ್‌ಆರ್‌ಟಿಸಿ ಸ್ಪೆಷಲ್ ಬಸ್‌ಗಳು ಓಡಾಡಲಿವೆ. ಹೀಗೆ ಓಡಾಡುವ ಹೆಚ್ಚುವರಿ ಬಸ್‌ಗಳ ಪ್ರಯಾಣ ದರ ಕೂಡ ಹೆಚ್ಚಾಗಲಿದೆ. ಕೆಎಸ್‌ಆರ್‌ಟಿಸಿ ಸ್ಪೆಷಲ್ ಬಸ್‌ಗಳ ಪ್ರಯಾಣ ದರ 20% ರಷ್ಟು ಹೆಚ್ಚಿಗೆ ಮಾಡಲಾಗಿದೆ. ಇನ್ನೂ ನಿತ್ಯ ಓಡಾಡುವ ಬಸ್‌ಗಳ ದರದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
ಖಾಸಗಿ ಆ್ಯಪ್ ಮೂಲಕ ಬಸ್‌ಗಳ ಟಿಕೆಟ್ ದರ ಪರಿಶೀಲಿಸಿದಾಗ ಜನರು ಬೆಚ್ಚಿಬೀಳುತ್ತಿದ್ದಾರೆ. ಸಾಮಾನ್ಯ ದಿನಗಳಿಗಿಂತ ಮೂರರಿಂದ ನಾಲ್ಕು ಪಟ್ಟು ಏರಿಕೆ ಮಾಡಲಾಗಿದೆ. ಉದಾಹರಣೆಗೆ ಸಾರಿಗೆ ಸಚಿವರು ತವರು ಜಿಲ್ಲೆಗೆ ಬಳ್ಳಾರಿಗೆ ತೆರಳಲು ಬೆಂಗಳೂರು-ಬಳ್ಳಾರಿ ಬಸ್ ಟಿಕೆಟ್ ದರ ಪರಿಶೀಲಿಸಿದಾಗ ಅ.22ಕ್ಕೆ ಎಸ್‌ಎಂಆರ್‌ಎಸ್ ಬಸ್ ಟಿಕೆಟ್ ದರ 1000 ರೂ., ಪೂಜಾ ಟ್ರಾವೆಲ್ಸ್ 1,234 ರೂ., ಎಸ್‌ಆರ್‌ಎಸ್ 1350 ರೂ., ಸುನೀಲ್ ರೋಡ್‌ಲೈನ್ಸ್, ಶ್ರೀ ಎಸ್‌ಆರ್‌ಎಂ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಆರೆಂಜ್ ಟೂರ್ಸ್ ಅಂಡ್ ಟ್ರಾವೆಲ್ಸ್ 1500 ರೂ. ನಿಗದಿ ಮಾಡಿವೆ. ಸಚಿವರ ಎಚ್ಚರಿಕೆ ಇಂತಹ ಖಾಸಗಿ ಬಸ್‌ಗಳ ಮಾಲೀಕರು ಕ್ಯಾರೆ ಎನ್ನದೆ ಅವರ ಊರಿಗೇ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ.

ಖಾಸಗೀ ಬಸ್‌ಗಳು ರಾಜ್ಯದ ವಿವಿಧೆಡೆ ಪ್ರಯಾಣಿಸುತ್ತವೆ. ಹಬ್ಬದ ಸಂದರ್ಭದಲ್ಲಿ ಇದರ ಪ್ರಯಾಣ ದರ ದುಪ್ಪಟ್ಟಾಗಿರುತ್ತದೆ. ಈ ವೇಳೆ ಪ್ರಯಾಣಿಕರ ಜೋಬಿಗೆ ಕತ್ತರಿ ಬೀಳುವುದಂತೂ ಗ್ಯಾರಂಟಿ. ಖಾಸಗೀ ಬಸ್‌ಗಳ ಪ್ರಯಾಣ ದರದಲ್ಲಿ ಇಂತಿಷ್ಟೇ ದರ ನಿಗದಿ ಮಾಡಬೇಕು ಎನ್ನುವ ನಿಯಮವಿಲ್ಲ. ವರ್ಷವಿಡಿ ಸಾಮಾನ್ಯ ಕೆಎಸ್‌ಆರ್‌ಟಿಸಿ ಪ್ರಯಾಣ ದರದಲ್ಲಿ ಓಡಾಡುವ ಬಸ್‌ಗಳು ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣ ದರದಲ್ಲಿ ಓಡಾಡುತ್ತವೆ. ಇದರಿಂದ ಸಾಮಾನ್ಯ ಜನರಿಗೆ ಇದರ ಹೊರೆ ಬೀಳಲಿದೆ. ಉತ್ತರ ಕರ್ನಾಟಕದ ಕೆಲ ಖಾಸಗೀ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೇಗಿದೆ ಎನ್ನುವುದನ್ನು ನೋಡುವುದಾದರೆ-
ರಾಯಚೂರು, ಗುಲ್ಬರ್ಗ, ಬಳ್ಳಾರಿ ಮೂರು ಜಿಲ್ಲೆಗಳ ಖಾಸಗೀ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೇಗಿದೆ ಎನ್ನುವುದನ್ನು ನೋಡುವುದಾದರೆ-
ಕೆಎಸ್‌ಆರ್‌ಟಿಸಿ ಪ್ರಯಾಣ ದರ-
ಬೆಂಗಳೂರಿನಿಂದ ರಾಯಚೂರಿಗೆ ಎಸಿ ಸ್ಲೀಪರ್ ಬಸ್‌ಗಳು 1201 ಇದ್ದರೆ, ನಾನ್ ಎಸಿ ಸ್ಲೀಪರ್ ಬಸ್‌ಗಳು 850 ರೂಪಾಯಿ ದರ ಇದೆ.
ಬೆಂಗಳೂರಿನಿಂದ ಗುಲ್ಬರ್ಗಾ ಕಡೆಗೆ ಪ್ರಯಾಣಿಸುವ ಎಸಿ ಸ್ಲೀಪರ್ ಬಸ್‌ಗಳು 1039 ಇದ್ದರೆ, ನಾನ್ ಎಸಿ ಸ್ಲೀಪರ್ ಬಸ್‌ಗಳು 930 ರೂಪಾಯಿ ದರ ಇದೆ.

ಬೆಂಗಳೂರಿನಿಂದ ಬಳ್ಳಾರಿ ಕಡೆಗೆ ಪ್ರಯಾಣಿಸುವ ಎಸಿ ಸ್ಲೀಪರ್ ಬಸ್‌ಗಳು 814 ಇದ್ದರೆ, ಸಾಮಾನ್ಯ ಬಸ್‌ಗಳ ಪ್ರಯಾಣ ದರ 372 ರೂಪಾಯಿ ಇದೆ.
ಇನ್ನೂ ಖಾಸಗೀ ಬಸ್‌ಗಳ ಪ್ರಯಾಣ ದರವನ್ನು ನೋಡುವುದಾರೆ-
ವಿಆರ್‌ಎಲ್ ( VRL) ಬೆಂಗಳೂರಿನಿಂದ ರಾಯಚೂರಿಗೆ ನಾನ್ ಎಸಿ ಸ್ಲೀಪರ್ ಬಸ್‌ಗಳು 1600 ರೂಪಾಯಿ ಪ್ರಯಾಣ ದರವನ್ನು ಹೊಂದಿವೆ.
ವಿಆರ್‌ಎಲ್ ( VRL) ಬೆಂಗಳೂರಿನಿಂದ ಗುಲ್ಬರ್ಗಾಗೆ ನಾನ್ ಎಸಿ ಸ್ಲೀಪರ್ ಬಸ್‌ಗಳು 2000- 3000 ರೂಪಾಯಿ ಪ್ರಯಾಣ ದರವನ್ನು ಹೊಂದಿವೆ.

ಎಸ್‌ಆರ್‌ಎಸ್ (SRS) ಬೆಂಗಳೂರಿನಿಂದ ಬಳ್ಳಾರಿಗೆ ನಾನ್ ಎಸಿ ಸ್ಲೀಪರ್ ಬಸ್‌ಗಳು 1350 ರೂಪಾಯಿ ಪ್ರಯಾಣ ದರವನ್ನು ಹೊಂದಿವೆ.
ಒಟ್ಟಿನಲ್ಲಿ ಖಾಸಗೀ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ತಾಳೆ ನೋಡಿದರೆ ಅಜಗಜಾಂತರ ವ್ಯತ್ಯಾಸವಿದೆ. ಇದರಿಂದ ಪ್ರಯಾಣಿಕರಿಗೆ ಪ್ರಯಾಣದ ದರ ಬಿಸಿ ಮುಟ್ಟುವುದಂತು ಪಕ್ಕಾ.
ಪ್ರಯಾಣ ದರದ ಬಗ್ಗೆ ಪ್ರಯಾಣಿಕರ ಅಭಿಪ್ರಾಯವೇನು?
'ನಾವು ಸಾಮಾನ್ಯ ಜನ. ನಮಗೆ ರಜೆಗಳು ಸಿಗುವುದು ಕಷ್ಟ. ಸಿಕ್ಕರೆ ಊರಿಗೆ ಹೋಗುವ ಯೋಜನೆ ಮಾಡಿರುತ್ತೇವೆ. ಯೋಜನೆ ಇಲ್ಲದ ಪ್ರಯಾಣಿಕರಿಗೆ ಇದು ತುಂಬಾ ಕಷ್ಟವಾಗುತ್ತದೆ. ತಕ್ಷಣಕ್ಕೆ ದೂರದೂರಿಗೆ ಪ್ರಯಾಣ ಬೆಳಸಬೇಕಾದರೆ ನಮಗೆ ತುಂಬಾ ಕಷ್ಟವಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚು ಹಣ ಪ್ರಯಾಣಕ್ಕಾಗಿಯೇ ನೀಡಬೇಕಾಗುತ್ತದೆ. 2000- 3000 ರೂಪಾಯಿ ಪ್ರಯಾಣ ದರ ನಮ್ಮ ಮನೆಯವರು ತಿಂಗಳ ಸಂಬಳದಲ್ಲಿ ಕಾಲು ಭಾಗ. ಕೆಲವೊಂದು ಬಾರಿ ಸೀಟಿಗಾಗಿ ಟಿಕೆಟ್ ತೆಗೆಯಿಸಿ ನಿಂತುಕೊಂಡು ಬಸ್‌ನಲ್ಲಿ ಕೆಳಗೆ ಕುಳಿತುಕೊಂಡು ಹೋಗಬೇಕಾದ ಸಂದರ್ಭಗಳನ್ನು ನಾವು ಎದುರಿಸಿದ್ದೇವೆ. ಸಾಮಾನ್ಯ ಜನರ ಹಿತದೃಷ್ಟಿಯಿಂದ ಬಸ್ ಪ್ರಯಾಣ ದರದಲ್ಲಿ ಇಳಿಕೆ ಮಾಡಬೇಕು' ಎಂದು ಬೆಂಗಳೂರಿನಿಂದ ರಾಯಚೂರಿಗೆ ಪ್ರಯಾಣ ಮಾಡುವ ಗೃಹಿಣಿ ದೀಪಿಕಾ ಹೇಳಿಕೊಂಡರು.

'ನಾವು ಕೂಲಿ ಮಾಡುವ ಜನ. ಹಬ್ಬಕ್ಕಾಗಿ ನಾವು ಪ್ರತೀ ವರ್ಷ ನಮ್ಮ ಊರು ಗುಲ್ಬರ್ಗಾಗೆ ಪ್ರಯಾಣ ಮಾಡುತ್ತೇವೆ. ನಮಗೆ ಹಬ್ಬದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಿಗುವುದಿಲ್ಲ. ಸಾಮಾನ್ಯ ಬಸ್‌ಗಳು ತುಂಬಿ ಹೋಗಿರುತ್ತವೆ. ನಾವು ಪುಟ್ಟ ಮಕ್ಕಳೊಂದಿಗೆ ಪ್ರಯಾಣ ಮಾಡುವುದರಿಂದ ರಸ್ತೆ ಬದಿ ನಿಂತು ಕಡಿಮೆ ಬೆಲೆಗೆ ಸಿಗುವ ವಾಹನಗಳಲ್ಲಿ ಪ್ರಯಾಣ ಮಾಡುತ್ತೇವೆ. ಎಲ್ಲಿವರೆಗೆ ವಾಹನ ಸಾಗುತ್ತದೆ ಅಲ್ಲಿವರೆಗೂ ಸಾಗಿ ಮಾರ್ಗ ಮಧ್ಯೆ ಮತ್ತೊಂದು ವಾಹನ ಬದಲಾಯಿಸುತ್ತೇವೆ' ಎಂದು ಬೆಂಗಳೂರಿನಿಂದ ಗುಲ್ಬರ್ಗಾಗೆ ಪ್ರಯಾಣಿಸುವ ಸಿದ್ದಪ್ಪ ಹೇಳಿದರು.
ಒಟ್ಟಿನಲ್ಲಿ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ತಾಳೆ ನೋಡಿದರೆ ಅಜಗಜಾಂತರ ವ್ಯತ್ಯಾಸವಿದೆ. ಇದರಿಂದ ಪ್ರಯಾಣಿಕರಿಗೆ ಪ್ರಯಾಣದ ದರ ಬಿಸಿ ಮುಟ್ಟುವುದಂತು ಪಕ್ಕಾ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications