• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ನೀಲಮಣಿ ರಾಜು ನಮ್ಮ ಹೆಮ್ಮೆ! ದೀದಿಯದ್ದು ದುರಹಂಕಾರ!"

|

ಬೆಂಗಳೂರು, ಮೇ 24: "ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ನಮ್ಮ ಹೆಮ್ಮೆ. ಅವರಿಗೆ ಅವಮಾನ ಮಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು ದುರಹಂಕಾರ" ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ದೀದಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಜನ!

ಭದ್ರತಾ ಲೋಪದ ನೆಪವೊಡ್ಡಿ ನೀಲಮಣಿ ರಾಜು ಅವರನ್ನು ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವರ್ಗ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿರುವ ಹೊತ್ತಲ್ಲಿ, ಕನ್ನಡಿಗರು ಪೊಲೀಸ್ ಮಹಾ ನಿರ್ದೇಶಕಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ನಾಲ್ಕು ಹೆಜ್ಜೆ ನಡೆದಿದ್ದಕ್ಕಾಗಿ ಆಕಾಶ ಭೂಮಿ ಒಂದು ಮಾಡಿದ ಮಮತಾ

ಬಾಯಿ ಬಿಟ್ಟರೆ ತಾವು ಸರಳ, ಸರಳ ಎನ್ನುವ ಮಮತಾ ಈ ಪರಿ ದುರಹಂಕಾರದ ವರ್ತನೆ ತೋರಿದ್ದು ಸರಿಯೇ? ರವಷ್ಟು ದೂರ ನಡೆದ ಮಾತ್ರಕ್ಕೆ ಮಮತಾ ಅವರ ಕಾಲು ಸವೆದು ಹೋಗುತ್ತದೆಯೇ? ಅಷ್ಟಕ್ಕೂ ಆ ಟ್ರಾಫಿಕ್ ಜಂಜಾಟದ ನಡುವಲ್ಲಿ ಕಾರಿನಿಂದ ಇಳಿದು ವಿಧಾನಸೌಧದವರೆಗೆ ಮಮತಾ ನಡೆದು ಬರುತ್ತಾರೆ ಎಂದು ಯಾರಿಗೆ ಕನಸು ಬಿದ್ದಿತ್ತು? ನಡೆದು ಬರುವುದಕ್ಕೆ ಅವರಿಗೆ ಹೇಳಿದ್ದು ಯಾರು? ಹೀಗೇ ತರಹೇವಾರಿ ಪ್ರಶ್ನೆಗಳನ್ನು ಹಾಕಿ, ದೀದಿ ದುರಹಂಕಾರಕ್ಕೆ ಟ್ವೀಟಾಸ್ತ್ರದಲ್ಲೇ ಮಂಗಳಾರತಿ ಮಾಡುತ್ತಿದ್ದಾರೆ ಕನ್ನಡಿಗರು!

ಸಾರ್ವಜನಿಕವಾಗಿ ಕನ್ನಡಿಗರ ಕ್ಷಮೆ ಕೇಳಿ!

ಮಮತಾ ಅವರೇ ನೀವು ನಿಜಕ್ಕೂ ಡಿಜಿಪಿ ಅವರಿಗೆ ವಾಗ್ದಂಡನೆ ನೀಡಿದ್ದು ನಿಜವೇ? ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗೆ ಅಗೌರವ ಸೂಚಿಸಲು ನಿಮಗೆಷ್ಟು ಧೈರ್ಯ? ನೀವು ಕೋಟ್ಯಂತರ ಕನ್ನಡಿಗರಿಗೆ ಬೇಸರವನ್ನುಂಟುಮಾಡಿರುವುದರಿಂದ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ನಾನು ಆಗ್ರಹಿಸುತ್ತೇನೆ. ನಿಮ್ಮ ದುರಹಂಕಾರವನ್ನು ನಿಮ್ಮ ಪಕ್ಷದ ಗೂಂಡಾಗಳ ಬಳಿ ಇಟ್ಟುಕೊಳ್ಳಿ. ಏಕೆಂದರೆ ತಾವು ಎಂಥವರನ್ನು ಆರಾಧಿಸುತ್ತಿದ್ದೇವೆಂಬುದು ಅವರಿಗೆ ಗೊತ್ತಿಲ್ಲ! ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ ಸಿ ಟಿ ರವಿ.

ಮಮತಾ ಬ್ಯಾನರ್ಜಿ ಸಿಟ್ಟಾಗಲು ರಾಜ್ಯಪಾಲರೇ ಕಾರಣ!

ಮಮತಾ ಕೊಬ್ಬು ನಿಮಗೆ!

ಮಮತಾ ಬೇಗಂ ಕೊಬ್ಬು ನಿಮಗೆ! ನನ್ನ ನಾಡಿನ ಹೆಮ್ಮೆ, ನನ್ನ ನಾಡಿನ ಗೌರವ ನೀಲಮಣಿ ರಾಜು. ರಾಜ್ಯದ ಮೊದಲ ಪೊಲೀಸ್ ಮಹಾನಿರ್ದೇಶಕಿ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ. ನನ್ನ ನಾಡು, ನನ್ನ ನುಡಿ. ನೀವ್ಯಾರ್ರೀ ಕೇಳೋಕೆ? ಮಮತಾ ಅವರು ನೀಲಮಣಿ ರಾಜು ಅವರ ಬಳಿ ಕ್ಷಮೆ ಯಾಚಿಸಬೇಕು ಎಂದಿದ್ದಾರೆ ಸಾವನ್ ಎಂ ಜೈನ್!

ಹೆಣ್ಣಿಗೆ ಹೆಣ್ಣೇ ಶತ್ರು

ಒಂದು ಕಡೆ ನೋಡಿದರೆ, ಹೆಣ್ಣಿಗೆ ಹೆಣ್ಣೇ ಶತ್ರು ಅನ್ನೋ ಮಾತು ನಿಜವಾಗಿದೆ. ಪ್ರೀತಿಯಿಂದ 1 ಮಾತಲ್ಲಿ ಕ್ಷಮಿಸಿದ್ದರೆ ನಿಮ್ಮ ಗಂಟೇನಾದರೂ ಹೋಗುತ್ತಿತ್ತೆ ಮಮತಾ ಬ್ಯಾನರ್ಜಿ? ಹಾಗಾದರೆ ನೀವು ನೀಲಮಣಿ ರಾಜು ಅವರನ್ನು ಎತ್ತಂಗಡಿ ಮಾಡಿಸುವ ಸಲುವಾಗಿ ಅಲ್ಲಿಂದ ಬಂದಿರೇ..! ಎಂದು ಪ್ರಶ್ನಿಸಿದ್ದಾರೆ ಕಾಂತರಾಜು ಜಿ. ವಿ.

ಹಿಂದಿನ ಬಾಗಿಲಿನಿಂದ ಬಂದರೆ ಹೀಗೇ ಆಗೋದು!

ಒಬ್ಬ ಮುಖ್ಯಮಂತ್ರಿಯನ್ನು ಜನಾದೇಶದ ಮೂಲಕ ಆರಿಸದೆ ಹಿಂದಿನ ಬಾಗಿಲಿನಿಂದ ಅಧಿಕಾರ ಹಿಡಿದರೆ ಹೀಗೇ ಆಗೋದು. ಬೇರೆ ರಾಜ್ಯದ ಮುಖ್ಯಮಂತ್ರಿಗಳಿಗೆ ನಮ್ಮ ಘನತೆ ಏನು ಎಂಬುದನ್ನು ತೋರಿಸಲು ಕುಮಾರಸ್ವಾಮಿ ಸಫಲರಾಗಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ ನೀಲಮಣಿ ರಾಜು ಅವರೇ! ಎಂದಿದ್ದಾರೆ ವಿದ್ಯಾಸಾಗರ್ ಜಗದೀಸನ್.

ಬೆಂಗಳೂರಿನ ಟ್ರಾಫಿಕ್ ಬಗ್ಗೆ ನಿಮಗೇನು ಗೊತ್ತು?

ಈ ಮಮತಾಗೆ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಏನು ಗೊತ್ತು? ನಮ್ಮ ಬೆಮಗಳೂರಿಗರ ದಿನಚರಿ ಇದು. ಅವರ ದುರಹಂಕಾರ ಅವರ ಬಗೆಗೆ ಬೇಸರ ಹುಟ್ಟಿಸಿದೆ. ಜಾಮ್ ಗೆ ಕಾರಣವಾಗಿದ್ದು, ಪ್ರಮಾಣವಚನ ಕಾರ್ಯಕ್ರಮ ಮತ್ತು ಮಳೆ. ಅದಕ್ಕೆ ನೀಲಮಣಿ ರಾಜು ಏನು ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ ವಿದ್ಯಾಧರ್.

ಇದು ನಿಮ್ಮ ಪಶ್ಚಿಮಬಂಗಾಳವಲ್ಲ!

ಮಮತಾ ಬ್ಯಾನರ್ಜಿಯವರೇ ಇದು ಪಶ್ಚಿಮ ಬಂಗಾಳವಲ್ಲ. ನಮ್ಮ ಸರ್ಕಾರಿ ಅಧಿಕಾರಿಯನ್ನು ಅಗೌರವದಿಂದ ಕಾಣಲು ನೀವು ಯಾರು? ಮೊದಲು ನೀಲಮಣಿಯವರ ಕ್ಷಮೆ ಕೇಳಿ ಎಂದಿದ್ದಾರೆ ಉದಯಶಂಕರ್ ರಾವ್.

English summary
After West Bengal chief minister Mamata Banerjee blames Karnataka police especially DG-IGP Neelamani Raju for not arranging proper security for her. Social media people explains Didi's nature as arrogance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more