ಸಿದ್ದು ಬಜೆಟ್ ಮಂಡನೆಯ ವೇಳೆ ಸದನದಲ್ಲಿದ್ದವಳು ಯಾರು?
ಬೆಂಗಳೂರು, ಫೆ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದ ವೇಳೆ ಸತತ ಮೂರುವರೆ ಗಂಟೆಗಳ ಕಾಲ ಸೀಟು ಬಿಟ್ಟು ಕದಲದೇ ಸದನದ್ದಲ್ಲೇ ಇದ್ದ ಹೆಣ್ಣು ಮಗಳು ಯಾರು?
ನಮ್ಮ ಮುಖ್ಯಮಂತ್ರಿ ಸಿದ್ರಾಮಣ್ಣ ತುಂಬಾ ಒಳ್ಳೆಯವರು, ಅವರ ಶ್ರೀಮತಿಯವರೂ ತುಂಬಾ ಒಳ್ಳೆಯವರು. ಆದರೆ ಅವರ ಶ್ರೀಮತಿಯವರು ಸಾಮಾನ್ಯವಾಗಿ ಎಲ್ಲೂ ಹೊರಗೆ ಕಾಣಿಸುವುದಿಲ್ಲ. (ಸಿದ್ದು ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು)
ಸಿಎಂ ಬಜೆಟ್ ಮಂಡಿಸುತ್ತಿದ್ದ ಸಮಯದಲ್ಲಿ ಹೆಣ್ಣು ಮಗಳೊಬ್ಬಳು ತದೇಕಚಿತ್ತದಿಂದ ಮೂರುವರೆ ಗಂಟೆಗಳ ಕಾಲ ಪ್ರೇಕ್ಷಕರ ಗ್ಯಾಲರಿಯಲ್ಲಿ ಸೀಟು ಬಿಟ್ಟು ಕದಲಲಿಲ್ಲ. ಅವಳು ಯಾರು ಇರಬಹುದು?
ಇದನ್ನು ತನಿಖೆ ನಡೆಸ ಬೇಕಾಗುತ್ತದೆ ಅಲ್ವೇ? ಸಿಬಿಐ ತನಿಖೆ ನಡೆಸುತ್ತಿರೋ ಅಥವಾ ಸದನದ ಹೌಸ್ ಕಮಿಟಿಯಿಂದ ತನಿಖೆ ನಡೆಸುತ್ತಿರೋ ಎಂದು ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ಪಕ್ಷದ (ಶ್ರೀನಿವಾಸಪುರ, ಕೋಲಾರ) ಶಾಸಕ ರಮೇಶ್ ಕುಮಾರ್ ಆಗ್ರಹಿಸಿದಾಗ ಇಡೀ ಸದನ ಬಿದ್ದು ಬಿದ್ದು ನಗೆಗಡಲಲ್ಲಿ ತೇಲಿದ ಪ್ರಸಂಗಕ್ಕೆ ಗುರುವಾರ (ಫೆ 20) ಸದನ ಸಾಕ್ಷಿಯಾಯಿತು.
ಬಜೆಟ್ ಮೇಲಿನ ಚರ್ಚೆಯ ವೇಳೆ ರಮೇಶ್ ಕುಮಾರ್ ಈ ವಿಷಯ ಪ್ರಸ್ತಾಪಿಸಿದಾಗ ಸ್ಪೀಕರ್ ಕಾಗೋಡು ತಿಮ್ಮಪ್ಪ ಬಿದ್ದುಬಿದ್ದು ನಕ್ಕು, ಸುಸ್ತಾಗಿ, ಸುಧಾರಿಸಿ ಕೊಂಡು "ಅಲ್ಲಾರೀ ಇದನ್ನು ತನಿಖೆ ನಡೆಸಲು ನಿಮಗಿಂತ ಸೂಕ್ತ ವ್ಯಕ್ತಿ ಇನ್ನೊಬ್ಬರಿದ್ದಾರಾ' ಎಂದಾಗ ಸದನ ಮತ್ತೆ ಫುಲ್ ಖುಷ್.
ರಮೇಶ್ ಕುಮಾರ್ ಅವರ ಇನ್ನೂ ಹಾಸ್ಯಭರಿತ ಹೇಳಿಕೆಗಳು ಸ್ಲೈಡ್ ನಲ್ಲಿ...

ಸಾಮಾನ್ಯವಾಗಿ ಸೂಟು ಬೂಟು ಧರಿಸುತ್ತಾರಲ್ವಾ?
ಬಜೆಟ್ ಮಂಡಿಸಲು ಬರುವಾಗ ಸಾಮಾನ್ಯವಾಗಿ ಸೂಟು ಬೂಟು ಧರಿಸಿ, ತಿಲಕ ಇಟ್ಟು ಕೊಂಡು, ಸೂಟ್ ಕೇಸ್ ಹಿಡಿದು ಕೊಂಡು ಬರುವುದು ನಾವು ನೀವು ನೋಡಿದ್ದು, ಕಂಡಿದ್ದು. ಜೊತೆಗೆ ಕುಟುಂಬದವರು ಗ್ಯಾಲರಿಯಲ್ಲಿ ಕುಳಿತು ಬಜೆಟ್ ವೀಕ್ಷಿಸುವುದು ಸಾಮಾನ್ಯ - ರಮೇಶ್ ಕುಮಾರ್.

ಆದರೆ ಶ್ರೀಮತಿಯವರು ಬರಲಿಲ್ಲ.
ಆದರೆ ಸಿದ್ರಾಮಣ್ಣ ಅವರ ಶ್ರೀಮತಿಯವರು ಬಜೆಟ್ ಸಮಯದಲ್ಲಾದರೂ, atleast ಇರಬೇಕಲ್ವೇ? ಜೊತೆಗೆ ಸಿಎಂ ಸೂಟು ಬೂಟು ಧರಿಸದೇ ಎಂದಿನಂತೆ ಪಂಚೆಯಲ್ಲೇ ಬಂದಿದ್ರು. ಮುಖ್ಯಮಂತ್ರಿಗಳ ಕುಟುಂಬದಿಂದ ಯಾರೂ ಇಲ್ಲ - ರಮೇಶ್ ಕುಮಾರ್.

ಆದರೆ ಸದನದಲ್ಲಿದ್ದ ಹೆಣ್ಣು ಮಗಳು ಯಾರು?
ಆದರೆ ಬಜೆಟ್ ಮಂಡಿಸುತ್ತಿದ್ದ ವೇಳೆಯ ಮೂರುವರೆ ಗಂಟೆಯಲ್ಲಿ ಹೆಣ್ಣು ಮಗಳೊಬ್ಬಳು ಗ್ಯಾಲರಿಯಲ್ಲಿ ಕೂತಿದ್ದಳು. ಇವಳು ಯಾರಿರ ಬಹುದೆಂದು ತನಿಖೆ ನಡೆಸುವುದು ಸೂಕ್ತ ಎನ್ನುವುದು ಹಿರಿಯ ರಾಜಕಾರಿಣಿಯಾಗಿ ನನ್ನ ಅಭಿಪ್ರಾಯ - ರಮೇಶ್ ಕುಮಾರ್.

ನಿಮ್ಮ ಡ್ರೆಸ್ ಸ್ಟೈಲೇ ಡಿಫರೆಂಟ್
ಬರ್ತಾ ಬರ್ತಾ ನಿಮ್ಮ ಡ್ರೆಸ್ ಸ್ಟೈಲೇ ಚೇಂಜ್ ಆಗ್ತಾ ಇದಿಯಲ್ವೇನ್ರೀ..ಮುಂಚೆ ಕಚ್ಚೆ ಉಟ್ಟು ಕೊಂಡು ಬರ್ತಾ ಇದ್ರೀ.. ಈಗ ಟಿಪ್ ಟಾಪ್ ಆಗಿ ಸೂಟು ಧರಿಸಿ ಕೊಂಡು ಬರ್ತಾ ಇದ್ದೀರಾ. ನಿಮ್ಮಲ್ಲಿ ಯಾಕೆ ಈ ಬದಲಾವಣೆ ಎಂದು ಸ್ಪೀಕರ್ ಕಾಗೋಡು, ರಮೇಶ್ ಕುಮಾರ್ ಅವರಿಗೆ ಹೇಳಿದಾಗ ರಮೇಶ್ ಅವರಲ್ಲಿ ಅದಕ್ಕೆ ಉತ್ತರ ರೆಡಿಯಾಗಿತ್ತು.

ಜೆ ಎಚ್ ಪಟೇಲ್ ಅವರನ್ನು ಮರೆಯೋಕಾಗುತ್ತಾ?
ನಮ್ಮ ಹಿಂದಿನ ಸಿಎಂ ಜೆ ಎಚ್ ಪಟೇಲ್ ಕಚ್ಚೆ ಧರಿಸು ಕೊಂಡು ಬರುತ್ತಿದ್ದರು. ಒಂದು ದಿನ ಅವರು ಪಂಚೆ ಧರಿಸಿ ಕೊಂಡು ಬಂದರು. ಯಾಕ್ ಸರ್, ಡ್ರೆಸ್ ಸ್ಟೈಲ್ ಚೇಂಚ್ ಮಾಡಿದ್ರಾ ಎಂದು ನಾನು ಕೇಳಿದ್ದೆ. ಆಗ ಅವರು ನನ್ನನ್ನು ಎಲ್ಲರೂ ಕಚ್ಚೆ ಹುರುಕ ಅಂತಾರಪ್ಪಾ.. ಅದಕ್ಕೆ ಈ ಸ್ಟೈಲ್ ಎಂದ್ರು. ನನ್ನನ್ನು ಯಾರೂ ಹಾಗೇ ಅನ್ನಬಾರದು ಎನ್ನುವ ಮುಂದಾಲೋಚನೆಯಿಂದ ನನ್ನ ಡ್ರೆಸ್ ಸ್ಟೈಲ್ ಚೇಂಜ್ ಮಾಡಿಕೊಂಡೆ - ರಮೇಶ್ ಕುಮಾರ್











Click it and Unblock the Notifications