Koppal: ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ಪರಿಹಾರ, ಅಧಿಕಾರಿಗಳ ವಿರುದ್ಧ ಕ್ರಮ: ತಂಗಡಗಿ

ಬೆಂಗಳೂರು, ಜೂನ್ 11: ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ವೃದ್ಧೆ ಸೇರಿ ಮೂವರು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಲ್ಲದೇ, ಕಲುಷಿತ ನೀರು ಸರಬರಾಜ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶಿತು. ಈ ವೇಳೆ ಕೊಪ್ಪಳಕ್ಕೆ ಸಚಿವ ಶಿವರಾಜ ತಂಗಡಗಿ ಉಸ್ತುವಾರಿಗಳಾದರು. ಜಿಲ್ಲೆಯ ಹೊಣೆ ವಹಿಸಿಕೊಳ್ಳುತ್ತಿದ್ದಂತೆ ಸಚಿವರು ಇತ್ತೀಚೆಗೆ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರವಾಗಿ 2 ಲಕ್ಷ ರೂಪಾಯಿ ಘೋಷಿಸಿದ್ದಾರೆ.

Death Koppal Drinking Contaminated Water Shivraj Tangadagi Announced Rs 2 lakh Family Deceased

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಕಳೆದ ವಾರ 65 ವರ್ಷದ ವೃದ್ಧೆ ಸೇರಿದಂತೆ ಮೂವರು ಮೃತಪಟ್ಟಿದ್ದರು. ಅವರೊಂದಿಗೆ ಸುಮಾರು 30ಕ್ಕೂ ಹೆಚ್ಚು ಮಂದಿ ಅದೇ ಕೆಟ್ಟ ನೀರು ಸೇವಿಸಿ ವಾಂತಿಬೇಧಿ ಮಾಡಿಕೊಂಡಿದ್ದರು. ಸಾಲು ಸಾಲು ಮಂದಿ ಆಸ್ಪತ್ರೆಗೆ ದಾಖಲಾದರು. ರಾಯಚೂರಿನ ಬಳಿಕ ಕೊಪ್ಪಳ ನಡೆದ ಈ ಘಟನೆ ಚರ್ಚೆಯಾಗಿತ್ತು.

ಸಿಎಂ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಕೊಪ್ಪಳದ ಬಸರಿಹಾಳ ಗ್ರಾಮದ ಮೃತ ಕುಟುಂಬ ಬೇಟಿ ಮಾಡಿದ ಸಚಿವ ಶಿವರಾಜ್ ತಂಗಡಗಿ ಸಾಂತ್ವನ ಹೇಳಿ, ಪರಿಹಾರ ಘೋಷಿಸಿದರು. ಅಲ್ಲದೇ ಜಲ ಜೀವನ್ ಕಾಮಗಾರಿ ವೇಳೆ ಒಂದಷ್ಟು ಲೋಪಗಳು ಉಂಟಾಗಿರುವುದು ಗಮನಕ್ಕೆ ಬಂದಿದೆ.

ಈ ಲೋಪಗಳಿಂದಾಗಿ ಬಸರಿಹಾಳ ಗ್ರಾಮದ ಕುಡಿಯುವ ನೀರು ಕಲುಷಿತಗೊಂಡಿದೆ. ಆ ನೀರು ಕುಡಿದು ಮೂರು ಜನರ ಜೀವ ಹಾನಿಯಾಗಿದೆ. ಮೃತರಿಗೆ ಒಂದು ವಾರದಲ್ಲಿ 2 ಲಕ್ಷ ಪರಿಹಾರ ನೀಡಲಾಗತ್ತದೆ. ಕಲುಷಿತ ನೀರು ಪೋರೈಕೆಯಾಗಲು ಕಾರಣವಾದ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಅವರು ನೀರ್ಧರಿಸಿದ್ದಾರೆ. ಇದರೊಂದಿಗೆ ಜಲ ಜೀವನ್ ಮಿಷನ್ ಕಾಮಗಾರಿ ನಡೆಸಿದ ಕಾಂಟ್ರಾಕ್ಟರ್​ನನ್ನು ಬ್ಲಾಕ್ ಲಿಸ್ಟ್​​ಗೆ ಸೇರಿಸಲು ಜಿಲ್ಲಾಡಳಿತ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Death Koppal Drinking Contaminated Water Shivraj Tangadagi Announced Rs 2 lakh Family Deceased

ಜಿಲ್ಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದಿಂದ ನಡೆದ ತಪ್ಪುಗಳ ವಿರುದ್ಧ ತನಿಖೆ ನಡೆಸುತ್ತಿವೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ. ಅಲ್ಲದೇ ಕುಡಿಯುವ ನೀರಿನ ವಿಚಾರದಲ್ಲಿ ತಪ್ಪಗಳಾಗಲು ಸಹಕರಿಸಿದ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಲ್ಲದೇ ಬಿಜೆಪಿ ವಿರುದ್ಧ ಹರಿಹಾಯ್ದರು.

ಕಲುಷಿತ ನೀರು ಕುಡಿದು ಸಾವು: ಪ್ರಕರಣದ ಹಿನ್ನೆಲೆ

ಬಸರಿಹಾಳ ಗ್ರಾಮದಲ್ಲಿ ಗ್ರಾಮಸ್ಥರು ಎಂದಿನಂತೆ ಶುದ್ಧ ಕುಡಿಯುವ ನೀರು ಎಂದುಕೊಂಡು ಸೇವಿಸಿದ್ದಾರೆ. ಆದರೆ ಕಲುಷಿತ ನೀರು ಎಂದು ತಿಳಿಯುವ ಹೊತ್ತಿಗಾಗಲೇ ಮೂರು ದಿನ ಕಳೆದಿದೆ. ಅದಾದ ಮೇಲೆ ಒಬ್ಬರ ಹಿಂದೊಬ್ಬರಂತೆ ಅನೇಕರಿಗೆ ವಾಂತಿ-ಬೇಧಿ ಶುರುವಾಗಿದೆ. ಹತ್ತಿರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಇದು ಕಲುಷಿತ ನೀರಿನಿಂದ ಆದ ಅವಘಡ ಎಂದು ತಿಳಿದು ಬಂದಿದೆ.

ವಾಂತಿ ಬೇಧಿಗೆ ನಿಖರ ಕಾರಣ ತಿಳಿಯುವಷ್ಟರಲ್ಲಾಗಲೇ 65 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಅವರ ಹಿಂದು ಒಟ್ಟು ಮೂರು ಸಾವಿಗೀಡಾಗಿದ್ದಾರೆ. ಒಟ್ಟು ಸುಮಾರು 30 ಮಂದಿಗೆ ಆರೋಗ್ಯದಲ್ಲಿ ಏರು ಪೇರಾಗಿದೆ. ಗ್ರಾಮಸ್ಥರೆಲ್ಲರೂ ಕುಡಿಯುವ ನೀರು ಪೂರೈಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಹೀಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಆದರೂ ಸಂಬಂಧಪಟ್ಟ ಅಧಿಕಾರಿಗಳು ಸಹ ಕೂಡಲೇ ಸ್ಥಳಕ್ಕಾಗಮಿಸದೇ ಕೈ ಚೆಲ್ಲಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+