By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದಾ ಸಮುದಾಯಗಳ ಜೊತೆಗೆ ಗುತ್ತಿಗೆ ಆಧಾರದ ರಾಜಕಾರಣವನ್ನು ಮಾಡುತ್ತ ಬಂದಿದ್ದಾರೆ. ಇಡೀ ಸರ್ಕಾರದ ಸಚಿವರುಗಳು ಹಣದ ಚೀಲ ಇಟ್ಟುಕೊಂಡು ಬರುತ್ತಾರೆ. ಜನರ ಮೇಲೆ ಹಣ್ಣ ಎಸೆದು ಜನರನ್ನು ಕೊಂಡುಕೊಳ್ಳುತ್ತೇವೆ ಎನ್ನುವ ದುರಹಂಕಾರ ಈ ಸರ್ಕಾರದವರಿಗೆ ಬಂದಿದೆ. ದಾವಣಗೆರೆ ಜನರು ಸ್ವಾಭಿಮಾನ ಉಳಿಸಿಕೊಂಡು ಈ ಸರ್ಕಾರ ಕಿತ್ತೊಗೆಯುವ ತೀರ್ಮಾನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ದಾವಣಗೆರೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ನಾಗನೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಪರವಾಗಿ ಮತಯಾಚಿಸಿದರು. ಈ ವೇಳೆ ಮಾತನಾಡಿದ ಅವರು, ಈ ಚುನಾವಣೆ ದಾವಣಗೆರೆಗೆ ಸೀಮಿತವಾಗಿರದ ಚುನಾವಣೆ. ದಾವಣಗೆರೆ ಮೀರಿ ಇರುವ ಚುನಾವಣೆ. ಇದನ್ನು ಮತದಾರರು ಅರ್ಥ ಮಾಡಿಕೊಂಡರೆ ಅವರು ಕೇವಲ ದಾವಣಗೆರೆ ಅಭಿವೃದ್ಧಿಗೆ ಮಾತ್ರವಲ್ಲ. ಒಂದು ಸುವ್ಯವಸ್ಥಿತ ಅಭಿವೃದ್ಧಿಗೆ ನಾಂದಿ ಹಾಡಲು ದಾವಣಗೆರೆ ದಕ್ಷಿಣದ ಮತದಾರರಿಗೆ ಅವಕಾಶ ಇದೆ.

ದಾವಣಗೆರೆಗೆ ಹತ್ತಿರ ಇರುವ ಗ್ರಾಮೀಣ ಪ್ರದೇಶ ಅತ್ಯಂತ ಫಲವತ್ತಾದ ಭೂಮಿ, ನೀವು ಅತ್ಯಂತ ಪುಣ್ಯವಂತರು. ನಾವು ಒಣ ಬೇಸಾಯದಿಂದ ಬಂದವರು. ಈ ಪರಿಸರದ ತಕ್ಕ ಹಾಗೆ ನಿಮ್ಮ ಬದುಕು ಹಸಿರು ಮತ್ತು ಹಸನಾಗಬೇಕು. ಅದಕ್ಕಾಗಿ ಯೋಗ್ಯವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಇದುವರೆಗೂ ಹಿರಿಯರಿದ್ದರು. ಗೌರವ ನಮ್ಮ ಸಂಸ್ಕೃತಿ, ಸಂಸ್ಕಾರ ಅವರನ್ನು ಆಯ್ಕೆ ಮಾಡಿಕೊಂಡು ಬಂದಿದ್ದೀರಿ ಎಂದು ಹೇಳಿದರು.
ದಾವಣಗೆರೆಗೆ ಸಿಎಂ, ಡಿಸಿಎಂ ಕೊಡುಗೆ ಶೂನ್ಯ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದಾವಣಗೆರೆಗೆ ಯಾವುದೇ ಕೊಡುಗೆ ಕೊಟ್ಟಿಲ್ಲ. ದಾವಣಗೆರೆಗೆ ಉಪ ಚುನಾವಣೆ ಬರುತ್ತದೆ ಅದಕ್ಕಾಗಿಯಾದರೂ ಬಜೆಟ್‌ನಲ್ಲಿ ಹಣ ನೀಡುತ್ತಾರೆ ಎಂದು ನೋಡಿದೆ. ಅವರು ದಾವಣಗೆರೆಯನ್ನು ಎಷ್ಟು ನಿರ್ಲಕ್ಷ್ಯ ಮಾಡಿದ್ದಾರೆ. ಅವರು ನಿಮ್ಮನ್ನು ಗ್ರ್ಯಾಂಟೆಡ್ ತೆಗೆದುಕೊಂಡಿದ್ದಾರೆ. ಅಲ್ಪಸಂಖ್ಯಾತರು, ಎಸ್ಪಿ ಎಸ್ಪಿ ಸಮುದಾಯವನ್ನು ಗುತ್ತಿಗೆ ಆಧಾರದ ರೀತಿಯಲ್ಲಿ ತೆಗೆದುಕೊಂಡಿದ್ದಾರೆ.
ಅಹಿಂದಾ ಸಮುದಾಯ ಜೊತೆಗೆ ಗುತ್ತಿಗೆ ಆಧಾರದ ರಾಜಕಾರಣವನ್ನು ಸಿಎಂ ಮಾಡುತ್ತ ಬಂದಿದ್ದಾರೆ. ದಿಕೂಚಿ ಎಂದರೆ ಕೇವಲ ಸರ್ಕಾರದ ಬದಲಾವಣೆ ಅಲ್ಲ. ಯಾರಿಗೆ ಆರ್ಥಿಕವಾಗಿ ರಾಜಕೀಯವಾಗಿ ನ್ಯಾಯ ಸಿಕ್ಕಿಲ್ಲ ಅವರಿಗೆ ಅಕವಾಶ ಕೊಡುವ ಸರ್ಕಾರ ಬರಬೇಕು. ರೈತರಿಗಾಗಿ ವಿಶೇಷ ಕಾರ್ಯಕ್ರಮ ಮಾಡಿ ರೈತರ ಆತ್ಮಹತ್ಯೆ ತಡೆಯಬೇಕು. ದುಡಿಯುವ ವರ್ಗಕ್ಕೆ ಯುವಕರಿಗೆ ಕೆಲಸ ಕೊಡಬೇಕು. ಯುವಕರಿಗೆ ಕೆಲಸ ಕೇಳಿದರೆ ಅಮಾನತು ಮಾಡುತ್ತೇವೆ ಎನ್ನುತ್ತಾರೆ. ಮಹಿಳೆಯರಿಗೆ ಕೆಲಸ ಕೊಡಿ ಎಂದರೆ ಗೃಹ ಲಕ್ಷ್ಮೀ ಕೊಡುತ್ತೇವೆ ಎನ್ನುತ್ತಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ಕಲಿಸಿ ಪುರುಷರಿಗೆ ಅವಕಾಶ ಇಲ್ಲದಂತಾಗಿದೆ. ಬಸ್‌ಗಳು ಕೆಟ್ಟು ನಿಂತಿವೆ. ಇನ್ನಷ್ಟು ದಿನಕ್ಕೆ ರಸ್ತೆಯಲ್ಲಿಯೇ ನಿಲ್ಲುತ್ತವೆ. ಬಸ್‌ನಲ್ಲಿ ಪ್ರಯಾಣ ಇಲ್ಲ. ಆದರೆ ಬಸ್ ಫ್ರೀ ಆಗಿದೆ. ಸರ್ಕಾರದ ಎಂಜಿನ್ ಕೆಟ್ಟು ನಿಂತಿದೆ ಎಂದು ಲೇವಡಿ ಮಾಡಿದರು.
ಬಜೆಟ್ ಕನ್ನಡಿಯೊಳಗಿನ ಗಂಟು
ಸಿಎಂ ಸಿದ್ದರಾಮಯ್ಯ ಸಾರಿಗೆ ನಿಗಮಗಳಿಗೆ ಸಿಎಂ 5300 ಕೋಟಿ ಕೊಡಬೇಕು. ಕೆಇಬಿಗೆ 5 ಸಾವಿರ ಕೋಟಿ ಕೊಡಬೇಕು. ಅದನ್ನು ಕೊಡದೇ ನಮ್ಮ ಬೊಕ್ಕಸ ತುಂಬಿದೆ ಎಂದು ಸಿಎಂ ಹೇಳುತ್ತಾರೆ. ಸಿದ್ದರಾಮಯ್ಯ ಅವರ ಬಜೆಟ್ ಕನ್ನಡಿಯೊಳಗಿನ ಗಂಟು. ನಮ್ಮ ಕಡೆ ಒಂದು ಗಾದೆ ಮಾತಿದೆ. ಒಬ್ಬ ಸಾಹುಕಾರನ ಬಳಿ ಸಾಲ ಕೇಳಲು ಹೋದರೆ ಕೊಡುತ್ತೇನೆ ಎನ್ನುತ್ತಾನೆ. ನಂತರ ಕೊಡಿಸುತ್ತೇನೆ ಎನ್ನುತ್ತಾನೆ. ಆ ಮೇಲೆ ಕೊಡುವವನನ್ನು ತೋರಿಸುತ್ತೇನೆ ಎನ್ನುತ್ತಾರೆ.
ಹಿಂದುಳಿದ ವರ್ಗದವರ ಹಣ ಬಳಕೆ
ಕಳೆದ ವರ್ಷ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟಿದ್ದ 410 ಕೋಟಿ ರೂ. ಹಣವನ್ನು ಜಾತಿ ಸಮೀಕ್ಷೆ ಮಾಡಲು ಬಳಸಿಕೊಂಡರು. ಇವರ ಬಳಿ ಬೇರೆ ಹಣ್ಣ ಇರಲಿಲ್ಲವೇ? ಹಿಂದುಳಿದವರ ಹಣವೇ ಬೇಕಾ ? ಹಿಂದುಳಿದ ವರ್ಗಗಳಿಗೆ 410 ಕೋಟಿ ರೂ. ಖೋತಾ ಮಾಡಿದರು. ಇಲ್ಲಿವರೆಗೂ ಎಸ್ಸಿ ಎಸ್ಟಿಗೆ ಮೀಸಲಿಟ್ಟಿದ್ದ 60 ಸಾವಿರ ಕೋಟಿ ರೂ. ಮೂರು ವರ್ಷದಲ್ಲಿ ಗ್ಯಾರೆಂಟಿಗೆ ವರ್ಗಾಯಿಸಿದ್ದಾರೆ. ಇದು ಅಹಿಂದಾ ವರ್ಗಕ್ಕೆ ಕೊಟ್ಟ ಕೊಡುಗೆ. ನೀವು ಅಹಿಂದಾ ವರ್ಗ ಮತ್ತು ದಾವಣಗೆರೆ ಏನು ಮಾಡಿದ್ದೀರಿ ಎನ್ನುವುದು ಗೊತ್ತಾಗಬೇಕು. ಇದು ರಾಜ ಶಕ್ತಿ, ಪ್ರಜಾ ಶಕ್ತಿ ನಡುವಿನ ಸಂಘರ್ಷ, ಇಡೀ ಸರ್ಕಾರದ ಸಚಿವರುಗಳು ಹಣದ ಚೀಲ ಇಟ್ಟುಕೊಂಡು ಬರುತ್ತಾರೆ. ಜನರ ಮೇಲೆ ಹಣ ಎಸೆದು ಜನರನ್ನು ಕೊಂಡುಕೊಳ್ಳುತ್ತೇವೆ ಎನ್ನುವ ದುರಹಂಕಾರ ಈ ಸರ್ಕಾರದವರಿಗೆ ಬಂದಿದೆ ಎಂದು ದೂರಿದರು.
ರಾಜ್ಯದಲ್ಲಿ ಕುರ್ಚಿ ಕಚ್ಚಾಟ ಅಂತಿಮ ಹಂತಕ್ಕೆ
ಸಿಎಂ- ಡಿಸಿಎಂ ನಡುವೆ ಇರುವ ಜಗಳ ನಮಗೂ ನಿಮಗೂ ಗೊತ್ತಿದೆ. ಬೆಳಕಾದರೆ ಸಿಎಂ ಕುರ್ಜಿ ಖಾಲಿ ಇಲ್ಲ ಅಂತ ಸಿಎಂ ಕಡೆಯವರು ಹೇಳುತ್ತಾರೆ. ಇಂತಹ ತಾರೀಖಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಅವರ ಕಡೆಯುವರು ಹೇಳುತ್ತಾರೆ. ಈಗ ಅಧಿವೇಶನ ಮುಗಿದಿದೆ. ಚುನಾವಣೆ ಮುಗಿದ ನಂತರ ಅಂತಿಮ ಪೈಪೋಟಿ ನಡೆಯಲಿದೆ. ಬಜೆಟ್‌ನಲ್ಲಿ ಸುಳ್ಳಿನ ಕಂತೆ ಹೇಳಿದ್ದಾರೆ. ಸಿಎಂ ಇದೇ ಅವಧಿಯಲ್ಲಿ 8 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಸಾಲ ಮಾಡಲು ಶೂರತನ ಬೇಕಿಲ್ಲ. ಸಾಲ ತೀರಿಸುವವರು ಯಾರು. ಇವರು ಸಾಲ ಮಾಡಿ ಇಟ್ಟು ಹೋಗುತ್ತಾರೆ. ಮುಂದೆ ಬಂದವರಿಗೆ ಹೊಣೆಗಾರಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಅತ್ಯಂತ ಕಷ್ಟದ ದಿನಗಳನ್ನು ನೋಡುವ ಕೊಡುಗೆ ಕಾಂಗ್ರೆಸ್ ಸರ್ಕಾರ ನೀಡಿದೆ.
ಇಂತಹ ಸರ್ಕಾರ ಕಿತ್ತೊಗೆಯಲು ದಾವಣಗೆರೆ ಭವಿಷ್ಯ ಬರೆಯಲು ಅಭಿವೃದ್ಧಿಯ ಭಾಷೆ ಬರೆಯಲು ಸುವರ್ಣ ಅವಕಾಶ, ಜಾತಿ ಮತ ಬಿಟ್ಟು ಎಲ್ಲರೂ ಒಂದಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು. ಯಾರೂ ಯಾವುದೇ ಜಾತಿಯಲ್ಲಿ ಹುಟ್ಟಲು ಅರ್ಜಿ ಹಾಕಿ ಬಂದಿಲ್ಲ. ಎಲ್ಲರೂ ಒಕ್ಕಟ್ಟಾಗಿ, ನಗರ ಪ್ರದೇಶದ ಜನರಿಗೆ ಗೊತ್ತಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ ಎನ್ನುವ ಸಂದೇಶ ಸಾರಿ, ಶ್ರೀನಿವಾಸ ದಾಸ ಕರಿಯಪ್ಪ ಅವರನ್ನು ಗೆಲ್ಲಿಸಬೇಕು. ಅವರು ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದಿದ್ದಾರೆ. ಅತ್ಯಂತ ಸೌಮ್ಮ ಸ್ವಭಾವದವರು, ಗರ್ವ ಇಲ್ಲ. ಎಲ್ಲರನ್ನೂ ಅಣ್ಣ ತಮ್ಮಂದಿರಂತೆ ನೋಡುತ್ತಾರೆ. ಒಬ್ಬ ಸೇವಕನನ್ನು ಆಯ್ಕೆ ಮಾಡಲು ಅವಕಾಶ. ದಾವಣಗೆರೆ ಸ್ವಾಭಿಮಾನಕ್ಕೆ ವಿನಯ ಕುಮಾರ ಅವರು ಶಕ್ತಿ ತಂದಿದ್ದಾರೆ ಎಂದು ಅಭ್ಯರ್ಥಿಯನ್ನು ಗುಣಗಾನ ಮಾಡಿದರು. ದಾಸ ಕರಿಯಪ್ಪ ಅವರಿಗೆ ತಮ್ಮ ಮತ ಹಾಕಿ ನಿಮ್ಮ ಮತ ಗೆಲ್ಲಿಸಿ ಎಂದು ಕೋರಿದರು.
-
ಕೆಲವೇ ಗಂಟೆಗಳಲ್ಲಿ ಇರಾನ್ ಬಂದರುಗಳಿಗೆ ಅಮೆರಿಕದಿಂದ ಕಡಲ ದಿಗ್ಬಂಧನ? ಯುದ್ಧದ ಭೀತಿಯಲ್ಲಿ ಕೊಲ್ಲಿ ರಾಷ್ಟ್ರಗಳು -
Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್












Click it and Unblock the Notifications