ಮದವೇರಿ ತಪ್ಪಿಸಿಕೊಂಡಿದ್ದ ಗಜೇಂದ್ರ ಅಂತೂ ಸೆರೆಸಿಕ್ಕ

ಚಾಮರಾಜನರ, ಮಾ. 16 : ಪುಂಟಾಟ ನಡೆಸಿ ಕಾವಾಡಿ ಮತ್ತು ಆನೆ ಶ್ರೀರಾಮನ್ನು ಕೊಂದು ತಪ್ಪಿಸಿಕೊಂಡಿದ ಮೈಸೂರು ದಸರಾ ಆನೆ ಗಜೇಂದ್ರನ್ನು ಸೆರೆಹಿಡಿಯಲಾಗಿದೆ.

ಸೋಮವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ 5 ತಂಡಗಳು ಗಜೇಂದ್ರನ ಪತ್ತೆಗಾಗಿ ಹುಡುಕಾಟ ನಡೆಸಿದ್ದವು. ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬಿಳಿಗಿರಿರಂಗನ ಬೆಟ್ಟದ ಮುತ್ತುಗದ ಗದ್ದೆ ಸಮೀಪ ಹೆಬ್ಬಾವು ಅರೆ ಬಳಿ ಗಜೇಂದ್ರ ಕಂಡಿದ್ದಾನೆ. ಕೂಡಲೇ ಅರವಳಿಕೆ ನೀಡಿ ಕಾಡಿನಿಂದ ಹೊರಕ್ಕೆ ತರಲಾಗಿದೆ.[ಮದವೇರಿದ ಗಜೇಂದ್ರನ ಪುಂಡಾಟಕ್ಕೆ ಆನೆ, ಕಾವಾಡಿ ಬಲ]

mysuru

ಅಲ್ಲಿಂದ ಲಾರಿ ಮೂಲಕ ಕೆ. ಗುಡಿ ಆನೆ ಶಿಬಿರಕ್ಕೆ ಸಾಗಿಸಲಾಗಿದ್ದು ಸದ್ಯ ಗಜೇಂದ್ರ ಮಾವುತನ ಸನ್ನೆಗೆ ಸ್ಪಂದಿಸುತ್ತಿದ್ದಾನೆ. ಸೆರೆ ಸಿಕ್ಕ ಮೇಲೂ ಮೊದ ಮೊದಲು ಪುಂಡಾಟ ನಡೆಸಿದ ಗಜೇಂದ್ರ ನಿಧಾನವಾಗಿ ಮಾವುತರ ಮಾತು ಕೇಳಲು ಆರಂಭಿಸಿದ್ದಾನೆ.

ಮಾರ್ಚ್ 15 ರಂದು ಸಂಜೆ ಗಜೇಂದ್ರ ಮತ್ತು ಶ್ರೀರಾಮ ಆನೆಗಳು ಮದ ವೇರಿದಂತೆ ವರ್ತಿಸಿದ್ದವು. ಎರಡೂ ಆನೆಗಳ ನಡುವೆ ಕಾಳಗ ನಡೆದಿತ್ತು. ಈ ವೇಳೆ ಗಜೇಂದ್ರನಿಗೆ ಆಹಾರ ನೀಡಲು ಹೋಗಿದ್ದ ಕಾವಾಡಿ ಗಣಪತಿ (50) ಅವರನ್ನು ಸೊಂಡಿಲಿನಿಂದ ಹೊಡೆದ ಗಜೇಂದ್ರ ಗಂಭೀರ ಗಾಯಗೊಳ್ಳುವಂತೆ ಮಾಡಿದ್ದ. ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಲಾಗಿತ್ತಾದರೂ ಪ್ರಯೋಜನವಾಗಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+