Darshan Thoogudeepa: ಆಪರೇಷನ್‌ಗೆ ಡಾಕ್ಟರ್‌ ಬಳಿ ದರ್ಶನ್ ತೂಗುದೀಪ್ ಆ ಒಂದು ಕಂಡಿಷನ್ ಏನು?!

ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಅವರ ಆರೋಗ್ಯ ವಿಚಾರ ಗಂಭೀರವಾಗಿ ಚರ್ಚೆ ಆಗ್ತಿದೆ. ದರ್ಶನ್ ಆರೋಗ್ಯ ತೀರ ಗಂಭೀರ ಆಗಿದ್ದು, ಬೆನ್ನು ನೋವಿನಿಂದ ದರ್ಶನ್‌ಗೆ ನಡೆಯೋಕೆ ಕೂಡ ಆಗ್ತಿಲ್ಲ. ಇದೀಗ ದರ್ಶನ್‌ಗೆ ಸಾಲು ಸಾಲು.. ಆರೋಗ್ಯ ಪರೀಕ್ಷೆಗಳು ನಡಿತಿವೆ. ಈ ನಡುವೆ ಅವರು ಆ ಒಂದು ಕೆಲ್ಸ ಮಾತ್ರ ಮಾಡಿಸಿಕೊಳ್ಳಲ್ಲ ಅಂತ ಡಾಕ್ಟರ್‌ ಬಳಿ ಕೇಳಿಕೊಳ್ಳತ್ತಿದ್ದಾರಂತೆ. ದರ್ಶನ್‌ ಅವರ ಆರೋಗ್ಯ ಪರಿಸ್ಥಿತಿ ಹೆಂಗಿದೆ. ಅವರು ಯಾವುದಕ್ಕೆ ಹಿಂದೆಟು ಹಾಕ್ತಾ ಇದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ನಟ ದರ್ಶನ್‌ ಅವರ ಆರೋಗ್ಯ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಭಯಾನಕವಾಗಿದೆ. ದರ್ಶನ್‌ ಅವರು ಕಷ್ಟ ಬಿದ್ದು ನಡೆಯುವುದನ್ನು ನೋಡುವುದಕ್ಕೆ ಅವರ ಅಭಿಮಾನಿಗಳಿಂದ ಆಗ್ತಾನೆ ಇಲ್ಲ. ನಮ್ಮ ಡಿ - ಬಾಸ್‌ಗೆ ಈ ತರದ್ದ ಒಂದು ಪರಿಸ್ಥಿತಿ ಬರಬಾರ್ದಾಗಿತ್ತು. ಪಾಪ ಅಂತಿದ್ದಾರೆ. ಇನ್ನೂ ಕೆಲವರು ಬಾಸ್‌ ಈ ತರ ನಡಿಯೋದು ನೋಡೋಕೆ ಆಗ್ತಿಲ್ಲ. ಯಾರೂ ಈ ತರದ್ದ ಪೋಟೋ, ವಿಡಿಯೋಗಳನ್ನು ಅಪ್ಲೋಡ್‌ ಮಾಡಬೇಡಿ ಅಂತಿದ್ದಾರೆ.

Darshan Thoogudeepa condition infront of doctor for operation

ದರ್ಶನ್ ತೂಗುದೀಪ್‌ ಆಸ್ಪತ್ರೆಗೆ ಹೋಗ್ತಿರೋದು, ಕಷ್ಟ ಬಿದ್ದು ನಡೆಯುತ್ತಿರುವ ವಿಡಿಯೋ ಹಾಗೂ ಪೋಟೋಗಳು ಈಗಾಗಲೇ ಸಾಕಷ್ಟು ವೈರಲ್‌ ಆಗಿದೆ. ಇದಕ್ಕೆ ದರ್ಶನ್‌ ಅಭಿಮಾನಿಗಳು ಮಾತ್ರ ಅಲ್ಲ. ಬೇರೆ ನಟರ ಅಭಿಮಾನಿಗಳು ಸಹ ಮರುಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಎಷ್ಟೇ ಬೆನ್ನು ನೋವಾದರೂ ಸರಿನೇ ಆ ಒಂದು ಕೆಲಸ ಮಾತ್ರ ಬೇಡ ಅಂತ ಹೇಳ್ತಿದ್ದಾರೆ ಅಂತ ಹೇಳಲಾಗ್ತಿದೆ.

ದರ್ಶನ್‌ ಅವರ ಆರೋಗ್ಯ ಮೊದಲಿನಂತೆ ಇಲ್ಲ. ಆರೋಗ್ಯ ಪರೀಕ್ಷೆ ಹಾಗೂ ಬೆನ್ನು ನೋವಿನ ಚಿಕಿತ್ಸೆಗಾಗಿಯೇ ಅವರಿಗೆ 6 ವಾರಗಳ ಮಧ್ಯಂತರ ಜಾಮೀನನ್ನು ಹೈಕೋರ್ಟ್‌ ಕೊಟ್ಟಿದೆ. ಈ ನಡುವೆ ಅವರು ಸರಣಿ ಟೆಸ್ಟ್‌ಗಳಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ, ಅವರಿಗೆ ಆಪರೇಷನ್‌ನ ಅವಶ್ಯಕತೆ ಇದೆ ಅಂತ ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ದರ್ಶನ್‌ ಅವರು ಆಪರೇಷನ್‌ಗೆ ಸುತಾರಾಮ್‌ ಒಪ್ತಿಲ್ವಂತೆ.

ಯಾವುದೇ ಕಾರಣಕ್ಕೂ ಅದೊಂದು ಮಾತ್ರ ಬೇಡ ಅಂತ ದರ್ಶನ್‌ ಅವರು ಹೇಳ್ತಾ ಇದ್ದಾರಂತೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ದರ್ಶನ್‌ ಅವರು ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಕೋರ್ಟ್‌ ಸಹ ಇವರ ಆರೋಗ್ಯದ ದೃಷ್ಟಿಯಿಂದ ಮಧ್ಯಂತರ ಜಾಮೀನು ಕೊಟ್ಟಿದೆ.

ಚಿಕಿತ್ಸೆಗಾಗಿ ದರ್ಶನ್‌ ಅವರು ಮೈಸೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ನಾಲ್ಕು ದಿನಗಳು ಕಳೆದಿವೆ. ಇಲ್ಲಿ ಅವರನ್ನು ಸರಣಿ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಟ ದರ್ಶನ್‌ ಅವರಿಗೆ ಸುದೀರ್ಘ ಬೆನ್ನು ನೋವಿನಿಂದಾಗಿ ಅವರ ಕಾಲಿನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ ಅಂತ ಹೇಳಲಾಗಿದೆ. ದರ್ಶನ್ ಕಾಲು ನೋವು ಕಾಣಿಸಿಕೊಂಡು ನಡೆಯುವುದಕ್ಕೂ ನೋವಾಗ್ತಿದ್ಯಂತೆ.

ಆಪರೇಷನ್‌ ಬೇಡ ಅಂತಿರೋ ದರ್ಶನ್‌ ?

ಇನ್ನು ನಟ ದರ್ಶನ್‌ಗೆ ಆರೋಗ್ಯ ಪರೀಕ್ಷೆಗಳು ಮುಂದುವರಿದಿವೆ. ಆದರೆ, ಅವರು ಯಾವುದೇ ಕಾರಣಕ್ಕೂ ಆಪರೇಷನ್‌ ಮಾಡಿಸಿಕೊಳ್ಳಲ್ಲ ಅಂತ ಪಟ್ಟು ಹಿಡಿದಿದ್ದಾರಂತೆ. ಏನೇ ಸಮಸ್ಯೆ ಇದ್ದರೂ ಫಿಸಿಯೋಥೆರಫಿ ಮಾಡಿಸ್ಸಿ ಇಲ್ಲ ಮಾತ್ರೆ ಕೊಡಿ. ಯಾವುದೇ ಕಾರಣಕ್ಕೂ ಆಪರೇಷನ್‌ ಅಂತ ಹೇಳ್ಬೇಡಿ ಅಂತ ವೈದ್ಯರ ಮುಂದೆ ಮನವಿ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ದರ್ಶನ್‌ ಅವರ ಆರೋಗ್ಯ (ವೈದ್ಯಕೀಯ ಪರೀಕ್ಷಾ) ವರದಿಯನ್ನು ಇಷ್ಟರಲ್ಲೇ ಕೋರ್ಟ್‌ಗೆ ಸಲ್ಲಿಸಬೇಕಿದೆ. ಇನ್ನು ದರ್ಶನ್ ಅವರ ಆರೋಗ್ಯ ಸುಧಾರಿಸಲಿ ಅಂತ ಅವರ ಫ್ಯಾನ್ಸ್‌ ಪ್ರಾರ್ಥನೆ ಮಾಡ್ತಾ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+