Darshan Thoogudeepa: ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿ ಎಂದು ಡಿಮ್ಯಾಂಡ್‌ ಇಟ್ಟ ದರ್ಶನ್‌ಗೆ ಸಿಕ್ಕಿದ್ದು ನಿರಾಸೆ

ಬಳ್ಳಾರಿ, ಅಕ್ಟೋಬರ್‌ 18: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಹಾಗೂ ಪವಿತ್ರ ಗೌಡ ಸೇರಿದಂತೆ ಹಲವರು ಜೈಲುಪಾಲಾಗಿದ್ದಾರೆ. ಬರೋಬ್ಬರಿ ನಾಲ್ಕು ತಿಂಗಳು ಜೈಲು ವಾಸವನ್ನ ಅನುಭವಿಸಿರುವ ನಟ ದರ್ಶನ್‌ ಅವರಿಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗಿದ್ದು, ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಇಟ್ಟ ಹಲವು ಬೇಡಿಕೆಗಳು ಈಡೇರದೆ ನಿರಾಸೆ ಉಂಟಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್ ಜಾಮೀನು ನಿರೀಕ್ಷೆಯಲ್ಲಿದ್ದು, ಜಾಮೀನು ಸಿಗದ ಹಿನ್ನಲೆ ನಟ ದರ್ಶನ್‌ಗೆ ನಿರಾಸೆಯಾಗಿದೆ. ಈಗಾಗಲೇ ದರ್ಶನ್‌ ಅವರನ್ನ ಜೈಲಿನಿಂದ ಕರೆತರುವ ನಿಟ್ಟಿನಲ್ಲಿ ದರ್ಶನ್‌ ಪತ್ನಿ ಕಾನೂನು ಹೋರಾಟವನ್ನ ನಡೆಸಿದ್ದು, ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ದರ್ಶನ್‌ ಗೆ ಭಾರೀ ನಿರಾಸೆಯಾಗಿದ್ದು, ಕೋರ್ಟ್​ ಬೇಲ್​ ನೀಡಲು ನಿರಾಕರಿಸಿದ ವಿಷಯ ತಿಳಿದು ಮತ್ತಷ್ಟು ಮಂಕಾಗಿದ್ದಾರೆ. ಇತ್ತ ಆರೋಗ್ಯದ ಸಮಸ್ಯೆಯನ್ನ ಎದುರಿಸುತ್ತಿರುವ ದರ್ಶನ್‌ ಅವರು ಅಧಿಕಾರಿಗಳ ಮುಂದೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Darshan demands treatment in Bengaluru from authorities

ಆರೋಗ್ಯ ಸಮಸ್ಯೆಗೆ ಒಳಗಾಗಿರುವ ದರ್ಶನ್, ನನಗೆ ಬಳ್ಳಾರಿಯಲ್ಲಿ ಚಿಕಿತ್ಸೆ ಕೊಡಿಸೋದು ಬೇಡ. ಬದಲಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ. ಸ್ಕ್ಯಾನಿಂಗ್, ಸರ್ಜರಿ ಎಲ್ಲವೂ ಮಣಿಪಾಲ್ ಆಸ್ಪತ್ರೆಯಲ್ಲಿ ಆಗಬೇಕು ಎಂದು ಅಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 25 ದಿನಗಳಿಂದ ಬೆನ್ನು ನೋವು ಉಲ್ಬಣಗೊಂಡಿದೆ. ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ‌ಜೊತೆಗೆ ಸರ್ಜರಿಯ ಅಗತ್ಯ ಇದೆ ಎಂದು ವಿಮ್ಸ್ ವೈದ್ಯರು ಹೇಳಿದ್ದಾರೆ. ಆದರೆ ಬಳ್ಳಾರಿಯಲ್ಲಿ ತಮಗೆ ಚಿಕಿತ್ಸೆ ‌ಬೇಡ ಎಂದು ದರ್ಶನ್ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿದ್ದರು. ಈಗಾಗಲೇ ಜೈಲಾಧಿಕಾರಿಗಳಿಗೆ ಮೆಡಿಕಲ್ ವರದಿ ಸಲ್ಲಿಕೆಯಾಗಿದೆ. ಈ ಮೆಡಿಕಲ್ ರಿಪೋರ್ಟ್‌ನ ಮೇಲಾಧಿಕಾರಿಗಳೊಂದಿಗೆ ಜೈಲಾಧಿಕಾರಿಗಳು ಚರ್ಚೆ ಮಾಡಿದ್ದರು. ದರ್ಶನ್ ಅವರ ತಪಾಸಣೆ ನಡೆಸಿದ ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ಬೆಡ್ ಮತ್ತು ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖ ಮಾಡಿದ್ದರು. ಅದರಂತೆ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಬೆಡ್ ಮತ್ತು ದಿಂಬು ರವಾನೆ ಮಾಡಲಾಗಿದೆ. ಇದರಿಂದಾಗಿ ದರ್ಶನ್‌ ಅವರಿಗೆ ಮತ್ತೆ ನಿರಾಸೆಯಾಗಿದೆ.

ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ರು. ಬೆನ್ನುನೋವು, ಕೈಮೂಳೆಗೆ ಹಿಂದೆ ಮಣಿಪಾಲ್ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಈಗಲೂ ನಾನು ಅಲ್ಲಿಗೆ ಹೋದ್ಮೇಲೆ ಟ್ರೀಟ್​ಮೆಂಟ್ ಪಡೆಯುತ್ತೇನೆ ಎಂದು ಬಳ್ಳಾರಿ ಜೈಲಿನ ಅಧಿಕಾರಿಗಳ ಮುಂದೆ ಬೇಡಿಕೆ ಇಟ್ಟದ್ರು. ಆದರೆ, ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಬೆಡ್ ಮತ್ತು ದಿಂಬ ಅನ್ನು ತರಲಾಗಿದೆ.

ಜೈಲಿನಲ್ಲಿರುವ ದರ್ಶನ್‌ಗೆ ದಿನ ಕಳೆದಂತೆ ಬೆನ್ನು ನೋವು ಉಲ್ಬಣವಾಗುತ್ತಿದೆ. ಈ ಕುರಿತು ಜೈಲಲ್ಲೇ ಬೆನ್ನು ನೋವಿಗೆ ಚಿಕಿತ್ಸೆ ನೀಡುವ ವೈದ್ಯರು ಸಲಹೆ ನೀಡಿದ್ದರು. ಆದರೆ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದ ದರ್ಶನ್ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು. ಹೀಗಾಗಿ ಜೈಲು ಸಿಬ್ಬಂದಿ ಕೊನೆಗೆ ಜೈಲಲ್ಲೇ ಬೆಡ್ ಮತ್ತು ದಿಂಬಿನ ಸೌಲಭ್ಯ ನೀಡಲು ಒಪ್ಪಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+