Darshan Family: ತಾಯಿ ಸಹೋದರನಿಂದ ದರ್ಶನ್‌ ದೂರ ಇರುವುದು ಯಾಕೆ ಗೊತ್ತಾ? ಸತ್ಯ ಬಿಚ್ಚಿಟ್ಟ ನಿರ್ದೇಶಕ

ಬೆಂಗಳೂರು, ಜೂನ್‌ 27: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಪವಿತ್ರಗೌಡ ಸೇರಿದಂತೆ 17 ಮಂದಿ ಜೈಲು ಸೇರಿದ್ದು, ಈ ಮಧ್ಯ ನಟ ದರ್ಶನ್‌ ಅವರ ಕುಟುಂಬದ ಬಗ್ಗೆ ಹಲವು ಸುದ್ದಿಗಳು ಚರ್ಚೆಯಾಗುತ್ತಿವೆ.

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ ಕಳಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಹತ್ಯೆ ಮಾಡಿದ ಆರೋಪ ದರ್ಶನ್​ ಮೇಲಿದೆ. ಇದರಿಂದ ನಟ ದರ್ಶನ್‌ ಗೆ ದೊಡ್ಡ ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಕೇಸ್​ನಲ್ಲಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

darshan case Director H Vasu Talks About Darshan And His Family Dispute

ಇನ್ನೂ ದರ್ಶನ್​ ಅರೆಸ್ಟ್​ ಆದ ಬಳಿಕ ಅವರ ಕುಟುಂಬದ ಬಗೆಗಿನ ಅನೇಕ ವಿಚಾರಗಳು ಬಹಿರಂಗ ಆಗಿವೆ. ಅಲ್ಲದೇ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕಾನೂನು ಹೋರಾಟವನ್ನ ಆರಂಭಿಸಿದ್ದು, ಈ ಮಧ್ಯ ತಾಯಿ ಮತ್ತು ಸಹೋದರನ ಜೊತೆ ದರ್ಶನ್​ ಅವರು ಜಗಳ ಮಾಡಿಕೊಂಡು ದೂರಾಗಿದ್ದಾರೆ ಎಂಬ ಮಾಹಿತಿ ಕೂಡ ಕೇಳಿ ಬಂದಿದೆ. ಈ ವಿಚಾರದ ಬಗ್ಗೆ ನಿರ್ದೇಶಕ ಎಚ್​. ವಾಸು ಅವರು ಸತ್ಯಾಂಶವನ್ನ ಹಂಚಿಕೊಂಡಿದ್ದಾರೆ.

ಸಹೋದರ ಮತ್ತು ತಾಯಿಯ ಜೊತೆ ದರ್ಶನ್​ ಮನಸ್ತಾಪ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಈ ವಿಚಾರವನ್ನ 'ಲಾಲಿ ಹಾಡು', 'ಇಂದ್ರ', 'ವಿರಾಟ್' ಸಿನಿಮಾಗಳ ನಿರ್ದೇಶಕ ಎಚ್‌ ವಾಸು ಅವರು ತಳ್ಳಿಹಾಕಿದ್ದಾರೆ. ನಿರ್ದೇಶಕ ಎಚ್​. ವಾಸು ಹಾಗೂ ನಟ ದರ್ಶನ್‌ ಅವರು ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.

'ತುಂಬ ಚೆನ್ನಾಗಿ ಓಡುವ ಕುದುರೆ ಇನ್ನೂ ಚೆನ್ನಾಗಿ ಓಡಲಿ ಅಂತ ಚಾಟಿ ಏಟು ನೀಡುತ್ತಾರೆ. ಚೆನ್ನಾಗಿ ಹಣ್ಣು ಬಿಡುವ ಮರಕ್ಕೆ ಜನರು ಕಲ್ಲು ಹೊಡೆಯುತ್ತಾರೆ. ಹಾಗಾಗಿ ಜನರು ದರ್ಶನ್​ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ದರ್ಶನ್‌ ಅವರ ತಾಯಿಗೆ ಕ್ಯಾನ್ಸರ್​ ಆದಾಗ ದರ್ಶನ್​ ಅವರು ಹುಡುಗರನ್ನು ಇಟ್ಟಿದ್ದರು. ಗಂಡ ಕಟ್ಟಿಸಿದ ಮೈಸೂರಿನ ಮನೆಯಲ್ಲೇ ಇರುತ್ತೇನೆ ಅಂತ ತಾಯಿ ಹೇಳಿದ್ದಾರೆ. ಹಾಗಾಗಿ ಅವರು ಮೈಸೂರಿನಲ್ಲಿ ಇದ್ದಾರೆ' ನಟ ದರ್ಶನ್‌ ಬೆಂಗಳೂರಿನಲ್ಲಿ ಇದ್ದಾರೆ ಎಂದು ಎಚ್​. ವಾಸು ಹೇಳಿದ್ದಾರೆ.

ದರ್ಶನ್​ ಸಹೋದರ ದಿನಕರ್​ ತೂಗುದೀಪ ಅವರು ಬಾಡಿಗೆ ಮನೆಯಲ್ಲಿ ಇದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, 'ಮನುಷ್ಯ ಒಂದು ತಪ್ಪು ಮಾಡಿದ ತಕ್ಷಣ ಒಂದಕ್ಕೊಂದು ಲಿಂಕ್​ ಆಗುತ್ತದೆ. ಅದು ಸಹಜ. ಎಲ್ಲರೂ ಮಾತನಾಡುತ್ತಾರೆ. ಚೆನ್ನಾಗಿದ್ದಾಗ ಯಾರೂ ಆ ವಿಚಾರಗಳ ಬಗ್ಗೆ ಮಾತನಾಡುವುದೇ ಇಲ್ಲ. ತಾವು ಕಷ್ಟದಲ್ಲಿ ಇರುವ ಬಗ್ಗೆ, ಮನೆ ಇಲ್ಲ ಎಂಬ ಬಗ್ಗೆ ಯಾವ ವಾಹಿನಿಗೂ ಹೋಗಿ ದಿನಕರ್​ ಹೇಳಿಲ್ಲ.

ದಿನಕರ್ ಅವರು ಚೆನ್ನಾಗಿಯೇ ಇದ್ದಾರೆ. ಅವರದ್ದು ಒಂದು ಪಾಲಿಸಿ ಇದೆ. ತಮ್ಮದೇ ಸ್ವಂತ ದುಡ್ಡಿನಲ್ಲಿ ಮನೆ ಕಟ್ಟಬೇಕು ಎಂಬ ಉದ್ದೇಶ ಅವರಿಗೆ ಇದೆ. ಒಂದು ಮಾತು ಹೇಳಿದರೆ ದಿನಕರ್​ಗೆ ಮನೆ ಕೊಡಿಸೋಕೆ ದರ್ಶನ್​ಗೆ ಆಗಲ್ವಾ? ದಿನಕರ್ ಅವರು ಸೈಟ್​ ತೆಗೆದುಕೊಂಡು ಮನೆ ಕಟ್ಟುತ್ತಿದ್ದಾರೆ. ತುಂಬ ಬಡತನದಲ್ಲಿ ಅವರು ಇಲ್ಲ. ಹೀರೋ ತಮ್ಮ ಹೇಗೆ ಇರಬೇಕೋ ಹಾಗೆಯೇ ಇದ್ದಾರೆ. ಅವರು ಕೂಡ ಒಳ್ಳೊಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಅವರು ಸಹ ದುಡ್ಡು ಮಾಡಿದ್ದಾರೆ. ಅಣ್ಣ-ತಮ್ಮನ ಹೊಂದಾಣಿಕೆ ಯಾವ ರೀತಿ ಇದೆಯೋ ಅವರಿಗೆ ಗೊತ್ತು. ಒಮ್ಮೆ ಜಗಳ ಆಡಬಹುದು. ಆದರೆ ಆಮೇಲೆ ಒಟ್ಟಿಗೆ ಸೇರುತ್ತಾರೆ ಎಂದು ನಟ ದರ್ಶನ್‌ ಅವರ ಕುಟುಂಬದ ಕುರಿತು ಎಚ್ ವಾಸು ಅವರು ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+