Dam Water Level: ರಾಜ್ಯದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ರಾಜ್ಯದಲ್ಲಿ ಡಿಸೆಂಬರ್ ತಿಂಗಳಾದರೂ ಇನ್ನೂ ಮಳೆಯಾಗುತ್ತಿದೆ. ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮುಂದಿನ ಒಂದು ವಾರದಲ್ಲಿ ಹವಾಮಾನ ಕುಸಿತದಿಂದ ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಭರ್ತಿಯಾಗಿವೆ.
ಹಿಂಗಾರು ಕೂಡ ಉತ್ತಮವಾಗಿದ್ದು ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿಲ್ಲ. ಫೆಂಗಲ್ ಚಂಡಮಾರುತದಿಂದ ಡಿಸೆಂಬರ್ ತಿಂಗಳಿನಲ್ಲಿ ಕೂಡ ಮಳೆಯಾಗಿದ್ದು ಮತ್ತೊಮ್ಮೆ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿತ್ತು. ಕೆಆರ್ ಎಸ್ ಜಲಾಶಯ ಡಿಸೆಂಬರ್ ತಿಂಗಳಿನಲ್ಲೂ ಭರ್ತಿಯಾಗಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ.

ತುಂಗಭದ್ರಾ, ಕೆಆರ್ ಎಸ್, ನಾರಾಯಣಪುರ, ಆಲಮಟ್ಟಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಡಿಸೆಂಬರ್ 9ರಂದು ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ.
ವಿವಿಧ ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ನೀರಿನ ಮಟ್ಟ : 554 ಮೀಟರ್/ 151.75 ಟಿಎಂಸಿ
- ಇಂದಿನ ನೀರಿನ ಮಟ್ಟ: 552.21 ಮೀಟರ್ / 128.60 ಟಿಎಂಸಿ
- ಒಳಹರಿವು: 2869 ಕ್ಯೂಸೆಕ್ಸ್
- ಹೊರಹರಿವು: 3742 ಕ್ಯೂಸೆಕ್ಸ್
ಸೂಪಾ ಜಲಾಶಯ
- ಗರಿಷ್ಠ ನೀರಿನ ಮಟ್ಟ : 564 ಮೀಟರ್/ 145.33 ಟಿಎಂಸಿ
- ಇಂದಿನ ನೀರಿನ ಮಟ್ಟ: 560.13 ಮೀಟರ್ / 129.17 ಟಿಎಂಸಿ
- ಒಳಹರಿವು: 0
- ಹೊರಹರಿವು: 3856 ಕ್ಯೂಸೆಕ್ಸ್
ವಾರಾಹಿ ಜಲಾಶಯ
- ಗರಿಷ್ಠ ನೀರಿನ ಮಟ್ಟ : 594.36 ಮೀಟರ್/ 31.10 ಟಿಎಂಸಿ
- ಇಂದಿನ ನೀರಿನ ಮಟ್ಟ: 592.02 ಮೀಟರ್ / 26.69 ಟಿಎಂಸಿ
- ಒಳಹರಿವು: 0
- ಹೊರಹರಿವು: 0
ಹಾರಂಗಿ ಜಲಾಶಯ
- ಗರಿಷ್ಠ ನೀರಿನ ಮಟ್ಟ: 2859 ಅಡಿ / 8.50 ಟಿಎಂಸಿ
- ಇಂದಿನ ನೀರಿನ ಮಟ್ಟ: 2836.39 ಅಡಿ / 3.79 ಟಿಎಂಸಿ
- ಒಳಹರಿವು: 470 ಕ್ಯೂಸೆಕ್ಸ್
- ಹೊರಹರಿವು: 700 ಕ್ಯೂಸೆಕ್ಸ್
ಹೇಮಾವತಿ ಜಲಾಶಯ
- ಗರಿಷ್ಠ ನೀರಿನ ಮಟ್ಟ: 2922 ಅಡಿ / 37.10 ಟಿಎಂಸಿ
- ಇಂದಿನ ನೀರಿನ ಮಟ್ಟ: 2910 ಅಡಿ / 26.79 ಟಿಎಂಸಿ
- ಒಳಹರಿವು: 1108 ಕ್ಯೂಸೆಕ್ಸ್
- ಹೊರಹರಿವು: 4120 ಕ್ಯೂಸೆಕ್ಸ್
ಕೆಆರ್ ಎಸ್ ಜಲಾಶಯ
- ಗರಿಷ್ಠ ನೀರಿನ ಮಟ್ಟ: 124.80 ಅಡಿ / 49.45 ಟಿಎಂಸಿ
- ಇಂದಿನ ನೀರಿನ ಮಟ್ಟ: 124.80 ಅಡಿ / 49.45 ಟಿಎಂಸಿ
- ಒಳಹರಿವು: 3635 ಕ್ಯೂಸೆಕ್ಸ್
- ಹೊರಹರಿವು: 3425 ಕ್ಯೂಸೆಕ್ಸ್
ಕಬಿನಿ ಜಲಾಶಯ
- ಗರಿಷ್ಠ ನೀರಿನ ಮಟ್ಟ : 2284 ಅಡಿ / 19.52 ಟಿಎಂಸಿ
- ಇಂದಿನ ನೀರಿನ ಮಟ್ಟ: 2280.33 ಅಡಿ / 17.24 ಟಿಎಂಸಿ
- ಒಳಹರಿವು: 1033 ಕ್ಯೂಸೆಕ್ಸ್
- ಹೊರಹರಿವು: 575 ಕ್ಯೂಸೆಕ್ಸ್
ಭದ್ರಾ ಜಲಾಶಯ
- ಗರಿಷ್ಠ ನೀರಿನ ಮಟ್ಟ : 2158 ಅಡಿ / 71.54 ಟಿಎಂಸಿ
- ಇಂದಿನ ನೀರಿನ ಮಟ್ಟ: 2154.12 ಅಡಿ / 66.74 ಟಿಎಂಸಿ
- ಒಳಹರಿವು: 720 ಕ್ಯೂಸೆಕ್ಸ್
- ಹೊರಹರಿವು: 431 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ
- ಗರಿಷ್ಠ ನೀರಿನ ಮಟ್ಟ : 1633 ಅಡಿ / 105.79 ಟಿಎಂಸಿ
- ಇಂದಿನ ನೀರಿನ ಮಟ್ಟ: 1629.45 ಅಡಿ / 92.02 ಟಿಎಂಸಿ
- ಒಳಹರಿವು: 4055 ಕ್ಯೂಸೆಕ್ಸ್
- ಹೊರಹರಿವು: 5344 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
- ಗರಿಷ್ಠ ನೀರಿನ ಮಟ್ಟ : 2175 ಅಡಿ / 51.00 ಟಿಎಂಸಿ
- ಇಂದಿನ ನೀರಿನ ಮಟ್ಟ: 2168.65 ಅಡಿ / 46.03 ಟಿಎಂಸಿ
- ಒಳಹರಿವು: 0
- ಹೊರಹರಿವು: 4996 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
- ಗರಿಷ್ಠ ನೀರಿನ ಮಟ್ಟ : 2079.50 ಅಡಿ / 37.73 ಟಿಎಂಸಿ
- ಇಂದಿನ ನೀರಿನ ಮಟ್ಟ: 2077.14 ಅಡಿ / 33.17 ಟಿಎಂಸಿ
- ಒಳಹರಿವು: 0
- ಹೊರಹರಿವು: 2375 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
- ಗರಿಷ್ಠ ನೀರಿನ ಮಟ್ಟ : 519.60 ಮೀಟರ್ / 123.08 ಟಿಎಂಸಿ
- ಇಂದಿನ ನೀರಿನ ಮಟ್ಟ: 518.85 ಮೀಟರ್ / 111.01 ಟಿಎಂಸಿ
- ಒಳಹರಿವು: 0
- ಹೊರಹರಿವು: 2375 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ
- ಗರಿಷ್ಠ ನೀರಿನ ಮಟ್ಟ : 492.25 ಮೀಟರ್ / 33.31 ಟಿಎಂಸಿ
- ಇಂದಿನ ನೀರಿನ ಮಟ್ಟ: 491.36 ಮೀಟರ್ / 29.45 ಟಿಎಂಸಿ
- ಒಳಹರಿವು: 12463 ಕ್ಯೂಸೆಕ್ಸ್
- ಹೊರಹರಿವು: 1896 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ
- ಗರಿಷ್ಠ ನೀರಿನ ಮಟ್ಟ : 2140 ಅಡಿ / 30.42 ಟಿಎಂಸಿ
- ಇಂದಿನ ನೀರಿನ ಮಟ್ಟ: 2138.75 ಅಡಿ / 29.36 ಟಿಎಂಸಿ
- ಒಳಹರಿವು: 0
- ಹೊರಹರಿವು: 133 ಕ್ಯೂಸೆಕ್ಸ್












Click it and Unblock the Notifications