Immadi Pulikeshi: ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಜನ್ಮದಿನ, ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರದ್ದೇ ಸದ್ದು!
ಕನ್ನಡದ ದೊರೆ ಹಾಗೂ ಕರುನಾಡು ಕಂಡ ಶ್ರೇಷ್ಠ ರಾಜರಲ್ಲಿ ಒಬ್ಬರು ಎಂದೇ ಖ್ಯಾತರಾಗಿರುವ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಇಂದು. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗದಲ್ಲಿ ಕನ್ನಡದ ದೊರೆ ಇಮ್ಮಡಿ ಪುಲಿಕೇಶಿ ಅವರ ಜಯಂತಿ ವಿಜೃಂಭಣೆಯಿಂದ ನಡೆಯುತ್ತಿದೆ. ಹಲವು ಕನ್ನಡಪರ ಹೋರಾಟಗಾರರು ಇಮ್ಮಡಿ ಪುಲಿಕೇಶಿ ಅವರ ಜಯಂತಿಗೆ ಭಿನ್ನವಾಗಿ ಶುಭಕೋರಿದ್ದಾರೆ. ಕನ್ನಡದ ಹಾಗೂ ಕರುನಾಡ ದೊರೆಗಳನ್ನು ಮೆರೆಸೋಣ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿದೆ.
ಕನ್ನಡಿಗರು ಇತ್ತೀಚಿನ ವರ್ಷಗಳಲ್ಲಿ ಕನ್ನಡ, ಕನ್ನಡ ನಾಡು ಹಾಗೂ ನುಡಿಯ ವಿಚಾರವಾಗಿ ಹೆಚ್ಚು ಸಕ್ರಿಯರಾಗಿದ್ದಾರೆ. ಬೇರೆ ರಾಜ್ಯಗಳ ದೊರೆಗಳನ್ನು ಇಲ್ಲಿ ಮೆರೆಸುವುದಕ್ಕಿಂತ ನಮ್ಮವರನ್ನೇ ಮೆರೆಸೋಣ ಬನ್ನಿ. ಕರುನಾಡಿಗೆ ಅಪಾರ ಕೊಡುಗೆ ಕೊಟ್ಟಿರುವ ಕನ್ನಡದ ರಾಜರುಗಳನ್ನು ಸ್ಮರಿಸೋಣ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಲ್ಲೇ ಇದೆ. ಬುಧವಾರವೂ ಸಹ ಸೋಷಿಯಲ್ ಮೀಡಿಯಾದಲ್ಲಿ ಇಮ್ಮಡಿ ಪುಲಿಕೇಶಿ ಅವರ ಜಯಂತಿಯ ಹಿನ್ನೆಲೆಯಲ್ಲಿ ಶುಭಾಶಯಗಳು ಸುರಿಮಳೆಯೇ ಆಗಿದೆ.

ಇಮ್ಮಡಿ ಪುಲಿಕೇಶಿ ಅವರು ಅಖಂಡ ಭಾರತದ ಚಾಲುಕ್ಯ ಚಕ್ರವರ್ತಿ ಹಾಗೂ ನೌಕಾಪಡೆಯ ಪಿತಾಮಹ ಸಾರ್ವಭೌಮ ಎಂದೇ ಖ್ಯಾತರಾಗಿದ್ದಾರೆ. ಕರ್ನಾಟಕದ ಪ್ರಥಮ ಪ್ರೌಢ ಸಾಮ್ರಾಟ ಕನ್ನಡ ಕುಲ ಕೋಟಿ ತಿಲಕ, ಸ್ವಾಭಿಮಾನದ ಪ್ರತೀಕ, ದಕ್ಷಿಣ ಪಥೇಶ್ವರ ಹಾಗೂ ಶ್ರೀ ಪೃಥ್ವಿವಲ್ಲಭ ಬಿರುದಾಂಕಿತ ಇಮ್ಮಡಿ ಪುಲಿಕೇಶಿಗೆ ಇದೆ. ಇಮ್ಮಡಿ ಪುಲಿಕೇಶಿ ಅವರು ದಕ್ಷಿಣ ಪಥೇಶ್ವರ ಅಂತಲೇ ಖ್ಯಾತಿ ಹಾಗೂ ಮನ್ನಣೆಯನ್ನು ಗಳಿಸಿದ್ದಾರೆ.
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಸಹ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಕ್ಕಾಲು ಭಾಗ ಭಾರತವನ್ನೇ ಆಳಿದ್ದ ಕನ್ನಡಿಗ ನಮ್ಮ ಇಮ್ಮಡಿ ಪುಲಿಕೇಶಿ ಎಂದಿದ್ದಾರೆ. ದಕ್ಷಿಣ ಭಾರತವನ್ನು ಆಳಲು ಹೊಂಚು ಹಾಕಿದ್ದ ಉತ್ತರದ ಅರಸರ ಎಡೆಮುರಿ ಕಟ್ಟಿದ ಇಮ್ಮಡಿ ಪುಲಕೇಶಿಯವರು ತಮ್ಮ ಸೇನೆಯಲ್ಲಿ ಬಲಿಷ್ಠ ನೌಕಾದಳವನ್ನು ಹೊಂದಿದ್ದರು. ಎಲ್ಲರಿಗೂ ನೌಕಾದಳದ ಪಿತಾಮಹ ಇಮ್ಮಡಿ ಪುಲಕೇಶಿ ಜಯಂತಿಯ ಶುಭಾಶಯಗಳು ಎಂದು ಶುಭಕೋರಿದ್ದಾರೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಸಹ ಇಮ್ಮಡಿ ಪುಲಿಕೇಶಿ ಅವರ ಜಯಂತಿಗೆ ಶುಭಕೋರಿದ್ದಾರೆ. ಕನ್ನಡನಾಡು ಕಂಡ ಹೆಮ್ಮೆಯ ದೊರೆ, ಸಮಸ್ತ ಕನ್ನಡಿಗರ ಹೆಮ್ಮೆ, ಸಮರ ಕಣದಲ್ಲಿ ಮೊತ್ತ ಮೊದಲಿಗೆ ನೌಕಾಪಡೆ ಕಟ್ಟಿದ ವೀರಕಲಿ ಇಮ್ಮಡಿ ಪುಲಿಕೇಶಿ ಅವರು ಎಂದಿದ್ದಾರೆ. ಚಾಲುಕ್ಯ ಸಾಮ್ರಾಟ, ದಕ್ಷಿಣಾಪಥೇಶ್ವರ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಈ ದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು ಹಾಗೂ ಕನ್ನಡಿಗರೆಲ್ಲರಿಗೂ ಹಾರ್ದಿಕ ಶುಭಾಶಯಗಳು ಎಂದು ಶುಭಕೋರಿದ್ದಾರೆ.
ಕನ್ನಡಿಗ ದೊರೆಗಳನ್ನು ಮೆರೆಸೋಣ: ಕರ್ನಾಟಕದಲ್ಲಿ ನಮ್ಮ ಕನ್ನಡದ ರಾಜರನ್ನು ಮೆರೆಸೋಣ ಎನ್ನುವು ವಿಷಯ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೆ ಚರ್ಚೆಯಾಗುತ್ತಲ್ಲೇ ಇದೆ. ಉತ್ತರ ಭಾರತದ ಕೆಲವು ನಿರ್ದಿಷ್ಟ ರಾಜರ ಹೆಸರುಗಳನ್ನು ಉಲ್ಲೇಖಿಸಿ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ.












Click it and Unblock the Notifications