ಮಾನವ ಹಕ್ಕು ಆಯೋಗಕ್ಕೆ ಡಿ.ಮುರುಗೇಶನ್‌ ಅಧ್ಯಕ್ಷರು

ಬೆಂಗಳೂರು, ಡಿ. 18 : ಸುಮಾರು ಹದಿನಾರು ತಿಂಗಳಿನಿಂದ ಖಾಲಿ ಉಳಿದ್ದಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹುದ್ದೆಗೆ ದೆಹಲಿ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ಮುರುಗೇಶನ್‌ ಹೆಸರನ್ನು ಸರ್ಕಾರ ಅಂತಿಮಗೊಳಿಸಿದೆ. ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದ್ದು, ಅವರು ಒಪ್ಪಿಗೆ ನೀಡದ ಬಳಿಕ ಡಿ.ಮುರುಗೇಶನ್ ಅಧಿಕಾರ ಸ್ವೀಕರಿಸಲಿದ್ದಾರೆ.

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮಿಳುನಾಡು ಮೂಲದ ಮುರುಗೇಶನ್‌ ಹೆಸರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹುದ್ದೆಗೆ ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗಿದೆ. ಈ ಮೂಲಕ 16 ತಿಂಗಳಿನಿಂದ ಖಾಲಿ ಉಳಿದಿದ್ದ ಆಯೋಗದ ಅಧ್ಯಕ್ಷ ಸ್ಥಾನ ಭರ್ತಿಯಾಗಲಿದೆ.

D. Murugesan will be Karnataka HRC chairman

ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಒಪ್ಪಿಗೆ ನೀಡಿದ ಬಳಿಕ ಮುರುಗೇಶನ್‌ ರಾಜ್ಯ ಮಾನವ ಹಕ್ಕು ಆಯೋಗದ 2ನೇ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ. 2005ರಲ್ಲಿ ಆಯೋಗ ರಚನೆಯಾದ ಬಳಿಕ 2007ರಲ್ಲಿ ನ್ಯಾ. ಎಸ್‌.ಆರ್‌.ನಾಯಕ್‌ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 2012ರ ಜುಲೈ 25ರಂದು ನಾಯಕ್‌ ನಿವೃತ್ತಿಯಾದ ಬಳಿಕ ಹುದ್ದೆ ಖಾಲಿ ತೆರವಾಗಿತ್ತು.

ಮುರುಗೇಶನ್‌ ಯಾರು? : ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮುರುಗೇಶನ್‌ ತಮಿಳನಾಡು ಮೂಲದವರು. 1951ರಲ್ಲಿ ತಮಿಳುನಾಡಿನಲ್ಲಿ ಜನಿಸಿದ ಮುರುಗೇಶನ್‌, 1975ರಲ್ಲಿ ವಕೀಲರ ಅಸೋಸಿಯೇಷನ್‌ ಸದಸ್ಯರಾದರು. 1984ರಿಂದ 87 ರವರೆಗೆ ಮದ್ರಾಸ್‌ ವಿವಿ ಹಾಗೂ 1992ರಿಂದ 96ರವರೆಗೆ ಚೆನ್ನೈ ನಗರಪಾಲಿಕೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದರು.

ರಿಟ್ ಅರ್ಜಿಗಳಿಗೆ, ಶಿಕ್ಷಣ ವ್ಯಾಜ್ಯಗಳಿಗೆ ಸರ್ಕಾರದ ವಿಶೇಷ ಅಭಿಯೋಜಕರಾಗಿ ಮುರುಗೇಶನ್ ಸೇವೆ ಸಲ್ಲಿಸಿದ್ದಾರೆ. 1998ರಲ್ಲಿ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡ ಅವರು, 2000ರಲ್ಲಿ ಮದ್ರಾಸ್‌ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಾಧೀಶರಾದರು ನಂತರ, 2001 ರಲ್ಲಿ ಕಾಯಂ ನ್ಯಾಯಾಧೀಶರಾದರು. 2012ರಲ್ಲಿ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಅವರು, ಜೂನ್‌ 10, 2013ರಂದು ನಿವೃತ್ತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+