ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಮುಂಗಾರು ವಿಳಂಬ
ಬೆಂಗಳೂರು, ಜೂನ್ 12: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣದಿಂದಾಗಿ ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬವಾಗುತ್ತಿದೆ.
ಇದೀಗ ವಾಯು ಚಂಡಮಾರುತ ಗುಜರಾತಿಗೆ ಅಪ್ಪಳಿಸಲಿದ್ದು, ಕರ್ನಾಟಕದಲ್ಲೂ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ವಾಯು ಚಂಡಮಾರುತ ಮಂಗಳವಾರ ಸಾಯಂಕಾಲವೇ ಬಲಗೊಂಡಿದ್ದು ಗಂಟೆಗೆ 75-135 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.

ಎಂಟು ವರ್ಷದಲ್ಲಿ ಈ ಬಾರಿ ಮುಂಗಾರು ಪ್ರವೇಶ ಅತಿ ವಿಳಂವಾಗಿದೆ. ಆದರೆ ಉತ್ತರ ಕನ್ನಡಕ್ಕೆ ಪ್ರವೇಶಿಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 2014 ಮತ್ತು 2016ರಲ್ಲಿ ಜೂನ್ 9 ರಂದು ಮುಂಗಾರು ಕರ್ನಾಟಕವನ್ನು ಪ್ರವೇಶಿಸಿತ್ತು. ಆದರೆ ಈ ಬಾರಿ ಜೂನ್ ಕಳೆದರೂ ಮಳೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಬುಧವಾರ ಬೆಳಗ್ಗೆ ಮುಂಗಾರು ರಾಜ್ಯವನ್ನು ಪ್ರವೇಶಿಸಿರುವುದನ್ನು ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಚಂಡಮಾರುತವೂ ಇರುವ ಕಾರಣ ಮಳೆಯಾಗುತ್ತಿಲ್ಲ. ಇತ್ತೀಚೆಗೆ ಕಂಡು ಬಂದಿದ್ದ ಫೋನಿ ಚಂಡಮಾರುತದಿಂದ ಮುಂಗಾರು ವಿಳಂಬವಾಗಿತ್ತು.
ಹಾಗಾಗಿ ಮುಂಗಾರು ಕೇರಳವನ್ನು ಪ್ರವೇಶಿಸಿದರೂ ಕೇರಳದಲ್ಲಿ ಹಾಗೂ ಕರ್ನಾಟಕದಲ್ಲಿ ಮಳೆಯಾಗಿಲ್ಲ. ಚಂಡ ಮಾರುತದ ಪ್ರಭಾವ ಕಡಿಮೆಯಾದ ಬಳಿಕ ಮುಂಗಾರು ಪ್ರಭಾವ ರಾಜ್ಯದಲ್ಲಿ ಕಂಡುಬರಲಿದೆ. ಜೂ.16ರ ನಂತರ ಮುಂಗಾರಿನ ಪ್ರಭಾವ ರಾಜ್ಯದಲ್ಲಿ ಗೋಚರಿಸಲಿದೆ.












Click it and Unblock the Notifications