ರಾಜಕೀಯ ವಿರೋಧಿ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ ಸಿ.ಟಿ.ರವಿ!
Recommended Video
ಬೆಂಗಳೂರು, ಏಪ್ರಿಲ್ 25: ಸದಾ ಮೈತ್ರಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ವಿರುದ್ಧ ಕಟುವಾದ ಟೀಕೆ ಮಾಡುತ್ತಲೇ ಇರುವ ಬಿಜೆಪಿ ಶಾಸಕ, ಹಿರಿಯ ಮುಖಂಡ ಸಿ.ಟಿ.ರವಿ ಅವರು ಇಂದು ಏಕಾ-ಏಕಿ ಸಿದ್ದರಾಮಯ್ಯ ಅವರನ್ನು ಬಹುವಾಗಿ ಹೊಗಳಿದ್ದಾರೆ.
ಕಳೆದ ವರ್ಷ ಪತ್ರಕರ್ತೆ ಬರ್ಖಾ ದತ್ ಮಾಡಿದ್ದ ಟ್ವೀಟ್ ಅನ್ನು ಇಟ್ಟುಕೊಂಡು ಸಿ.ಟಿ.ರವಿ ಅವರು ತಮ್ಮ ರಾಜಕೀಯ ವಿರೋಧಿ ಸಿದ್ದರಾಮಯ್ಯ ಅವರನ್ನು ಬಹುವಾಗಿ ಹೊಗಳಿದ್ದಾರೆ. ಸಿ.ಟಿ.ರವಿ ಅವರ ಟ್ವೀಟ್‌ಗೆ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ.
ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಪತ್ರಕರ್ತೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ ಲೇಖನವೊಂದನ್ನು ಬರೆದಿದ್ದರು. 'ಕುರಿಯುವವನ ಮಗ ಮೋದಿಯನ್ನು ದಕ್ಷಿಣ ಭಾರತದಲ್ಲಿ ತಡೆಯಬಲ್ಲುರೆ?' ಎಂದು ಆ ಲೇಖನಕ್ಕೆ ತಲೆ ಬರಹ ನೀಡಿ ಸಿದ್ದರಾಮಯ್ಯ ಅವರು ಮೋದಿ ಅವರನ್ನು ಪ್ರಾದೇಶಿಕತೆಯನ್ನು ಮುಖ್ಯವಾಗಿಟ್ಟುಕೊಂಡು ಎದುರಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದ್ದರು.

ಇದನ್ನು ಈಗ ಟ್ವೀಟ್ ಮೂಲಕ ಖಂಡಿಸಿರುವ ಸಿ.ಟಿ.ರವಿ ಅವರು, 'ಇದು ಯಾವ ರೀತಿಯ ಪತ್ರಿಕಾಧರ್ಮ?, ಸಿದ್ದರಾಮಯ್ಯ ಅವರು ತಮ್ಮ ಸ್ವಂತ ಶಕ್ತಿಯಿಂದ ಬೆಳೆದವರು, ಅವರು ಬೇರುಮಟ್ಟದಿಂದ ಬೆಳೆದವರು, ಅವರು ಸ್ವ ಪರಿಶ್ರಮದಿಂದ ಜನಗಳ ನಾಯಕನಾಗಿ ಹೊರಹೊಮ್ಮಿದವರು' ಎಂದು ಹೇಳಿದ್ದಾರೆ.
ಅಂತಹಾ ಸಿದ್ದರಾಮಯ್ಯ ಅವರನ್ನು 'ಕುರಿಕಾಯುವವನ ಮಗ' ಎಂಬಲ್ಲಿಗೆ ಇಳಿಸುವುದು ಇದು ನಿಂದನಾ ವರದಿ ಎಂದೇ ಪರಿಗಣಿಸಲಾಗುತ್ತದೆ. ಕನ್ನಡಿಗರೊಬ್ಬರ ಬಗ್ಗೆ ಹೀಗೆ ಹೀನಾಯವಾಗಿ ಮಾತನಾಡುವುದು ನಾನು ಸಹಿಸುವುದಿಲ್ಲ ಎಂದು ಸಿ.ಟಿ.ರವಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications