‘ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿ..’

ಬಿಜೆಪಿ & ಕಾಂಗ್ರೆಸ್ ನಡುವೆ ಹೊತ್ತಿರುವ ರಾಜಕೀಯ ಬೆಂಕಿ, ಪಂಚರಾಜ್ಯ ಚುನಾವಣೆಗಿಂತ ದೊಡ್ಡದಾಗೇ ಕಾವು ಪಡೆದಿದೆ. ಚುನಾವಣೆ ನಡೆಯುತ್ತಿರುವುದು ಬೇರೆ ರಾಜ್ಯದಲ್ಲೇ ಆದ್ರೂ ಕರ್ನಾಟಕದಲ್ಲಿ ಕಿತ್ತಾಟ ಬಲು ಜೋರಾಗಿದೆ. ಕರ್ನಾಟಕದ ಬಿಜೆಪಿ ನಾಯಕರು ಕಾಂಗ್ರೆಸ್‌ನ ಲೀಡರ್ಸ್ ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದು ಈಗ ಮತ್ತೊಮ್ಮೆ 'ಎಟಿಎಂ' ಪದ ಬಳಸಲಾಗಿದೆ.

ಇನ್ನೇನು ಪಂಚರಾಜ್ಯ ಚುನಾವಣೆ ಮುಕ್ತಾಯವಾಗಲಿದ್ದು, ಭಾನುವಾರ ಫಲಿತಾಂಶ ಕೂಡ ಹೊರಬೀಳಲಿದೆ. ಈ ಸಮಯದಲ್ಲೇ, ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಪಂಚರಾಜ್ಯ ಚುನಾವಣೆಗೆ ಹಣ ಹೋಗಿದೆ ಅಂತಾ ಬಿಜೆಪಿ ನಾಯಕರು ಆರೋಪ ಮಾಡ್ತಿದ್ದಾರೆ. ಹೀಗೆ, ಇದೀಗ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಸಿ.ಟಿ.ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹಾಗಾದರೆ ಸಿ.ಟಿ.ರವಿ ಮಾಡಿರುವ ಆರೋಪ ಏನು?

CT Ravi Made Corruption Allegation On Congress Government In Karnataka

'ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ...'

ಅಂದಹಾಗೆ ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಸಿ.ಟಿ.ರವಿ, 'ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲನೇ ಕಂತು ಬಂತು, 2ನೇ ಕಂತು ಬಂತು, 3ನೇ ಕಂತಿನಲ್ಲಿ ಚೌಕಾಸಿ ಆಗಬಾರದೆಂದು 3ನೇ ಕಂತಿಗೋಸ್ಕರ ಮತ್ತೆ ಬೆಂಗಳೂರಿಗೆ ಬಂದಂತಿದೆ. ಕರ್ನಾಟಕ ಇನ್ನೆಷ್ಟು ಕಂತು ಕೊಡಬೇಕೋ?' ಎಂದಿದ್ದಾರೆ. ಹೀಗೆ ಕರ್ನಾಟಕದ ಕಾಂಗ್ರೆಸ್ ನಾಯಕರ ವಿರುದ್ಧ ಗಂಭೀರ ಅರೋಪ ಹೊರಿಸಿದ್ದಾರೆ.

ಗ್ಯಾರಂಟಿ ವಾರ್ ಕೂಡ ಜೋರು

ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಬಿಜೆಪಿ ಆರೋಪಗಳನ್ನ ಹೊರಿಸುತ್ತಿದೆ. ಹೀಗೆ ಬಿಜೆಪಿ & ಕಾಂಗ್ರೆಸ್ ನಡುವೆ ನಡೆಯುತ್ತಿರುವ ಗ್ಯಾರಂಟಿ ವಾರ್ ಜೋರಾಗುತ್ತಿದೆ. ಒಬ್ಬರಿಗೆ ಮತ್ತೊಬ್ಬರು ಸವಾಲನ್ನ ಎಸೆಯುತ್ತಾ ಫೈಟಿಂಗ್ ಮುಂದುವರಿಸಿದ್ದಾರೆ. ಹೀಗೆ ಕಾಂಗ್ರೆಸ್ & ಬಿಜೆಪಿ ಜಗಳ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ನಾಯಕರ ವಿರುದ್ಧ ಮತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಆರೋಪ ಕೂಡ ಹೊರಿಸುತ್ತಿದೆ. ಇದೀಗ ಸಿ.ಟಿ. ರವಿ ಅವರು ಮಾಡಿರುವ ಆರೋಪಕ್ಕೆ ಕಾಂಗ್ರೆಸ್‌ನ ಲೀಡರ್ಸ್ ಹೇಗೆ ಉತ್ತರಿಸಲಿದ್ದಾರೆ? ಅನ್ನೋದನ್ನ ಕಾದು ನೋಡಬೇಕಿದೆ.

ಲೋಕಸಭೆ ತನಕ ಫುಲ್ ಫೈಟ್?

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕರ್ನಾಟಕ ರಾಜಕೀಯ ಅಖಾಡದಲ್ಲಿ ಕಿಚ್ಚು ಹೊತ್ತಿದೆ. ಇದೆ ಕಿಚ್ಚು ತಣ್ಣಗಾಗಲು ಪಂಚರಾಜ್ಯ ಚುನಾವಣೆ ಮಾತ್ರವಲ್ಲ, ಲೋಕಸಭೆಯ ಚುನಾವಣೆ ಕೂಡ ಮುಗಿಯಬೇಕು. ಅಲ್ಲಿಯ ತನಕ ಇಬ್ಬರ ಮಧ್ಯೆ ಇದೇ ರೀತಿ ಫೈಟಿಂಗ್ ಮುಂದುವರಿದು ಭರ್ಜರಿ ಡೈಲಾಗ್‌ಗಳನ್ನ ಕೇಳಬೇಕಾಗಿ ಬರಬಹುದು ಅಂತಿದ್ದಾರೆ ಜನ. ಈ ಮೂಲಕ ಕೆಲ ತಿಂಗಳು ಬಾಕಿ ಇರುವಾಗಲೇ ಲೋಕಸಭೆ ಚುನಾವಣೆ ಅಖಾಡಕ್ಕೂ ಕರ್ನಾಟಕದಲ್ಲಿ ಇದೀಗ ಕಿಚ್ಚು ಹೊತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+