ಕೇಂದ್ರದಿಂದ ಹಿಂದಿ - ಸಂಸ್ಕೃತಕ್ಕೆ ಕೋಟಿ.. ಕೋಟಿ: ಕನ್ನಡ, ತೆಲುಗು, ತಮಿಳು & ಮಲಯಾಳಂ ಭಾಷೆಗೆ ಚಿಲ್ಲರೆ!

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರವು ದೇಶದ ಯಾವ ಭಾಷೆಗಳಿಗೆ ಎಷ್ಟು ಅನುದಾನ ನೀಡುತ್ತಿದೆ ಎನ್ನುವ ವಿಚಾರವು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಬಹಿರಂಗವಾಗಿದ್ದು. ಇದರಲ್ಲಿ ಕನ್ನಡ ಭಾಷೆಗೆ ನಿರಂತರವಾಗಿ ಅನ್ಯಾಯವಾಗುತ್ತಿರುವುದು ಬೆಳಕಿಗೆ ಬಂದಿದೆ. ಭಾಷೆಗಳಿಗೆ ಅನುದಾನ ನೀಡುವಾಗ ಮತ್ತೆ ಸಂಸ್ಕೃತ ಹಾಗೂ ಹಿಂದಿಗೆ ಸಿಂಹಪಾಲು ಸಿಕ್ಕಿದೆ. ಇದಾದ ನಂತರ ತಮಿಳು ಭಾಷೆಗೂ ಹೆಚ್ಚು ಅನುದಾನ ಲಭ್ಯವಾಗಿದೆ. 2014-15 ಹಾಗೂ 2024-25ರ ನಡುವೆ ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರವು ಬರೋಬ್ಬರಿ 2532.59 ಕೋಟಿ ಅನುದಾನವನ್ನು ಖರ್ಚು ಮಾಡಿದೆ.

ಹೌದು ದೇಶದಲ್ಲಿ ಭಾಷಾ ವಿಚಾರ ಹಾಗೂ ಭಾಷೆಗಳಿಗೆ ಕೇಂದ್ರದ ಅನುದಾನದ ಬಗ್ಗೆ ಮತ್ತೆ ಚರ್ಚೆ ನಡೆದಿದೆ. ಈ ಸಂಬಂಧ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹಿಂದಿ ಹೇರಿಕೆ ಹಾಗೂ ಕನ್ನಡವೂ ಸೇರಿದಂತೆ ದೇಶದ ವಿವಿಧ ಭಾಷೆಗಳಿಗೆ ಕೇಂದ್ರ ಸರ್ಕಾರವು ಎಷ್ಟು ಅನುದಾನ ನೀಡಿದೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಕೇಂದ್ರ ಸರ್ಕಾರವು ಸಂಸ್ಕೃತ ಹಾಗೂ ಹಿಂದಿ ಭಾಷೆಗಳಿಗೆ ಅನುದಾನದಲ್ಲಿ ಸಿಂಹಪಾಲು ನೀಡಿದೆ. ಉಳಿದ ಭಾಷೆಗಳಿಗೆ ಅತ್ಯಂತ ಕಡಿಮೆ ಅನುದಾನ ನೀಡಿದೆ ಎನ್ನುವ ವಿಷಯವು ಇದೀಗ ಬಹಿರಂಗವಾಗಿದೆ.

Crores for Hindi and Sanskrit from central BJP government Small amount for Kannada Telugu Tamil and Malayalam

ಕನ್ನಡವೂ ಸೇರಿದಂತೆ ಐದು ಶಾಸ್ತ್ರೀಯ ಭಾಷೆಗಳಿಗೆ ಕೇಂದ್ರ ಸರ್ಕಾರವು ಅತ್ಯಂತ ಕಡಿಮೆ ಅನುದಾನ ಖರ್ಚು ಮಾಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಒಡಿಯಾ ಭಾಷೆಗಳ ಒಟ್ಟು ವೆಚ್ಚಕ್ಕಿಂತ ಇದು 17 ಪಟ್ಟು ಹೆಚ್ಚಾಗಿದೆ. ಸಂಸ್ಕೃತ ಭಾಷೆಗೆ ಕೇಂದ್ರ ಸರ್ಕಾರವು ವರ್ಷ (ಸರಾಸರಿ) 230.24 ಕೋಟಿ ಹಾಗೂ ಇನ್ನುಳಿದ ಐದು ಭಾಷೆಗಳಿಗೆ ಪ್ರತಿ ವರ್ಷ 13.41 ಕೋಟಿ ರೂಪಾಯಿ ಮಾತ್ರ ಖರ್ಚು ಮಾಡಿದೆ. ಇನ್ನು ಇದರಲ್ಲೂ ಕೆಲವೊಂದು ವ್ಯತ್ಯಾಸವಾಗಿದೆ. ತಮಿಳು ಭಾಷೆಗೂ ಉಳಿದ ಭಾಷೆಗಳಿಗಿಂತ ಹೆಚ್ಚು ಅನುದಾನ ಸಿಕ್ಕಿದೆ.

ತಮಿಳು ಭಾಷೆಗೆ ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. 2004ರಲ್ಲಿ ತಮಿಳು ಭಾಷೆಗೆ ಮೊದಲು ಶಾಸ್ತ್ರೀಯ ಭಾಷೆ ಎನ್ನುವ ಗೌರವ ಸಿಕ್ಕಿದೆ. ಭಾರತೀಯ ಭಾಷೆಗಳ ಪ್ರಚಾರಕ್ಕಾಗಿ ನೀಡುವ ಅನುದಾನ ಯೋಜನೆಯಡಿ ಬರೋಬ್ಬರಿ 113.48 ಕೋಟಿ ರೂಪಾಯಿಯನ್ನು ಈ ಭಾಷೆಯ ಪ್ರಚಾರಕ್ಕೆ ಕೊಡಲಾಗಿದೆ. ಇನ್ನು ಈ ಮೊತ್ತವು 2005 ರಲ್ಲಿ ಸಂಸ್ಕೃತದ ಪ್ರಚಾರಕ್ಕಾಗಿ ಕೇಂದ್ರ ಖರ್ಚು ಮಾಡಿದ ಮೊತ್ತಕ್ಕಿಂತ 22 ಪಟ್ಟು ಕಡಿಮೆಯಾಗಿದೆ. 2008 ಮತ್ತು 2014 ರ ನಡುವೆ ಕನ್ನಡವೂ ಸೇರಿದಂತೆ ತೆಲುಗು, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೂ ಶಾಸ್ತ್ರೀಯ ಸ್ಥಾನಮಾನದ ಗೌರವ ಸಿಕ್ಕಿದೆ. ಆದರೆ, ಈ ಭಾಷೆಗಳಿಗೆ ಈ ಅವಧಿಯಲ್ಲಿ ಕೇವಲ 34.08 ಕೋಟಿ ಅನುದಾನ ನೀಡಲಾಗಿದೆ ಎನ್ನುವುದು ಇದೀಗ ಬಹಿರಂಗವಾಗಿದೆ.

Crores for Hindi and Sanskrit from central BJP government Small amount for Kannada Telugu Tamil and Malayalam

ಕೇಂದ್ರ ಸರ್ಕಾರವು 2014 ರಿಂದ 2024 ರವರೆಗೆ ಸಂಸ್ಕೃತದ ಅಭಿವೃದ್ಧಿಗಾಗಿ 2532.59 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೆ ಬಿಡುಗಡೆಯಾದ ಒಟ್ಟು ಮೊತ್ತ 147.56 ಕೋಟಿ ರೂ ಮಾತ್ರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+