ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೌಡಿಗಳು, ಕ್ರಿಮಿನಲ್‌ಗಳೇ ಬಿಜೆಪಿಗೆ ಆದರ್ಶ ವ್ಯಕ್ತಿಗಳು: ಸೈಲೆಂಟ್‌ ಸುನೀಲನ ವಿಚಾರವಾಗಿ ಕಾಂಗ್ರೆಸ್‌ ವಾಗ್ದಾಳಿ

|
Google Oneindia Kannada News

ಬೆಂಗಳೂರು, ನವೆಂಬರ್‌ 29: ಮೋಸ್ಟ್‌ ವಾಂಟೆಡ್‌ ರೌಡಿ ಸೈಲೆಂಟ್‌ ಸುನೀಲನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಕಲ್ಲೋಲ ಸೃಷ್ಟಿಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ನಲ್ಲೂ ರೌಡಿ ಶೀಟರ್‌ಗಳು ಇದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಗಡಿಪಾರಾಗಿದ್ದ ಕ್ರಿಮಿನಲ್‌ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ರೌಡಿಗಳು, ಕ್ರಿಮಿನಲ್‌ಗಳೇ ಆದರ್ಶ ವ್ಯಕ್ತಿಗಳು. ಪೊಲೀಸರಿಂದ ಇಂತಹ ಆತಿಥ್ಯ ಪಡೆದ ಈ ವ್ಯಕ್ತಿಗೆ ರಾಜಾತಿಥ್ಯ ನೀಡುತ್ತಿದೆ ಬಿಜೆಪಿ. ಪೊಲೀಸರೆದುರು ತಲೆ ತಗ್ಗಿಸಿ ನಿಲ್ಲುವವನಿಗೆ ಅದೇ ಪೊಲೀಸರಿಂದ ಸೆಲ್ಯೂಟ್ ಹೊಡೆಸಲು ಹವಣಿಸುತ್ತಿದೆ ಬಿಜೆಪಿ' ಎಂದು ಕಾಂಗ್ರೆಸ್‌ ಹರಿಹಾಯ್ದಿದೆ.

Breaking; ಮಹಿಳಾ ಕಾಂಗ್ರೆಸ್‌ನಲ್ಲಿ ಭಿನ್ನಮತ, ಟ್ವೀಟ್‌ ಬಾಣ ಬಿಟ್ಟ ಬಿಜೆಪಿ Breaking; ಮಹಿಳಾ ಕಾಂಗ್ರೆಸ್‌ನಲ್ಲಿ ಭಿನ್ನಮತ, ಟ್ವೀಟ್‌ ಬಾಣ ಬಿಟ್ಟ ಬಿಜೆಪಿ

'40 ಪರ್ಸೆಂಟ್‌ ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ ಬಿಜೆಪಿ ತಯಾರಿ ನಡೆಸಿರುವಂತಿದೆ. ಬಿಜೆಪಿಯಲ್ಲಿ ರೌಡಿ ಮೋರ್ಚಾ ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ. ಸೋಲುವ ಭಯದಲ್ಲಿರುವ ಬಿಜೆಪಿ ರೌಡಿಗಳನ್ನು ಬಳಸಿ ಚುನಾವಣೆಗೆ ಸಿದ್ಧತೆ ನಡೆಸಿದೆಯೇ ಬಸವರಾಜ ಬೊಮ್ಮಾಯಿ ಅವರೇ ಇದೇನಾ ಬಿಜೆಪಿಯ ಸಂಸ್ಕೃತಿ, ಸಂಸ್ಕಾರ?' ಎಂದು ಹರಿಹಾಯ್ದಿದೆ.

ಸೈಲೆಂಟ್‌ ಸುನೀಲನನ್ನು ಬಂಧಿಸುವ ದೈರ್ಯ ಹೇಗೆ ಬರುತ್ತೆ: ಸಿದ್ದು

ಸೈಲೆಂಟ್‌ ಸುನೀಲನನ್ನು ಬಂಧಿಸುವ ದೈರ್ಯ ಹೇಗೆ ಬರುತ್ತೆ: ಸಿದ್ದು

ರೌಡಿ ಸೈಲೆಂಟ್‌ ಸುನೀಲನ ಪಕ್ಕದಲ್ಲಿ ಬಿಜೆಪಿ ನಾಯಕರು ಇರುವಾಗ ಸಿಸಿಬಿ ಪೊಲೀಸರಿಗೆ ಆತನನ್ನು ಬಂಧಿಸುವ ಧೈರ್ಯವಾದರೂ ಹೇಗೆ ಬರುತ್ತೆ ಎಂದು ವಿಧಾನಸಭೆ ವಿರೋಧ ಪರಿಷತ್‌ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅವನ್ಯಾವನೋ ರೌಡಿ ಸುನೀಲನ ಜೊತೆ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ.ಮೋಹನ ವೇದಿಕೆ ಹಂಚಿಕೊಂಡಿದ್ದಾರೆ. ಡಕಾಯತಿ, ಕೊಲೆ ಪ್ರಕರಣಗಳಲ್ಲಿ ಭಾಗಿಯಾದವರ ಜೊತೆ ಬಿಜೆಪಿ ಮುಖಂಡರು ಸೇರಿಕೊಂಡಿದ್ದಾರೆ. ಬಿಜೆಪಿಯವರು ಹೇಳೋದು ವೇದಾಂತ, ತಿನ್ನೋದು ಬದ್ನೆಕಾಯಿ ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ನಲ್ಲಿ ರೌಡಿ ಶೀಟರ್‌ಗಳಿದ್ದಾರೆ: ಬೊಮ್ಮಾಯಿ

ಕಾಂಗ್ರೆಸ್‌ನಲ್ಲಿ ರೌಡಿ ಶೀಟರ್‌ಗಳಿದ್ದಾರೆ: ಬೊಮ್ಮಾಯಿ

ತಮ್ಮ ಪಕ್ಷದಲ್ಲಿ ಎಷ್ಟು ಜನ ರೌಡಿ ಶೀಟರ್‌ಗಳಿದ್ದಾರೆ ಎಂದು ಕಾಂಗ್ರೆಸ್‌ ಪ್ರಶ್ನಿಸಿಕೊಳ್ಳಲಿ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಸೈಲೆಂಟ್‌ ಸುನೀಲನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ವಿಚಾರವಾಗಿ ಸಿಎಂ ಬೊಮ್ಮಾಯಿ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ಸೈಲೆಂಟ್‌ ಸುನೀಲನ ಜೊತೆ ಬಿಜೆಪಿ ನಾಯಕರು

ಸೈಲೆಂಟ್‌ ಸುನೀಲನ ಜೊತೆ ಬಿಜೆಪಿ ನಾಯಕರು

'ವಾಂಟೆಡ್ ಲಿಸ್ಟ್‌ನಲ್ಲಿರುವ ರೌಡಿ ಪೊಲೀಸರ ಕೈಗೆ ಸಿಗುವುದಿಲ್ಲ, ಆದರೆ ಬಿಜೆಪಿ ನಾಯಕರ ಜೊತೆಯಲ್ಲಿರುತ್ತಾನೆ. ಕಳ್ಳರು, ಸುಳ್ಳರು, ಭ್ರಷ್ಟರು, ರೌಡಿಗಳು ಎಲ್ಲರಿಗೂ ಒಂದೇ ಸೂರು ಬಿಜೆಪಿ. ಪೊಲೀಸರು ಹುಡುಕುತ್ತಿದ್ದ ರೌಡಿಯ ಜೊತೆಗೆ ನಿಮ್ಮ ನಾಯಕರಿಗೆ ಏನು ಕೆಲಸ? ಆತನ ಬಂಧನ ಆಗದಿರುವ ಹಿಂದೆ ಬಿಜೆಪಿ ಕೈವಾಡವಿದೆಯೇ' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಕ್ರಿಮಿನಲ್‌ಗಳೊಂದಿಗೆ ಬಿಜೆಪಿ ನೆಂಟಸ್ತಿಕೆ: ಕಾಂಗ್ರೆಸ್‌

ಕ್ರಿಮಿನಲ್‌ಗಳೊಂದಿಗೆ ಬಿಜೆಪಿ ನೆಂಟಸ್ತಿಕೆ: ಕಾಂಗ್ರೆಸ್‌

'ಕ್ರಿಮಿನಲ್‌ಳೊಂದಿಗೆ ಬಿಜೆಪಿಯ ನೆಂಟಸ್ತಿಕೆ ಇರುವಾಗ ರಾಜ್ಯದಲ್ಲಿ ಅಪರಾಧ ಪ್ರಕರಣ ಸಂಖ್ಯೆ ಏರದಿರುತ್ತದೆಯೇ? ಆರಗ ಜ್ಞಾನೇಂದ್ರ ಅವರೇ, ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ ಅಥವಾ ನೀವೇ ಪೊಲೀಸರನ್ನು ಕಟ್ಟಿಹಾಕಿದ್ದೀರಾ? ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ' ಎಂದು ಕಾಂಗ್ರೆಸ್‌ ಕೇಳಿದೆ.

ಬಿಜೆಪಿಯ ಕೃಪಾಕಟಾಕ್ಷದಿಂದ ಸೈಲೆಂಟ್ ಸುನಿಲ್ ಎಂಬ ರೌಡಿಯ ಮುಂದೆ ಈಗ ಪೊಲೀಸರೇ ಸೈಲೆಂಟ್. ಆರಗ ಜ್ಞಾನೇಂದ್ರ ಅವರೇ, ಸೈಲೆಂಟ್ ಸುನೀಲನಿಗೆ ಪೊಲೀಸರು ಹುಡುಕುತ್ತಿರಲಿಲ್ಲವೇ? ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿದ್ದಾಗ ಅಲ್ಲಿ ಪೊಲೀಸರೀರಲಿಲ್ಲವೇ? ಬಂಧಿಸದಂತೆ ಪೊಲೀಸರಿಗೆ ತಡೆದವರು ಯಾರು? ಪೊಲೀಸರಿಗಿಂತ ರೌಡಿಗಳೇ ಪ್ರಭಾವಿಗಳಾದರೆ' ಎಂದು ಕೆಪಿಸಿಸಿ ಪ್ರಶ್ನಿಸಿದೆ.

English summary
BJP leaders shared the stage with the most wanted rowdy Silent Sunilana. This issue has created chaos in the state politics. Congress leaders including former CM Siddaramaiah have gone against the BJP. Responding to this, Chief Minister Basavaraja Bommai said that there are rowdy sheeters in the Congress too,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X