ಮೈಸೂರು: ನಿರುದ್ಯೋಗಿ ಎಂದಳು, ಇರಿದು ಕೊಂದು ಬಿಟ್ಟ
ಬೆಂಗಳೂರು, ಫೆ.19: ಅವರಿಬ್ಬರು ಸುಮಾರು ಹತ್ತು ವರ್ಷಗಳ ಕಾಲ ಹಾಗೂ ಹೀಗೂ ಸಂಸಾರ ನಡೆಸಿದ್ದರು. ಇಬ್ಬರ ಮಧ್ಯೆ ದೊಡ್ಡ ಜಗಳವೇನು ಆಗಿರಲಿಲ್ಲ. ಆದರೆ, ನಿನ್ನೆ ದಿವಸ ಪತ್ನಿ ಮೇಲೆ ಆತ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಕೊಂದುಬಿಟ್ಟ. ಪರಾರಿಯಾಗಲು ಯತ್ನಿಸಿದ ಪತಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ. ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತವಾಗಿತ್ತು ಅದಕ್ಕೆ ಅವಳನ್ನು ಕೊಚ್ಚಿ ಕೊಂದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಮೈಸೂರಿನ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಮೇದರ ಬ್ಲಾಕಿನ ನಿವಾಸಿ ನವೀನ್ ತನ್ನ ಪತ್ನಿ 35 ವರ್ಷದ ಸೌಮ್ಯ ಎಂಬಾಕೆಯನ್ನು ಚಾಕುವಿನಿಂದ ಮನಬಂದಂತೆ ಇರಿದು ಕೊಂದಿದ್ದಾನೆ. ಸೌಮ್ಯ ನೋವು ತಾಳಲಾರದೆ ಚೀರಿಕೊಂಡಾಗ ಅಕ್ಕ ಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಆದರೆ, ನೆರವು ಸಿಗುವಷ್ಟರಲ್ಲಿ ಆಕೆ ಪ್ರಾಣಪಕ್ಷಿ ಹಾರಿ ಹೋಗಿವೆ.
ಅಪ್ಪ ಅಮ್ಮನ ಜಗಳದಿಂದಾಗಿ ಈ ದಂಪತಿಯ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ. ಸೌಮ್ಯ ಅವರನ್ನು ಕೊಲ್ಲಲು ಶೀಲದ ಬಗ್ಗೆ ಇದ್ದ ಶಂಕೆ ಕಾರಣ ಎಂದು ನವೀನ್ ಹೇಳುತ್ತಾನಾದರೂ ಇಬ್ಬರ ನಡುವೆ ಜಗಳ ಹೆಚ್ಚಾಗಲು ಮತ್ತೊಂದು ಕಾರಣವೂ ಇತ್ತು. ನವೀನ್ ಕೆಲ ಕಾಲದಿಂದ ಸರಿಯಾದ ಉದ್ಯೋಗವಿಲ್ಲದೆ ಸಾಲ ಮಾಡಿಕೊಂಡು ತಿರುಗಾಡುತ್ತಿದ್ದ. ಮನೆಯಲ್ಲಿ ಪತ್ನಿ ಈ ಬಗ್ಗೆ ಪ್ರಶ್ನಿಸಿದಾಗ ಎಗರಿ ಬೀಳುತ್ತಿದ್ದ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸಂಸಾರ ತೂಗಿಸುತ್ತಿದ್ದ ಸೌಮ್ಯಳ ಬಗ್ಗೆ ಅವನಿಗೆ ಕೋಪ,ಹತಾಶೆಯಿತ್ತು.
ಬುಧವಾರ ಕೂಡಾ ಹಣ ಕೇಳಿದ ನವೀನ್ ಗೆ ಸೌಮ್ಯ ಕೆಲಸಕ್ಕೆ ಹೋಗು ಎಂದಿದ್ದಾಳೆ. ಸಿಟ್ಟಿಗೆದ್ದ ನವೀನ್ ಜಗಳವಾಡಿಕೊಂಡು ಆಕೆಯನ್ನು ಇರಿದು ಕೊಂದಿದ್ದಾನೆ. ಸದ್ಯ ಮಂಡಿ ಪೊಲೀಸ್ ಠಾಣೆಯಲ್ಲಿ ನವೀನ್ ವಿಚಾರಣೆ ನಡೆದಿದೆ. ಉಳಿದಂತೆ ಉಡುಪಿ, ಕೋಲಾರ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ಕವರೇಜ್ ಮುಂದೆ ಓದಿ

ಕರ್ನಾಟಕ ಕ್ರೈಂ ಸುದ್ದಿಗಳ ಸಂಗ್ರಹ
ಬಾಗೇಪಲ್ಲಿ: ಬಾಲಕಿ ಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ 21ನೆ ವಾರ್ಡ್ ನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನಾಗಮಲ್ಲಿಖಾರ್ಜುನ ರೆಡ್ಡಿ ಎಂಬವರ ಪುತ್ರಿ ಪಾವನಿ(13) ಎಂದು ಗುರುತಿಸಲಾಗಿದೆ. ತಂದೆ, ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ಬಂದಿದೆ.
ಮೃತಳ ತಾಯಿ ಗೂಳೂರಿನಲ್ಲಿ ಅಂಗಡಿ ಇಟ್ಟುಕೊಂಡಿದ್ದು, ತಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುಸತ್ತಿದ್ದಾರೆ. ಪ್ರತಿ ದಿನದಂತೆ ತಂದೆ ಮತ್ತು ತಾಯಿ ರಾತ್ರಿ 8:30 ಸುಮಾರಿಗೆ ಮನೆ ಬಾಗಿಲು ತೆಗೆಯು ವಂತೆ ಕೂಗಿದಾಗ ಶಬ್ದ ಬಾರದಿದ್ದನ್ನು ಕಂಡು ಬಾಗಿಲು ತೆರೆದು ಒಳ ಹೋಗಿ ನೋಡಿದಾಗ ಮಗಳು ಹಗ್ಗದಲ್ಲಿ ನೇತಾಡುತ್ತಿರುವುದು ಕಂಡು ಬಂತು ಎನ್ನಲಾಗಿದೆ.
ಮಣಿಪಾಲ: ವರದಕ್ಷಿಣೆ ಕಿರುಕುಳ ಆತ್ಮಹತ್ಯೆ
ಮಣಿಪಾಲ: ಪಿರ್ಯಾದಿ ಅಬ್ದುಲ್ ರೆಹಮಾನ್ ಎಂ.ಇ (58) ವಾಸ: ಇಗ್ಲೋಡ್ಲು ಗ್ರಾಮ, ಮಾದಾಪುರ, ಸೋಮವಾರ ಪೇಟೆ ತಾಲೂಕು, ಕೊಡಗು ಜಿಲ್ಲೆ. ಎಂಬವರ ಮಗಳಾದ ತಾಹಿರಾ ಬಾನು ಈಕೆಯನ್ನು ಸುಮಾರು 13 ವರ್ಷಗಳ ಹಿಂದೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕರಂಬಳ್ಳಿ ಜನತಾ ಕಾಲೋನಿಯ ನಿವಾಸಿ ಮಹಮ್ಮದ್ ಹನೀಫ್, ವಾಸ: ನಂ. 1-115, ಜನತಾ ಕಾಲೋನಿ, ಕರಂಬಳ್ಳಿ, ಉಡುಪಿ ತಾಲೂಕು ಎಂಬವರೊಂದಿಗೆ ಮಸೀದಿಯ ಮುಖಾಂತರ ವಿವಾಹ ಮಾಡಿಕೊಡಲಾಗಿತ್ತು.
ಮದುವೆಯ ನಂತರ ಹನೀಫನು ವರದಕ್ಷಿಣೆಗಾಗಿ ನನ್ನ ಮಗಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಹಾಗೂ ಕಿರುಕುಳ ನೀಡುತ್ತಿದ್ದನು. ಕೆಲವು ಬಾರಿ ಅವನ ಹಣಕಾಸಿನ ಬೇಡಿಕೆಯನ್ನು ತಕ್ಕ ಮಟ್ಟಿಗೆ ಈಡೇರಿಸಿ ಗಂಡ ಹೆಂಡತಿಯನ್ನು ರಾಜಿ ಮಾಡಿಸಿ ಅವರ ಮನೆಯಲ್ಲಿ ಬಿಟ್ಟು ಬಂದಿದ್ದು, ಆ ಮೇಲೆ ಇದೆ ತರಹ ಜಗಳ ಪುನರ್ವರ್ತನೆ ಮಾಡಿರುತ್ತಾರೆ .
ಪಿರ್ಯಾದಿದಾರರಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿಸಿರುತ್ತಾಳೆ. ನನ್ನ ಮಗಳ ಈ ಆತ್ಮಹತ್ಯೆಯ ಬಗ್ಗೆ ನಮಗೆ ಸಂಶಯವಿದ್ದು, ಮಹಮ್ಮದ್ ಹನೀಫನ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಅಬ್ದುಲ್ ರೆಹಮಾನ್ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2014 ಕಲಂ 498(ಎ)306 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹೊಸಮನೆ ಠಾಣೆ ಭದ್ರಾವತಿ ಕಳ್ಳತನ ಪ್ರಕರಣ
ಹೊಸಮನೆ ಠಾಣೆ ಭದ್ರಾವತಿ ಕಳ್ಳತನ ಪ್ರಕರಣ: ಪಿರ್ಯಾದಿ ಬೆಟ್ಟೇ ಗೌಡ ಮಾವಿನ ಕೆರೆ ಕಾಲೋನಿ ಇವರ ಜಮೀನಿನಲ್ಲಿ 1 ಬೀಟೆ ಮರ ಹಾಗೂ 1 ಸಾಗೋನಿ ಮರವನ್ನು ಯಾರೋ ಕಳ್ಳರು ಕಡಿದುಕೊಂಡು ಹೋಗಿರುತ್ತಾರೆ.
ನ್ಯೂಟೌನ್ ಠಾಣೆ ಭದ್ರಾವತಿ ಕಳ್ಳತನ: ಪಿ.ಎಸ್.ಐ ಎನ್.ಟಿ ಪಿ.ಎಸ್ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಹೊಸೂರು ಸಿದ್ದಾಪುರದಲ್ಲಿರುವ ಆರೋಪಿಯ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ 23,595 ಬೆಲೆ ಬೀಟೆ ನಾಟವನ್ನು ಹಾಗೂ ಆರೋಪಿ ಸಯ್ಯೊಬ್ ಹೊಸೂರು ಸಿದ್ದಾಪುರ ಇತರೆ 2 ಜನರನ್ನು ವಶ ಪಡಿಸಿಕೊಂಡು ಮುಂದಿನಕ್ರಮ ಕೈ ಗೊಂಡಿದೆ.
ಚಳ್ಳಕೆರೆ: ಅಸ್ವಾಭಾವಿಕ ಮರಣ ಪ್ರಕರಣ
ಅನಾರೋಗ್ಯ, ನೇಣು ಹಾಕಿಕೊಂಡು ವ್ಯಕ್ತಿ ಸಾವು: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಿಕ್ಕಹಳ್ಳಿ ಗ್ರಾಮದಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ. ಗ್ರಾಮದ ಸಿದ್ದಾರೆಡ್ಡಿ (34) ಎಂಬುವವರು ಸುಮಾರು ಒಂದೂವರೆ ವರ್ಷದಿಂದ ಹೊಟ್ಟೆನೋವಿನ ಬಾಧೆಯಿಂದ ನರಳುತ್ತಿದ್ದು ಆಸ್ಪತ್ರೆಗಳಿಗೆ ತೋರಿಸಿಕೊಂಡರೂ ಗುಣಮುಖರಾಗಿರಲಿಲ್ಲ ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನಿನ್ನೆ ಬೆಳಿಗ್ಗೆ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಎಂದು ದೂರು ಇದ್ದ ಮೇರೆಗೆ ತಳಕು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.


Click it and Unblock the Notifications
