ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 16ರಂದು ದೇಶವ್ಯಾಪಿ ಪ್ರತಿಭಟನೆಗೆ ಸಿಪಿಐಎಂ ಕರೆ

|
Google Oneindia Kannada News

ಬೆಂಗಳೂರು, ಜೂನ್ 14 : ಸಿಪಿಐಎಂ ದೇಶವ್ಯಾಪ್ತಿ ಪ್ರತಿಭಟನೆಗೆ ಕರೆ ನೀಡಿದೆ. ಕೋವಿಡ್ - 19 ನಿಯಂತ್ರಣ ಲಾಕ್‌ ಡೌನ್ ಸಂತ್ರಸ್ತರಿಗೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದೆ.

Recommended Video

ಪರೋಟ ಮೇಲೆ ಮಾತ್ರ 18% GST , ರೂಟ್ಟಿ ಮೇಲೆ 5% ಮಾತ್ರ | Oneindia Kannada

ಜೂನ್ 16ರ ಮಂಗಳವಾರ ದೇಶವ್ಯಾಪ್ತಿ ಪ್ರತಿಭಟನೆಗೆ ಸಿಪಿಐಎಂ ಕರೆ ಕೊಟ್ಟಿದೆ. ಪ್ರತಿಭಟನೆ ವೇಳೆ ಸಾಮಾಜಿಕ ಅಂತರವನ್ನು ಕಾಪಾಡೋಣ, ಕೋವಿಡ್ - 19 ಹಿಮ್ಮೆಟ್ಟಿಸೋಣ ಎಂದು ಪಕ್ಷ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರೈತ - ಕೂಲಿಕಾರರ ಮೇಲೆ ಸರ್ಕಾರದ ದಾಳಿ: ಸಿಪಿಐಎಂ ಖಂಡನೆ ರೈತ - ಕೂಲಿಕಾರರ ಮೇಲೆ ಸರ್ಕಾರದ ದಾಳಿ: ಸಿಪಿಐಎಂ ಖಂಡನೆ

CPIM Announces All India Protest On June 16

ಬೆಂಗಳೂರು ನಗರದಲ್ಲಿ ವಲಯ ಮತ್ತು ವಾರ್ಡ್ ಕಚೇರಿಗಳ ಬಳಿ ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆ ತನಕ ಪ್ರತಿಭಟನೆ ನಡೆಯಲಿದೆ. ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಮಧ್ಯಾಹ್ನ 12 ರಿಂದ 1 ಗಂಟೆಯ ತನಕ ಪ್ರತಿಭಟನೆ ನಡೆಯಲಿದೆ. ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಬಳಿಯೂ ಪ್ರತಿಭಟನೆ ನಡೆಯಲಿದೆ.

ಅಮೆರಿಕ ಕಂಪನಿಗೆ ಭೂ ಮಂಜೂರು, ಯಡಿಯೂರಪ್ಪ ವಿರುದ್ಧ ಸಿಪಿಐಎಂ ಕಿಡಿ ಅಮೆರಿಕ ಕಂಪನಿಗೆ ಭೂ ಮಂಜೂರು, ಯಡಿಯೂರಪ್ಪ ವಿರುದ್ಧ ಸಿಪಿಐಎಂ ಕಿಡಿ

ಸಿಪಿಐಎಂ ಬೇಡಿಕೆಗಳು

* ಲಾಕ್ ಡೌನ್ ಕಾಲಾವಧಿ ಪೂರ್ಣ ವೇತನಕ್ಕಾಗಿ, ಕೆಲಸ ನಿರಾಕರಣೆ ತಡೆಗಾಗಿ, ಕೆಲಸದ ಅವಧಿ ಹೆಚ್ಚಳ ವಾಪಸ್ಸಿಗಾಗಿ

* ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೆ 6 ತಿಂಗಳು ರೂ. 7,500 ನೇರ ನಗದು ವರ್ಗಾವಣೆಗಾಗಿ

ಮೋದಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಮೋದಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

* ಎಲ್ಲರಿಗೂ ಮುಂದಿನ 6 ತಿಂಗಳು ಮಾಸಿಕ ತಲಾ 10 ಕೆಜಿ ಆಹಾರ ಧಾನ್ಯಕ್ಕಾಗಿ

* 200 ದಿನಗಳಿಗೆ ಉದ್ಯೋಗ ಖಾತ್ರಿ ಕೆಲಸದ ಹೆಚ್ಚಳಕ್ಕಾಗಿ

* ಪರಿಹಾರ ಸಿಗದ ಅಸಂಘಟಿತ ಕಾರ್ಮಿಕರಿಗೆ ಬಿಬಿಎಂಪಿ ವಿವೇಚನಾ ನಿಧಿಯಿಂದ ಪರಿಹಾರಕ್ಕಾಗಿ

* ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು, ಸಾರ್ವಜನಿಕ ವಲಯದ ಖಾಸಗೀಕರಣವನ್ನು ಮತ್ತು ಕಾರ್ಮಿಕ ಕಾನೂನುಗಳ ರದ್ಧತಿಯನ್ನು ನಿಲ್ಲಿಸಬೇಕು.

* ಕರ್ನಾಟಕದಲ್ಲಿ ಆರೋಗ್ಯ ಪರಿಕರಗಳು, ವೆಂಟಿಲೇಟರ್ಸ್, ಅಗತ್ಯ ಔಷಧಗಳ ತೀವ್ರ ಕೊರತೆ ಇದ್ದು, ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ರಾಜ್ಯಕ್ಕೆ ಪೂರೈಸಬೇಕು.

English summary
The CPIM called for all India protest on June 16, 2020 urging composition to labour who are in trouble after the lock down announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X