• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ; ಲಸಿಕೆ ನೀಡುವುದರಲ್ಲಿ ಹಿಂದೆ ಬಿದ್ದ 9 ಜಿಲ್ಲೆಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03; ಕರ್ನಾಟಕದಲ್ಲಿ ಕೋವಿಡ್ ಲಸಿಕೆ ನೀಡುವಲ್ಲಿ ಕೆಲವು ಜಿಲ್ಲೆಗಳಲ್ಲಿ ಶೇ 50ರಷ್ಟು ಸಹ ಗುರಿ ಸಾಧನೆ ಸಾಧ್ಯವಾಗಿಲ್ಲ. ಸಂಭಾವ್ಯ ಕೋವಿಡ್ 3ನೇ ಅಲೆ ಹಿನ್ನಲೆಯಲ್ಲಿ ಸರ್ಕಾರ ಕೋವಿಡ್ ಲಸಿಕೆ ನೀಡುವ ವೇಗ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಕೋವಿಡ್ ಲಸಿಕೆ ವಿತರಣೆ ಹಿನ್ನಲೆಯಲ್ಲಿ 9 ಜಿಲ್ಲೆಗಳು ಹಿಂದೆ ಬಿದ್ದಿವೆ. ಲಸಿಕಾ ಅಭಿಯಾನವನ್ನು ಆರಂಭಿಸಿ ಏಳು ತಿಂಗಳು ಕಳೆದರೂ ಈ ಜಿಲ್ಲೆಗಳಲ್ಲಿ ಶೇ 50ರಷ್ಟು ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಲಸಿಕೆ ಗುರಿ ತಲುಪದ ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಹೊಸ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆ ಇದೆ.

ಭಾರತದಲ್ಲಿ ಒಂದೇ ದಿನ 64 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾವೈರಸ್ ಲಸಿಕೆ ಭಾರತದಲ್ಲಿ ಒಂದೇ ದಿನ 64 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾವೈರಸ್ ಲಸಿಕೆ

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಇದುವರೆಗೆ ಶೇ 50.01ರಷ್ಟು ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಶೇ 16.2ರಷ್ಟು ಜನರು ಮಾತ್ರ ಎರಡನೇ ಡೋಸ್ ಪಡೆದಿದ್ದಾರೆ. 4.38 ಕೋಟಿ ಡೋಸ್ ಲಸಿಕೆಯನ್ನು ಇದುವರೆಗೂ ಹಂಚಿಕೆ ವಿತರಣೆ ಮಾಡಲಾಗಿದೆ. 3.30 ಕೋಟಿ ಜನರು ಮೊದಲ ಡೋಸ್, 1.07 ಕೋಟಿ ಜನರು 2ನೇ ಡೋಸ್ ಪಡೆದಿದ್ದಾರೆ.

ಲಸಿಕಾ ಉತ್ಸವ ಮೊದಲ ದಿನವೇ 12 ಲಕ್ಷ ಕೋವಿಡ್ ಲಸಿಕೆ ಲಸಿಕಾ ಉತ್ಸವ ಮೊದಲ ದಿನವೇ 12 ಲಕ್ಷ ಕೋವಿಡ್ ಲಸಿಕೆ

ಸೆಪ್ಟೆಂಬರ್ 2ರ ಗುರುವಾರ ರಾಜ್ಯದಲ್ಲಿ 3,39,683 ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 72,920 ಡೋಸ್, ಬೆಳಗಾವಿಯಲ್ಲಿ 30,968 ಡೋಸ್, ದಕ್ಷಿಣ ಕನ್ನಡದಲ್ಲಿ 19,709 ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಮಕ್ಕಳಿಗೆ ಲಸಿಕೆ ನೀಡಲು 9 ತಿಂಗಳ ಕಾಲಾವಧಿ ಅವಶ್ಯವಿದೆ; ಏಮ್ಸ್‌ ನಿರ್ದೇಶಕಮಕ್ಕಳಿಗೆ ಲಸಿಕೆ ನೀಡಲು 9 ತಿಂಗಳ ಕಾಲಾವಧಿ ಅವಶ್ಯವಿದೆ; ಏಮ್ಸ್‌ ನಿರ್ದೇಶಕ

ಯಾವ-ಯಾವ ಜಿಲ್ಲೆಗಳು?

ಯಾವ-ಯಾವ ಜಿಲ್ಲೆಗಳು?

ಕಲಬುರಗಿ, ಹಾವೇರಿ ಸೇರಿದಂತೆ 9 ಜಿಲ್ಲೆಗಳು ಕೋವಿಡ್ ಲಸಿಕೆಯಲ್ಲಿ ಹಿಂದುಳಿದಿವೆ. ಕೋವಿಡ್ 3ನೇ ಅಲೆ ಭೀತಿ ಹಿನ್ನಲೆಯಲ್ಲಿ 2 ವಾರಗಳಿಂದ ಲಸಿಕೆ ನೀಡುವ ವೇಗೆ ಹೆಚ್ಚಿಸಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿ ಬುಧವಾರ 15 ಲಕ್ಷ, ಉಳಿದ ದಿನ ಲಕ್ಷ ಡೋಸ್‌ಗಳನ್ನು ವಿತರಣೆ ಮಾಡುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪ್ರತಿದಿನ ಹೆಚ್ಚು ಲಸಿಕೆ ನೀಡುತ್ತಿದ್ದು, ಲಸಿಕೆ ನೀಡುವ ಕೆಲವು ಕೇಂದ್ರಗಳ ಸಮಯವನ್ನು ಸಹ ವಿಸ್ತರಣೆ ಮಾಡಲಾಗಿದೆ.

21 ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಅಧಿಕ ಸಾಧನೆ

21 ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಅಧಿಕ ಸಾಧನೆ

ಇದುವರೆಗೂ ಕಲಬುರಗಿಯಲ್ಲಿ ಶೇ 36.53, ರಾಯಚೂರಿನಲ್ಲಿ ಶೇ 38.60, ಯಾದಗಿರಿಯಲ್ಲಿ ಶೇ 41.74, ವಿಜಯಪುರದಲ್ಲಿ ಶೇ 43.24, ಬಳ್ಳಾರಿಯಲ್ಲಿ ಶೇ 44.95, ಹಾವೇರಿಯಲ್ಲಿ ಶೇ 46.45, ಕೊಪ್ಪಳದಲ್ಲಿ ಶೇ 47.79, ಬಾಲಕೋಟೆಯಲ್ಲಿ ಶೇ 48.62 ಮತ್ತು ಬೀದರ್‌ನಲ್ಲಿ ಶೇ 48.62 ರಷ್ಟು ಲಸಿಕೆಯನ್ನು ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಹೆಚ್ಚಿನ ಸಾಧನೆ ಮಾಡಲಾಗಿದೆ.

4 ಜಿಲ್ಲೆಗಳಲ್ಲಿ ಉತ್ತಮ ಸಾಧನೆ

4 ಜಿಲ್ಲೆಗಳಲ್ಲಿ ಉತ್ತಮ ಸಾಧನೆ

ಕೋವಿಡ್ ವಾರ್ ರೂಂ ಮಾಹಿತಿ ಅನ್ವಯ ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಶೇ 70ಕ್ಕಿಂತ ಅಧಿಕ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಉಡುಪಿಯಲ್ಲಿ ಶೇ 78.72, ಕೊಡಗು ಶೇ 77.38, ಬೆಂಗಳೂರು ಶೇ 75.92 ಹಾಗೂ ರಾಮನಗರದಲ್ಲಿ ಶೇ 72.99ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಲಸಿಕಾ ಅಭಿಯಾನವನ್ನು ಆರೋಗ್ಯ ಇಲಾಖೆ ಚುರುಕುಗೊಳಿಸಿದ್ದು, ಶೇ 100ರಷ್ಟು ಗುರಿ ತಲುಪಲು ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ.

ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ

ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ

ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಜನಸಂಖ್ಯೆಯ ಆಧಾರದ ಮೇಲೆ ಲಸಿಕೆಯನ್ನು ಜಿಲ್ಲೆಗೆ ಹಂಚಿಕೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಜಾಗೃತಿ ಕೊರತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ ಲಸಿಕಾ ಮೇಳವನ್ನು ಆಯೋಜಿಸಲಾಗುತ್ತಿದೆ.

ಲಸಿಕೆ ನೀಡುವುದರಲ್ಲಿ ಯಾವ ಸ್ಥಾನ?

ಕೋವಿಡ್ ಲಸಿಕೆ ನೀಡುವ ಉದ್ದೇಶದಿಂದ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಲಸಿಕೆ ನೀಡುವ ಗುರಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ? ಎಂಬ ಮಾಹಿತಿ ಇಲ್ಲಿದೆ.

   ಆಕ್ಸಿಜನ್‌ ಪೂರೈಕೆ ಮಾಡಲಾಗದವರು ಈಗ ರೇಶನ್‌,ಪೆನ್ಷನ್‌ ಕೊಡಲ್ಲ ಅಂತಿದ್ದಾರೆ | D K Shivakumar | Oneindia Kannada
   English summary
   After the 7 months of vaccination programme launched in Karnataka 9 districts of the state yet to reach 50 per cent.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X