ರಾಜ್ಯದಲ್ಲಿ ಐಸಿಯುನಲ್ಲಿ ಕೋವಿಡ್ ರೋಗಿಗಳ ಸಾವಿನ ಪ್ರಮಾಣ ಶೇ.8.72ಕ್ಕೆ ಏರಿಕೆ

ಬೆಂಗಳೂರು, ಏಪ್ರಿಲ್ 22: ಐಸಿಯುನಲ್ಲಿ ಕೋವಿಡ್ ರೋಗಿಗಳ ಸಾವನ್ನಪ್ಪುತ್ತಿರುವವರ ಪ್ರಮಾಣ ಶೇ.8.72ಕ್ಕೆ ಏರಿಕೆಯಾಗಿದೆ.

ಕೇವಲ 15 ದಿನಗಳ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿದೆ, ಜತೆಗೆ ಮೃತಪಡುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗುತ್ತಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.

28-30 ವರ್ಷದವರೂ ಕೂಡ ಐಸಿಯುವಿಗೆ ದಾಖಲಾಗುತ್ತಿದ್ದಾರೆ. ಜ್ವರ ಬಂದ ಕೂಡಲೇ ಜನರು ಆಸ್ಪತ್ರೆಗೆ ದಾಖಲಾಗಬಾರದು. ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಹೆಚ್ಚು ಕೆಮ್ಮು, ಉಸಿರಾಟ ಸಮಸ್ಯೆ ಎದುರಾದರೆ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು ಎಂದು ತಿಳಿಸಿದ್ದಾರೆ.

Covid Mortality In Karnataka ICUs Touch 8.72% In Fortnight

ಇನ್ನು ಬೆಂಗಳೂರಿನಲ್ಲಿ ಕಳೆದ 15 ದಿನಗಳಲ್ಲಿ 261 ಮಂದಿ ಐಸಿಯುವಿಗೆ ದಾಖಲಾಗಿದ್ದು, ಇದರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 11 ಮಂದಿ ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದವರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ಲಸಿಕೆ ಪಡೆದ ಹಿರಿಯ ನಾಗರೀಕರ ಮೇಲೆ ಕೊರೊನಾ ಪರಿಣಾಮ ಅಷ್ಟಾಗಿ ಬೀರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಐಸಿಯುವಿದೆ 40-50 ವರ್ಷದೊಳಗಿನ ಹೆಚ್ಚಾಗಿ ದಾಖಲಾಗುತ್ತಿದ್ದಾರೆಂದು ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ 15 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾದ 1,239 ರೋಗಿಗಳ ಪೈಕಿ ಐಸಿಯುವಿನಲ್ಲಿ 108 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

1,239 ರೋಗಿಗಳ ಶೇ. 39.95 (495) ಮಂದಿ ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದು, ಶೇ.6.05 (744) ಮಂದಿ ಯಾವುದೇ ದೀರ್ಘಕಾಲಿಕ ರೋಗದಿಂದ ಬಳಲುತ್ತಿಲ್ಲ. ಸಾವನ್ನಪ್ಪಿರುವ 108 ಮಂದಿಯಲ್ಲಿ 61 ಮಂದಿ ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದರು ಎಂದು ವರದಿಗಳು ತಿಳಿಸಿವೆ.

ಬೀದರ್ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ಐಸಿಯುವಿನಲ್ಲಿ 84 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 21 ಮಂದಿ ದೀರ್ಘಕಾಲಿಕ ರೋಗದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+