ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೊರೊನಾವೈರಸ್ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹೇಗೆ?

|
Google Oneindia Kannada News

ಬೆಂಗಳೂರು, ಮೇ 23: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಮಕ್ಕಳನ್ನು ರಕ್ಷಿಸುವುದಕ್ಕೆ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ಕೊವಿಡ್-19 ಮೊದಲ ಅಲೆಗೆ ಹೋಲಿಸಿದರೆ 2ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗಲುವಿಕೆ ಪ್ರಮಾಣ ಇಮ್ಮಡಿಯಾಗಿದೆ.
ಕೊರೊನಾವೈರಸ್ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ಮಕ್ಕಳ ತಜ್ಞ ಡಾ. ದೇವಿ ಶೆಟ್ಟಿ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮಕ್ಕಳಿಗಾಗಿ ಕೊವಿಡ್-19 ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಕೊರೊನಾದಿಂದ ಅತಿಹೆಚ್ಚು ಜನರು ಸಾವು!ಕರ್ನಾಟಕದಲ್ಲಿ ಮೊದಲ ಬಾರಿಗೆ ಕೊರೊನಾದಿಂದ ಅತಿಹೆಚ್ಚು ಜನರು ಸಾವು!

ರಾಜ್ಯದಲ್ಲಿ ಕಳೆದ ಮಾರ್ಚ್ 18ರಿಂದ ಇತ್ತೀಚಿನ ಎರಡು ತಿಂಗಳಿನಲ್ಲಿ 0-9 ವಯೋಮಾನದ ಶೇ.143ರಷ್ಟು ಮಕ್ಕಳಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 10-19 ವಯೋಮಾನದ ಮಕ್ಕಳಲ್ಲಿ ಶೇ.160ರಷ್ಟು ಕೊವಿಡ್-19 ಸೋಂಕು ದೃಢಪಟ್ಟಿದೆ.

Covid-19 3rd Wave: Karnataka Govt Set-Up Special Coronavirus Care Centers For Childrens In District Level

ಕೊರೊನಾವೈರಸ್ 3ನೇ ಅಲೆಗೆ ಮಕ್ಕಳೇ ಟಾರ್ಗೆಟ್!

ಕೊರೊನಾವೈರಸ್ 3ನೇ ಅಲೆಗೆ ಮಕ್ಕಳೇ ಟಾರ್ಗೆಟ್!

ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ಯಾರಿಗೆ ತಗುಲುವುದು ಎಂದು ಪತ್ತೆ ಮಾಡಬೇಕಿದೆ. ವೃದ್ಧರು ಹಾಗೂ ಮಧ್ಯಮ ವಯಸ್ಕರಿಗೆ ಈಗಾಗಲೇ ಕೊರೊನಾವೈರಸ್ ಸೋಂಕು ತಗುಲಿದೆ. ಈ ವಯಸ್ಸಿನ ಮತ್ತೊಂದು ಗುಂಪು ಕೊವಿಡ್-19 ಲಸಿಕೆಯನ್ನು ಪಡೆದುಕೊಂಡಿದೆ. ಹೀಗಿರುವಾಗ ಮುಂದಿನ ಕೊರೊನಾ ಸೋಂಕಿನ ಅಲೆಗೆ ಮಕ್ಕಳೇ ಮುಖ್ಯ ಗುರಿಯಾಗುತ್ತದೆ. ಮಕ್ಕಳು ಮತ್ತು 18 ವರ್ಷದೊಳಗಿನವರಿಗೆ ಮೂರನೇ ಅಲೆಯಿಂದ ಅಪಾಯ ಹೆಚ್ಚಾಗಿರುತ್ತದೆ. ಆದರೆ ಈ ವಯೋಮಾನದಲ್ಲಿ ಇರುವವರಿಗೆ ಕೊರೊನಾವೈರಸ್ ಸೋಂಕಿನ ಯಾವ ರೀತಿ ಲಕ್ಷಣಗಳು ಗೋಚರಿಸುತ್ತವೆ ಎನ್ನುವುದು ಈವರೆಗೂ ಸ್ಪಷ್ಟವಾಗಿಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಗಿರಿಧರ್ ಬಾಬು ತಿಳಿಸಿದ್ದಾರೆ.

ಕೊವಿಡ್-19 ನಡುವೆ ಬಹು-ಅಂಗಾಂಗ ಸಮಸ್ಯೆ

ಕೊವಿಡ್-19 ನಡುವೆ ಬಹು-ಅಂಗಾಂಗ ಸಮಸ್ಯೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವ ರೀತಿ ಲಕ್ಷಣಗಳು ಗೋಚರಿಸುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಕೆಲವು ಸೋಂಕಿತ ಮಕ್ಕಳಲ್ಲಿ ಕವಾಸಕಿ ರೋಗ ರೀತಿಯ ಬಹು-ಅಂಗಾಂಗ ಸಮಸ್ಯೆಗಳು ಗೋಚರಿಸುವ ಸಾಧ್ಯತೆಯಿದೆ. ಆದರೆ ಎಷ್ಟು ಸಂಖ್ಯೆಯಲ್ಲಿ ಮಕ್ಕಳಿಗೆ MIS-C ಅಪಾಯ ಎದುರಾಗುವುದು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಈ ಸಂದರ್ಭದಲ್ಲಿ ಮಕ್ಕಳ ತಜ್ಞರು ಮತ್ತು ಮಕ್ಕಳ ಚಿಕಿತ್ಸೆಗೆ ಅಗತ್ಯವಾಗ ವೈದ್ಯಕೀಯ ಸೌಕರ್ಯಗಳನ್ನು ಅಣಿಗೊಳಿಸಬೇಕಿದೆ ಎಂದು ಡಾ. ಗಿರಿಧರ್ ಬಾಬು ಹೇಳಿದ್ದಾರೆ.

ಕರ್ನಾಟಕದಲ್ಲಿ ಮಕ್ಕಳಿಗೆ ಕೊರೊನಾವೈರಸ್ ಅಪಾಯ

ಕರ್ನಾಟಕದಲ್ಲಿ ಮಕ್ಕಳಿಗೆ ಕೊರೊನಾವೈರಸ್ ಅಪಾಯ

ಮಾರ್ಚ್ 18 ರಿಂದ ಮೇ 18ರವರೆಗಿನ ವಾರ್ ರೂಮ್ ಅಂಕಿ-ಅಂಶಗಳ ಪ್ರಕಾರ, 0-9 ವರ್ಷದ 39,846 ಮಕ್ಕಳಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 10-19 ವರ್ಷದ 1,05,044 ಮಕ್ಕಳಿಗೆ ಕೊವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಸಾಂಕ್ರಾಮಿಕ ಪಿಡುಗು ಆರಂಭಗೊಂಡು ಇತ್ತೀಚಿನ ಮಾರ್ಚ್ ತಿಂಗಳವರೆಗೆ 0-9 ವರ್ಷದ 27,841 ಹಾಗೂ 10-19 ವರ್ಷದ 65,551 ಮಕ್ಕಳಿಗೆ ಕೊರೊನಾವೈರಸ್ ಸೋಂಕು ತಗುಲಿತ್ತು.

ರಾಜ್ಯದಲ್ಲಿ ಕೊರೊನಾಗೆ ಬಲಿಯಾದ ಮಕ್ಕಳೆಷ್ಟು?

ರಾಜ್ಯದಲ್ಲಿ ಕೊರೊನಾಗೆ ಬಲಿಯಾದ ಮಕ್ಕಳೆಷ್ಟು?

ಕರ್ನಾಟಕದಲ್ಲಿ ಕೊವಿಡ್-19 ಸೋಂಕಿನಿಂದ ಮೃತಪಟ್ಟ ಮಕ್ಕಳ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದೆ. ಸಾಂಕ್ರಾಮಿಕ ಪಿಡುಗು ಆರಂಭವಾಗಿ 2021 ಮಾರ್ಚ್ 18ರವರೆಗೆ 28 ಮಕ್ಕಳು ಮೃತಪಟ್ಟಿದ್ದು, ಅಲ್ಲಿಂದ ಮೇ ತಿಂಗಳವರೆಗೆ 15 ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟ ಮಕ್ಕಳ ಸಂಖ್ಯೆ 46 ರಿಂದ 62ಕ್ಕೆ ಏರಿಕೆಯಾಗಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆಯಲ್ಲಿ ಮಕ್ಕಳ ಸಾವಿನ ಸಂಖ್ಯೆ ಕೂಡ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

30 ಜಿಲ್ಲೆಗಳಲ್ಲೂ ಮಕ್ಕಳಿಗಾಗಿ ಕೊರೊನಾವೈರಸ್ ಆರೈಕೆ ಕೇಂದ್ರ

30 ಜಿಲ್ಲೆಗಳಲ್ಲೂ ಮಕ್ಕಳಿಗಾಗಿ ಕೊರೊನಾವೈರಸ್ ಆರೈಕೆ ಕೇಂದ್ರ

ಕರ್ನಾಟಕದಲ್ಲಿ ಮಕ್ಕಳನ್ನು ಕೊರೊನಾವೈರಸ್ ಸೋಂಕಿನಿಂದ ಪಾರು ಮಾಡುವುದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವುದು ಬೇಕಿಲ್ಲ. ಸೋಂಕು ಅಂಟಿಕೊಳ್ಳುವುದರಿಂದ ಮಕ್ಕಳನ್ನು ಹೇಗೆ ಪಾರು ಮಾಡಬೇಕು, ಸೋಂಕು ತಗುಲಿದ ಮಕ್ಕಳಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು. ಕೊರೊನಾವೈರಸ್ ಸೋಂಕಿನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳನ್ನು ಹೇಗೆ ಆರೈಕೆ ಮಾಡಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಕೊವಿಡ್-19 ಆರೈಕೆ ಕೇಂದ್ರಗಳನ್ನು ತೆರೆಯಲಾಗುವುದು. ಮುರಾರ್ಜಿ ದೇಸಾಯಿ ಶಾಲೆ, ರಾಣಿ ಚೆನ್ನಮ್ಮ ಶಾಲೆ ಮತ್ತು ಎನ್ ಜಿಓ ಸಹಕಾರದಿಂದ ಈ ಕಾರ್ಯವನ್ನು ಮಾಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

Recommended Video

lockdownನಲ್ಲಿ ಇಂದಿನಿಂದ ಆಚೆ ಬಂದರೆ ಅರೆಸ್ಟ್ | Oneindia Kannada
ದತ್ತು ಪಡೆಯುವುದಕ್ಕೆ ಕಾನೂನು ಪ್ರಕ್ರಿಯೆ ಕಡ್ಡಾಯ

ದತ್ತು ಪಡೆಯುವುದಕ್ಕೆ ಕಾನೂನು ಪ್ರಕ್ರಿಯೆ ಕಡ್ಡಾಯ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಕೊವಿಡ್-19 ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ದತ್ತು ಪಡೆದುಕೊಂಡು ಅವರನ್ನು ಬಾಲ ಕಾರ್ಮಿಕರನ್ನಾಗಿ ಮಾಡುವ ಹುನ್ನಾರ ನಡೆದಿದೆ. ಈ ತಿಳಿದು ಬಂದಲ್ಲಿ ಅಧಿಕೃತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ರಾಜ್ಯದ ಜಿಲ್ಲಾಧಿಕಾರಿಗಳಿಂದ ಕೊವಿಡ್-19 ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಕುರಿತು ದತ್ತಾಂಶ ನೀಡುವಂತೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಮಂಡಳಿ ಚೇರ್ ಮೆನ್ ಆಂಟೋನಿ ಸೆಬಾಸ್ಟಿಯನ್ ತಿಳಿಸಿದ್ದಾರೆ.

English summary
Covid-19 3rd Wave: Karnataka Govt Set-Up Special Coronavirus Care Centers For Childrens In District Level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X