ನ್ಯಾನೋ ಕಾರು ಪಲ್ಟಿ, ಸಾಫ್ಟ್​​ವೇರ್ ಇಂಜಿನಿಯರ್ ಸಾವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಹಾಸನ, ಜನವರಿ 12 : ನ್ಯಾನೋ ಕಾರು ಉರುಳಿ ಬಿದ್ದು ಸಾಫ್ಟ್​​ವೇರ್ ಇಂಜಿನಿಯರ್ ಇಬ್ಬರು ಮೃತಪಟ್ಟ ಘಟನೆ ಹಾಸನದಲ್ಲಿ ನಡೆದಿದೆ. ಅಪಘಾತದಲ್ಲಿ ಮಕ್ಕಳಿಬ್ಬರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತಪಟ್ಟವರನ್ನು ಉಡುಪಿ ಮೂಲದ ಅಶೋಕ ಪ್ರಭು (40), ಅಶೋಕ ಅವರ ಪತ್ನಿ ಅಶ್ವಿನಿ ಪ್ರಭು (35) ಎಂದು ಗುರುತಿಸಲಾಗಿದೆ. ಸ್ವಾಮಿ ಮತ್ತು ಆದರ್ಶ ಎಂಬ ಮಕ್ಕಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ತಾಯಿಯೇ ಹೆತ್ತ ಮಗುವನ್ನು ಕೊಂದಿದ್ದು ಯಾಕೆ?]

hassan road accident

ಮಂಗಳವಾರ ಬೆಳಗ್ಗೆ ಚಿಕ್ಕೋನಹಳ್ಳಿ ಗೇಟ್ ಸಮೀಪ ಈ ಅಪಘಾತ ಸಂಭವಿಸಿದೆ. ಅಶೋಕ ಪ್ರಭು ಅವರು ಕುಟುಂಬ ಸಮೇತ ಉಡುಪಿಯಿಂದ ಬೆಂಗಳೂರಿಗೆ ವಾಪಸ್ ಆಗುವಾಗ ನ್ಯಾನೋ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. [ಕೆರೆಗೆ ಉರುಳಿದ ಕಾರು, 7 ಟೋಯೋಟಾ ಉದ್ಯೋಗಿಗಳ ಸಾವು]

ಅಪಘಾತವನ್ನು ನೋಡಿದ ದಾರಿ ಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಮಕ್ಕಳನ್ನು ಹಿರೀಸಾವೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರೀಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ ಮೂಲದವರಾದ ಅಶೋಕ ಪ್ರಭು ಮತ್ತು ಅಶ್ವಿನಿ ಪ್ರಭು ಅವರು ಬೆಂಗಳೂರಿನಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನಾಗವಾರ ರಿಂಗ್ ರೋಡ್ ಬಳಿಯಲ್ಲಿ ವಾಸವಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A married couple died on the spot after Nano car overturned near Channarayapatna, Hassan on Tuesday. Ashok Prabhu (40) and Ashwini Prabhu (35). Traveling to Bengaluru fron Udupi. Their two children survived with minor injuries.
Please Wait while comments are loading...